ಐಪಿಎಲ್ಗೆ ಇನ್ನೇನು ದಿನಗಣನೆ ಆರಂಭವಾಗಿದೆ. ವಿಶ್ವದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ ಕ್ರಿಕೆಟ್ ಲೀಗ್ಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಅಗ್ರಸ್ಥಾನದಲ್ಲಿದೆ. ಐಪಿಎಲ್ ಆಧಾರದಲ್ಲಿ ಬೇರೆ ದೇಶದ ಆಟಗಾರರು ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುತ್ತಾರೆ. ಭಾರತದಲ್ಲಿ ದೇಶಿಯ ಕ್ರೀಡೆಯಲ್ಲಿನ ಆಟದ ಜೊತೆಗೆ ಐಪಿಎಲ್ ಆಟದ ಆಧಾರದಲ್ಲಿ ಭಾರತ ತಂಡಕ್ಕೆ ಸೆಲೆಕ್ಷನ್ ನಡೆಯುತ್ತದೆ.
ಇದಲ್ಲದೇ ಭಾರತದಲ್ಲಿ ಐಪಿಎಲ್ ನಡೆಯುವ ಒಂದು ತಿಂಗಳು ಯಾವುದೇ ಅಂತಾರಾಷ್ಟ್ರೀಯ ದ್ವಿಪಕ್ಷೀಯ ಸರಣಿಗಳು ಆಯೋಜನೆ ಆಗುವುದಿಲ್ಲ. ಹೆಚ್ಚಿನ ಅಂತಾರಾಷ್ಟ್ರೀಯ ತಂಡದ ಎ ಗ್ರೇಡ್ ಬ್ಯಾಟರ್ ಮತ್ತು ಬೌಲರ್ಗಳು ಐಪಿಎಲ್‌ನಲ್ಲಿ ಆಡುತ್ತಿರುತ್ತಾರೆ. ಇಷ್ಟೊಂದು ಜನಪ್ರಿಯ ಆಟದಲ್ಲಿ ಭಾಗವಹಿಸುವ ಬಗ್ಗೆ ಬಾಬರ್ ಅಜಮ್ ಆಸಕ್ತಿ ತೋರದೇ ಬಿಗ್ಬ್ಯಾಷ್ ಲೀಗ್ ಆಡುವುದಾಗಿ ಹೇಳಿಕೊಂಡಿದ್ದಾರೆ.
ಟಿ20 ಲೀಗ್ ಬಹುತೇಕ ರಾಷ್ಟ್ರಗಳಲ್ಲಿ ಆಡಿಸಲಾಗುತ್ತಿದೆ. ಆಸ್ಟ್ರೇಲಿಯಾದಲ್ಲಿ ಬಿಗ್ಬ್ಯಾಷ್, ಪಾಕ್ನಲ್ಲಿ ಪಾಕಿಸ್ತಾನ್ ಸೂಪರ್ ಲೀಗ್, ದಕ್ಷಿಣ ಆಫ್ರಿಕಾದಲ್ಲಿ SA20 ಲೀಗ್ ಅಲ್ಲದೇ ವೆಸ್ಟ್ ಇಂಡೀಸ್ನಲ್ಲೂ ಲೀಗ್ಗಳು ನಡೆಯುತ್ತಿದೆ. ಸದ್ಯ ಪಾಕಿಸ್ತಾನದಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ ನಡೆಯುತ್ತಿದೆ. ಈ ವೇಳೆ ಬಾಬರ್ಗೆ ಯಾವ ಲೀಗ್ನಲ್ಲಿ ಆಡಲು ಇಷ್ಟ ಪಡುತ್ತೀರಿ ಎಂದು ಕೇಳಲಾಗಿದೆ. ಬಾಬರ್ ಉತ್ತರಕ್ಕೆ ಹರ್ಭಜನ್ ಸಿಂಗ್ ಟ್ವಿಟರ್ ಪ್ರತಿಕ್ರಿಯೆ ವೈರಲ್ ಆಗುತ್ತಿದೆ.
- — Harbhajan Turbanator (@harbhajan_singh) March 16, 2023 " class="align-text-top noRightClick twitterSection" data="
— Harbhajan Turbanator (@harbhajan_singh) March 16, 2023
">— Harbhajan Turbanator (@harbhajan_singh) March 16, 2023
"ಐಪಿಎಲ್ ಅಥವಾ ಬಿಗ್ ಬ್ಯಾಷ್, ನೀವು ಯಾವ ಲೀಗ್ ಅನ್ನು ಹೆಚ್ಚು ಇಷ್ಟಪಡುತ್ತೀರಿ?" ಎಂದು ಬಾಬರ್ ಅವರನ್ನು ಕೇಳಲಾಗಿತ್ತು. "ಆಸ್ಟ್ರೇಲಿಯಾದಲ್ಲಿನ ಪರಿಸ್ಥಿತಿಗಳು ವಿಭಿನ್ನ. ಅಲ್ಲಿನ ಪಿಚ್‌ಗಳು ನಿಜವಾಗಿಯೂ ವೇಗವಾಗಿರುತ್ತವೆ ಮತ್ತು ಅಲ್ಲಿ ನಮಗೆ ಬಹಳಷ್ಟು ಕಲಿಯುವ ಅವಕಾಶ ಇದೆ. ಆದರೆ ಐಪಿಎಲ್‌ನಲ್ಲಿ ನಾವು ಅದೇ ಏಷ್ಯನ್ ಪರಿಸ್ಥಿತಿಗಳನ್ನು ಅನುಭವಿಸುತ್ತೇವೆ" ಎಂದು ಬಾಬರ್ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಟ್ವಿಟರ್‌ನಲ್ಲಿ ಹರ್ಭಜನ್ ನಗುವ ಎಮೋಜಿಯಲ್ಲಿ ಪ್ರತಿಕ್ರಿಯಿಸಿದ್ದು, ಇದಕ್ಕೆ ವಿಭಿನ್ನ ರೀತಿಯ ಕಮೆಂಟ್ಗಳು ಹರಿದಾಡುತ್ತಿವೆ.
ಬಾಬರ್ ಪ್ರಸ್ತುತ ಪಾಕಿಸ್ತಾನ್ ಸೂಪರ್ ಲೀಗ್ ಸೀಸನ್ 8 ರಲ್ಲಿ ನಿರತರಾಗಿದ್ದಾರೆ. ಇಸ್ಲಾಮಾಬಾದ್ ಯುನೈಟೆಡ್ ಮತ್ತು ಪೇಶಾವರ್ ಝಲ್ಮಿ ನಡುವೆ ಗುರುವಾರ ಎಲಿಮಿನೇಟರ್ ಪಂದ್ಯ ಏರ್ಪಟ್ಟಿದ್ದು, ಬಾಬರ್ ನಾಯಕತ್ವದ ಪೇಶಾವರ್ ಝಲ್ಮಿ ತಂಡ 12 ರನ್ನ ಗೆಲುವು ದಾಖಲಿಸಿದೆ. ನಾಯಕ ಬಾಬರ್ 39 ಎಸೆತದಲ್ಲಿ 64 ರನ್ ಗಳಿಸಿದ್ದು, ಎದುರಾಳಿಗೆ ತಂಡ 183 ರನ್ನ ಗುರಿ ನೀಡಿತ್ತು.
ಇದನ್ನು ಎದುರಿಸಿ ಇಸ್ಲಾಮಾಬಾದ್ ಯುನೈಟೆಡ್ 20 ಓವರ್ನಲ್ಲಿ 171 ರನ್ ಮಾತ್ರ ಗಳಿಸುವಲ್ಲಿ ಶಕ್ತವಾದ್ದರಿಂದ 12 ರನ್ನ ಸೋಲು ಕಂಡಿತು. ಸೊಹೈಬ್ ಮಕ್ಸೂದ್ (60) ಮತ್ತು ಅಲೆಕ್ಸ್ ಹೇಲ್ಸ್ (57) ಹೋರಾಟ ವ್ಯರ್ಥವಾಯಿತು. ಈ ಸೋಲಿನಿಂದ ಇಸ್ಲಾಮಾಬಾದ್ ಯುನೈಟೆಡ್ ಲೀಗ್ನಿಂದ ಎಲಿಮಿನೇಟ್ ಆಯಿತು.
ಇಂದು ಎರಡನೇ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಬಾಬರ್ ನಾಯಕತ್ವದ ಪೇಶಾವರ್ ಝಲ್ಮಿ ತಂಡ ಲಾಹೋರ್ ಖಲಂದರ್ಸ್ ಅನ್ನು ಎದುರಿಸಲಿದೆ. ಗೆದ್ದ ತಂಡ ನಾಳೆ ನಡೆಯುವ ಫೈನಲ್ನಲ್ಲಿ ಮುಲ್ತಾನ್ ಸುಲ್ತಾನ್ ತಂಡದ ಎದುರು ಕಪ್ಗಾಗಿ ಹೋರಾಡಲಿದ್ದಾರೆ.
ಇದನ್ನೂ ಓದಿ: ಐಪಿಎಲ್ ಕ್ರಿಕೆಟ್: ಆರ್ಸಿಬಿ ನಾಯಕತ್ವ ತ್ಯಜಿಸಿದ ವಿರಾಟ್ ಕೊಹ್ಲಿ..!