ಹೈದರಾಬಾದ್: ಅನಾರೋಗ್ಯದಿಂದ ಬಳಲುತ್ತಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ನೋಯಲ್ ಡೇವಿಡ್ ಅವರನ್ನು ಭೇಟಿ ಮಾಡಿರುವ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್, ನೋಯಲ್ ಅವರ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಸೇರಿದಂತೆ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕ್ರಿಕೆಟ್ ಮಂಡಳಿ ಭರಿಸುವುದಾಗಿ ಭಾರತ ತಂಡದ ಮಾಜಿ ನಾಯಕ ತಿಳಿಸಿದ್ದಾರೆ.
51ನೇ ವರ್ಷದ ಡೇವಿಡ್ ಭಾರತದ ಪರ 4 ಏಕದಿನ ಪಂದ್ಯವನ್ನಾಡಿದ್ದಾರೆ, ಅವರು ಕೆಲವು ವರ್ಷಗಳಿಂದ ಕಿಡ್ನಿ ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದಾರೆ. ಇದೇ ಬುಧವಾರ ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಅವರು ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿರುವ ನೋಯಲ್ ಡೇವಿಡ್ ಅವರನ್ನು ಭೇಟಿಯಾಗಿದ್ದಾರೆ. ನೋಯಲ್ ಅವರು ಇದೇ ಅಸ್ಪತ್ರೆಯಲ್ಲಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೆಚ್‌ಸಿಎ ಹೇಳಿಕೆ ಬಿಡುಗಡೆ ಮಾಡಿದೆ.
ನೋಯಲ್ ಅವರು ಸರ್ಜರಿಗೆ ಒಳಗಾದ ನಂತರ ಸೋಂಕುರಹಿತ ಸ್ಥಳದಲ್ಲಿರಿಸಿದ್ದರಿಂದ ಅವರನ್ನು ಬೇಗ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಅಜರುದ್ದೀನ್ ನೆಫ್ರಾಲಜಿಸ್ಟ್ ಡಾ. ಸುಬ್ರಹ್ಮಣ್ಯಂ ಅವರನ್ನು ಭೇಟಿಯಾಗಿ ಶಸ್ತ್ರಚಿಕಿತ್ಸೆ ಬಗ್ಗೆ ಮತ್ತು ನಂತರದ ಆರೈಕೆಯ ಬಗ್ಗೆ ವಿಚಾರಿಸಿದ್ದಾರೆ ಎಂದು ಹೇಳಿಕೆಯಲ್ಲಿ ಮಂಡಳಿ ತಿಳಿಸಿದೆ. "ಅಪೋಲೋ ಜುಬಿಲಿ ಹಿಲ್ಸ್‌ನ ಸಿಒಒ ತೇಜಸ್ವಿ ರಾವ್ ಅವರೊಂದಿಗಿನ ಮಾತನಾಡಿರುವ ಅಜರುದ್ದೀನ್, ನೋಯೆಲ್ ಅವರ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಹೆಚ್‌ಸಿಎ ಭರಿಸಲಿದೆ ಎಂದು ತಿಳಿಸಿದ್ದಾರೆ ಮತ್ತು ನೋಯೆಲ್ ಅವರ ವೈಯಕ್ತಿಕ ವೆಚ್ಚಗಳನ್ನು ಪೂರೈಸಲು ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ಬಲಗೈ ಬ್ಯಾಟರ್ ಮತ್ತು ಆಫ್ ಸ್ಪಿನ್ ಬೌಲರ್ ಆಗಿದ್ದ 51 ವರ್ಷದ ಡೇವಿಡ್ ಜುಲೈ 1997 ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಕೊನೆಯ ODI ಆಡಿದರು.
ಇದನ್ನೂ ಓದಿ:ಪಂಜಾಬ್ ಕಿಂಗ್ಸ್ ತಂಡದ ನಾಯಕನಾಗಿ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆ..