ಲಾರ್ಡ್ಸ್ (ಲಂಡನ್): ಆ್ಯಶಸ್ 2023ರ ಎರಡನೇ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ಬಲಿಷ್ಠವಾಗಿ ಮುಂದುವರೆಯುತ್ತಿದೆ. ದ್ವಿತೀಯ ದಿನದ ಎರಡು ಸೆಷನ್ಗಳನ್ನು ಇಂಗ್ಲೆಂಡ್ ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದು ಬಿಟ್ಟರೆ ಮಿಕ್ಕೆಲ್ಲಾ ಅವಧಿಗಳು ಆಸ್ಟ್ರೇಲಿಯಾದ ಪಾಲಾಗಿದ್ದವು. ಇದರಿಂದ ಎರಡನೇ ಟೆಸ್ಟ್ ಆಸ್ಟ್ರೇಲಿಯಾಕ್ಕೆ ಹೆಚ್ಚು ಲಾಭವಾಗುತ್ತಿದೆ. ನಾಲ್ಕನೇ ದಿನವಾದ ಇಂದು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ಮೊದಲ ಸೆಷನ್ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದೆ.
-
England take wickets, but Australia's lead crosses 300 👊#WTC25 | #ENGvAUS 📝: https://t.co/liWqlPCKqn pic.twitter.com/1AHWKcX8yO
— ICC (@ICC) July 1, 2023 " class="align-text-top noRightClick twitterSection" data="
">England take wickets, but Australia's lead crosses 300 👊#WTC25 | #ENGvAUS 📝: https://t.co/liWqlPCKqn pic.twitter.com/1AHWKcX8yO
— ICC (@ICC) July 1, 2023England take wickets, but Australia's lead crosses 300 👊#WTC25 | #ENGvAUS 📝: https://t.co/liWqlPCKqn pic.twitter.com/1AHWKcX8yO
— ICC (@ICC) July 1, 2023
ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಪರ ಉಸ್ಮಾನ್ ಖವಾಜಾ ಅಜೇಯ 58 ರನ್ ಗಳಿಸಿದರು. ಸ್ಟೀವ್ ಸ್ಮಿತ್ 6 ರನ್ ಗಳಿಸಿ ಔಟಾಗದೇ ಉಳಿದ್ದಿದ್ದರು. ಇಂದಿನ ಇನ್ನಿಂಗ್ಸ್ನ್ನು ಸ್ಮಿತ್ ಬೌಂಡರಿ ಮೂಲಕ ಭರ್ಜರಿ ಆರಂಭ ನೀಡಿದರು. ಖವಾಜಾ ಮತ್ತು ಸ್ಮಿತ್ ಜೋಡಿ ತಂಡಕ್ಕೆ ಉತ್ತಮ ರನ್ ಕಲೆ ಹಾಕುತ್ತಿತ್ತು. 77 ರನ್ ಗಳಿಸಿ ಶತಕದ ಸನಿಹದಲ್ಲಿದ್ದ, ಉಸ್ಮಾನ್ ಖವಾಜಾ ಬ್ರಾಡ್ಗೆ ವಿಕೆಟ್ ಒಪ್ಪಿಸಿದರು. ಖಬಾಜಾ ಅವರ ವಿಕೆಟ್ ಬೆನ್ನಲ್ಲೇ ಅಂದರೆ ಜೋಶ್ ಅವರ ನಂತರದ ಓವರ್ನಲ್ಲೇ ವಿಕೆಟ್ ಕೊಟ್ಟರು. ನಂತರ ಬಂದ ಟ್ರಾವೆಸ್ ಹೆಡ್ (7) ಕೂಡಾ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ಭೋಜನ ವಿರಾಮದ ವೇಳೆಗೆ ಇಂದಿನ ಇನ್ನಿಂಗ್ಸ್ನಲ್ಲಿ 92 ರನ್ ಕಲೆಹಾಕಿರುವ ಆಸ್ಟ್ರೇಲಿಯಾ, ಒಟ್ಟು 5 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿದೆ. 91 ರನ್ಗಳ ಮುನ್ನಡೆಯಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಕಾಂಗರೂ ಪಡೆ 313 ರನ್ನ ಮುನ್ನಡೆ ಪಡೆದುಕೊಂಡಿದೆ. ಕ್ರೀಸ್ನಲ್ಲಿ ಕ್ಯಾಮರಾನ್ ಗ್ರೀನ್ ಮತ್ತು ಅಲೆಕ್ಸ್ ಕ್ಯಾರಿ ಇದ್ದಾರೆ. ಇಂಗ್ಲೆಂಡ್ ಕೇವಲ ನಾಲ್ವರು ವೇಗ ಬೌಲರ್ಗಳಿಂದ ಬೌಲ್ ಮಾಡಿಸುತ್ತಿದ್ದು, ಈವರೆಗೆ ಜೋಶ್, ಬ್ರಾಡ್ ಎರಡು ವಿಕೆಟ್ ಮತ್ತು ಆಂಡ್ರೆಸನ್ ಒಂದು ವಿಕೆಟ್ ಪಡೆದಿದ್ದಾರೆ.
ಇಂಗ್ಲೆಂಡ್ ತಂಡ ಅಳವಡಿಸಿಕೊಂಡಿರುವ ಬೇಸ್ಬಾಲ್ ನೀತಿಯಂತೆ ಬ್ಯಾಟಿಂಗ್ ಮಾಡುವುದರಿಂದ ಆಸ್ಟ್ರೇಲಿಯಾ 400 ಪ್ಲೆಸ್ ರನ್ ಗುರಿಯನ್ನು ನೀಡುವ ಅಗತ್ಯ ಇದೆ. ಹೀಗಾಗಿ ಉಳಿದ 5 ವಿಕೆಟ್ನಿಂದ ಕನಿಷ್ಠ 150 ರನ್ನ ಕೊಡುಗೆ ಬಂದರೆ ಆಸ್ಟ್ರೇಲಿಯಾಕ್ಕೆ ಆ್ಯಶಸ್ನಲ್ಲಿ ಎರಡನೇ ಗೆಲುವು ಮತ್ತು ಇಂಗ್ಲೆಂಡ್ ನೆಲದಲ್ಲಿ ಹ್ಯಾಟ್ರಿಕ್ ಗೆಲುವು ಸಿಗಲಿದೆ.
ಪಂದ್ಯದ ಹಿನ್ನೋಟ: ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಬಂದಿದ್ದ ಆಸ್ಟ್ರೇಲಿಯಾ ಉತ್ತಮ ಆರಂಭವನ್ನು ಪಡೆದಿತ್ತು. ಡೇವಿಡ್ ವಾರ್ನರ್ ಅರ್ಧಶ ತಕಗಳಿಸಿದರು. ಅವರ ನಂತರ ಸ್ಟೀವ್ ಸ್ಮಿತ್ ಅವರ 110 ರನ್ ಮತ್ತು ಹೆಡ್ ಅವರ 77 ರನ್ನ ಸಹಾಯದಿಂದ ಕಾಂಗರೂ ಪಡೆ ಮೊದಲ ಇನ್ನಿಂಗ್ಸ್ನಲ್ಲಿ 416 ರನ್ ಗಳಿಸಿತ್ತು. ಇದರಲ್ಲಿ ಲಬುಶೇನ್ 47, ಕ್ಯಾರಿ ಮತ್ತು ಕಮಿನ್ಸ್ ಅವರ 22 ರನ್ ಇನ್ನಿಂಗ್ಸ್ ಸಹ ಮರೆಯುವಂತಿಲ್ಲ.
ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಉತ್ತಮ ಆರಂಭವನ್ನು ಪಡೆದುಕೊಂಡಿತು. ಆದರೆ, ಹೊಡಿಬಡಿ ಆಟದ ಪರಿಣಾಮ ಬೇಗ ವಿಕೆಟ್ಗಳನ್ನು ಕಳೆದುಕೊಂಡಿತು. 325 ರನ್ಗೆ ಸರ್ವಪತನ ಕಂಡ ಇಂಗ್ಲೆಂಡ್ 91 ರನ್ ಹಿನ್ನಡೆ ಅನುಭವಿಸಿತು. ಝಾಕ್ ಕ್ರಾಲಿ 48, ಬೆನ್ ಡಕ್ಕೆಟ್ 98, ಒಲಿ ಪೊಪೆ 42 ಮತ್ತು ಹ್ಯಾರಿ ಬ್ರೂಕ್ ಅವರ 50 ರನ್ ಸಹಾಯದಿಂದ 300ರ ಗಡಿ ದಾಟಲು ಸಹಕರಿಸಿತು.
ಇದನ್ನೂ ಓದಿ: Ashes 2023: ಆ್ಯಶಸ್ ಟೆಸ್ಟ್- 325ಕ್ಕೆ ಇಂಗ್ಲೆಂಡ್ ಆಲೌಟ್; ಆಸ್ಟ್ರೇಲಿಯಾಗೆ 91 ರನ್ ಮುನ್ನಡೆ