ಹಾಗ್ಲೆ ಓವಲ್(ಕ್ರೈಸ್ಟ್ ಚರ್ಚ್): 2022ನೇ ಸಾಲಿನ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಅನ್ನು ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ. ಆರು ಬಾರಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ತಂಡ 2017ರಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ನಲ್ಲಿ ಪರಾಭವಗೊಂಡಿತ್ತು. 1978, 1982, 1988, 1997, 2005, 2013ರಲ್ಲಿ ಆಸಿಸ್ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
-
WORLD CUP WINNERS!! 🏆
— Australian Women's Cricket Team 🏏 (@AusWomenCricket) April 3, 2022 " class="align-text-top noRightClick twitterSection" data="
YOU BEAUTYYYYY AUSSIES!#CWC22 #TeamAustralia pic.twitter.com/PfboVgeeUy
">WORLD CUP WINNERS!! 🏆
— Australian Women's Cricket Team 🏏 (@AusWomenCricket) April 3, 2022
YOU BEAUTYYYYY AUSSIES!#CWC22 #TeamAustralia pic.twitter.com/PfboVgeeUyWORLD CUP WINNERS!! 🏆
— Australian Women's Cricket Team 🏏 (@AusWomenCricket) April 3, 2022
YOU BEAUTYYYYY AUSSIES!#CWC22 #TeamAustralia pic.twitter.com/PfboVgeeUy
ಇಂದು ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್‌ಗೆ 357 ರನ್‌ಗಳ ಬೃಹತ್ ಗುರಿ ನೀಡಿತು. ಆಸಿಸ್ ಪರ ಶತಕದಾಟವಾಡಿದ ಅಲಿಸ್ಸಾ ಹೀಲಿ 138 ಎಸೆತಗಳಿಗೆ 170 ರನ್ ಗಳಿಸಿ ವಿನೂತನ ದಾಖಲೆ ಬರೆದರು. ಹೀಲಿ ಜೊತೆಗೆ ಆರ್.ಹೇನ್ಸ್ 68 ರನ್, ಬೆತ್ ಮೂನಿ 62 ರನ್ ಗಳಿಸಿ ತಂಡ ಹೆಚ್ಚು ಮೊತ್ತ ದಾಖಲಿಸಲು ನೆರವಾದರು. ಇಂಗ್ಲೆಂಡ್ ತಂಡದ ಬೌಲಿಂಗ್ ವಿಚಾರಕ್ಕೆ ಬರುವುದಾದರೆ, ಅನ್ಯ ಶ್ರಬ್ಸೋಲ್ 3 ವಿಕೆಟ್ ಹಾಗು ಎಕ್ಲೆಸ್ಟೋನ್ 1 ವಿಕೆಟ್ ಪಡೆದರು.
357 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡದ ಪರವಾಗಿ ಶತಕದಾಟವಾಡಿದ ನಥಾಲಿ ಸಿವರ್ 142 ರನ್ ಗಳಿಸಿದ್ದು ವ್ಯರ್ಥವಾಯಿತು. ಇನ್ನುಳಿದಂತೆ, ಟ್ಯಾಮಿ ಬ್ಯೂಮೊಂಟ್ 27, ಹೀಥರ್ ನೈಟ್ 26, ಆ್ಯಮಿ ಜೋನ್ಸ್, 20, ಸೋಫಿಯಾ ಡಂಕ್ಲೆ 23, ಚಾರ್ಲಿ ಡೀನ್ 21 ರನ್ಗಳನ್ನಷ್ಟೇ ಗಳಿಸಿದರು. ಆಸ್ಟ್ರೇಲಿಯಾ ಮಾರಕ ಬೌಲಿಂಗ್ ದಾಳಿ ನಡೆಸಿದ್ದು, ಅಲನಾ ಕಿಂಗ್, ಜೆಸ್ ಜೊನಾಸ್ಸೆನ್ ತಲಾ ಮೂರು ವಿಕೆಟ್, ಮೆಗಾನ್ ಶುಟ್ 2, ತಹಿಲಾ ಮೆಗ್ರಾತ್ ಮತ್ತು ಅಶ್ಲೆ ಗಾರ್ಡನರ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.