ETV Bharat / sports

ಬಾಬರ್ ಅಜಮ್ ಸ್ಫೋಟಕ ಶತಕ:12 ಎಸೆತಗಳಿರುವಂತೆ 204 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿ ಗೆದ್ದ ಪಾಕಿಸ್ತಾನ

ಬಾಬರ್​ ಅಜಮ್ 59 ಎಸೆತಗಳಲ್ಲಿ 15 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 122 ರನ್​ಗಳಿಸಿದರು. ಈ ಮೂಲಕ ಪಾಕಿಸ್ತಾನದ ಪರ ಶತಕ ಸಿಡಿಸಿದ 3ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು ಬಾಬರ್​​​ ಅಜಮ್.

ಬಾಬರ್ ಅಜಮ್ ಶತಕ
ಬಾಬರ್ ಅಜಮ್ ಶತಕ
author img

By

Published : Apr 14, 2021, 10:40 PM IST

ಸೆಂಚುರಿಯನ್: ಬಾಬರ್​ ಅಜಮ್​ ಅವರ ಸ್ಫೋಟಕ ಶತಕದ ನೆರವಿನಿಂದ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ-20 ಪಂದ್ಯದಲ್ಲಿ ಪಾಕಿಸ್ತಾನ ತಂಡ 204 ರನ್​ಗಳ ಬೃಹತ್ ಮೊತ್ತವನ್ನು ಇನ್ನು 2 ಓವರ್​ಗಳಿರುವಂತೆ ಚೇಸ್​ ಮಾಡಿದೆ.

ಮೊದಲು ಬ್ಯಾಟಿಂಗ್​ ಮಾಡಿದ ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್​ನಲ್ಲಿ 2013ರ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ಧ 200ರ ಗಡಿ ದಾಟಿತು. 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್​ಗಳಿಸಿತ್ತು. ಜನ್ನೆಮನ್ ಮಲನ್ 40 ಎಸೆತಗಳಲ್ಲಿ 5 ಬೌಂಡರಿ , 2 ಸಿಕ್ಸರ್​ಗಳ ಸಹಿತ 55, ಮ್ಯಾರ್ಕ್ರಮ್ 31 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 63, ಜಾರ್ಜ್​ ಲಿಂಡೆ 22, ಡಾಸೆನ್ 34, ಕ್ಲಾಸೆನ್ 15 ರನ್​ಗಳಿಸಿದರು.

205 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ಪಾಕಿಸ್ತಾನ 18 ಓವರ್​ಗಳಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ನಾಯಕ ಬಾಬರ್​ ಅಜಮ್ 59 ಎಸೆತಗಳಲ್ಲಿ 15 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 122 ರನ್​ಗಳಿಸಿದರು. ಈ ಮೂಲಕ ಪಾಕಿಸ್ತಾನದ ಪರ ಶತಕ ಸಿಡಿಸಿದ 3ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್​ಮನ್​ ಮೊಹಮ್ಮದ್ ರಿಜ್ವಾನ್​ 47 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್​ಗಳ ಸಹಿತ ಅಜೇಯ 73 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಫಖರ್ ಜಮಾನ್​ ಅಜೇಯ 8 ರನ್​ಗಳಿಸಿದರು.

ಎರಡು ತಂಡಗಳ ನಡುವಿನ ಕೊನೆಯ ಪಂದ್ಯ ಶುಕ್ರವಾರ ನಡೆಯಲಿದೆ. ಶುಕ್ರವಾರ ನಡೆಯಲಿದ್ದು, ಆತಿಥೇಯ ದಕ್ಷಿಣ ಆಫ್ರಿಕಾ ಸರಣಿ ಸೋಲಿನ ಮುಖಭಂಗ ತಪ್ಪಿಸಿಕೊಳ್ಳಲಿ ಕೊನೆಯ ಅವಕಾಶವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.