ಪಲ್ಲೆಕೆಲೆ : ಅತಿಥೇಯ ಶ್ರೀಲಂಕಾ ತಂಡ ನೀಡಿರುವ 437 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿರುವ ಬಾಂಗ್ಲಾದೇಶ ತಂಡ 4ನೇ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡಿದ್ದು 177 ರನ್ಗಳಿಸಿದೆ.
3ನೇ ದಿನ 17ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಲಂಕಾ ನಾಲ್ಕನೇ ದಿನವಾದ ಇಂದು 190 ರನ್ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿಕೊಂಡು ಬಾಂಗ್ಲಾದೇಶಕ್ಕೆ 437ರನ್ಗಳ ಗುರಿ ನೀಡಿತು. ನಾಯಕ ಕರುಣರತ್ನೆ 66 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿದರು.
-
Bad light and a light drizzle has forced early stumps in Pallekele.#SLvBAN | #WTC21 | https://t.co/gHzrfH4EPq pic.twitter.com/o09RHyqIHo
— ICC (@ICC) May 2, 2021 " class="align-text-top noRightClick twitterSection" data="
">Bad light and a light drizzle has forced early stumps in Pallekele.#SLvBAN | #WTC21 | https://t.co/gHzrfH4EPq pic.twitter.com/o09RHyqIHo
— ICC (@ICC) May 2, 2021Bad light and a light drizzle has forced early stumps in Pallekele.#SLvBAN | #WTC21 | https://t.co/gHzrfH4EPq pic.twitter.com/o09RHyqIHo
— ICC (@ICC) May 2, 2021
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶದ ವೇಗದ ಆಟಕ್ಕೆ ಮುಂದಾಗಿ ಪ್ರಮುಖ 5 ವಿಕೆಟ್ ಕಳೆದುಕೊಂಡಿದೆ. ತಮೀಮ್ ಇಕ್ಬಾಲ್ 24, ಸೈಫ್ ಹಸನ್ 34, ನಜ್ಮುಲ್ ಹುಸೇನ್ 26, ಮೊಮಿನುಲ್ ಹಕ್ 32, ರಹೀಮ್ 40 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಇದೀಗ ಲಿಟನ್ ದಾಸ್(14) ಮತ್ತು ಮೆಹಿದಿ ಹಸನ್(4) ಕ್ರೀಸ್ನಲ್ಲಿದ್ದಾರೆ. ಬಾಂಗ್ಲಾದೇಶ ಗೆಲ್ಲಲು 260 ರನ್ಗಳ ಅಗತ್ಯವಿದೆ, ಲಂಕಾಗೆ 5 ವಿಕೆಟ್ ಬೇಕಾಗಿದೆ. ನಾಳೆ ಅಂತಿಮ ದಿನವಾಗಿದ್ದು, ಟೆಸ್ಟ್ ಪಂದ್ಯ ರೋಚಕ ಹಂತಕ್ಕೆ ತಲುಪಲಿದಿಯೇ ಎಂದು ಕಾದು ನೋಡಬೇಕಿದೆ. ಇದಕ್ಕೂ ಮೊದಲು ನಡೆದಿದ್ದ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿತ್ತು.
ಇದನ್ನು ಓದಿ:ಅಂದು ಆರ್ಡರ್ ಮಾಡಿದ್ದ ತ್ರೀಡಿ ಗ್ಲಾಸ್ ಕೆಲಸ ಮಾಡುತ್ತಿದೆ.. ರಾಯುಡು ಆಟಕ್ಕೆ ಸೆಹ್ವಾಗ್ ಮೆಚ್ಚುಗೆ