ದುಬೈ: ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ಟೌನ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಎರಡು ಟೆಸ್ಟ್ ಪಂದ್ಯಗಳ ಸರಣಿ ಸಮಬಲವಾಗಿದೆ. ಆದರೆ ಈ ಪಂದ್ಯದ ಫಲಿತಾಂಶ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಭಾರತೀಯ ಕ್ರಿಕೆಟ್ ತಂಡ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡಿದೆ. ಪಾಕಿಸ್ತಾನದ ವಿರುದ್ಧ ಎರಡು ಟೆಸ್ಟ್ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಇದೀಗ ನಂಬರ್ 1 ಟೆಸ್ಟ್ ತಂಡವಾಗಿ ಹೊರಹೊಮ್ಮಿದೆ.
-
A new No.1 side is crowned in the @MRFWorldwide ICC Men's Test Team Rankings 👑
— ICC (@ICC) January 5, 2024 " class="align-text-top noRightClick twitterSection" data="
More ⬇️
">A new No.1 side is crowned in the @MRFWorldwide ICC Men's Test Team Rankings 👑
— ICC (@ICC) January 5, 2024
More ⬇️A new No.1 side is crowned in the @MRFWorldwide ICC Men's Test Team Rankings 👑
— ICC (@ICC) January 5, 2024
More ⬇️
ಈ ಮೊದಲು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ತಲಾ 118 ಅಂಕಗಳೊಂದಿಗೆ ಐಸಿಸಿ ರೇಟಿಂಗ್‌ನಲ್ಲಿ ಟೈ ಆಗಿದ್ದವು. ಆದಾಗ್ಯೂ, ಪುರುಷರ ತಂಡದ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಎಲ್ಲ ಮಾದರಿಯ ಕ್ರಿಕೆಟ್ಗಳಲ್ಲಿ ಮೊದಲ ಸ್ಥಾನದಲ್ಲಿದ್ದ ಕಾರಣ ಟೆಸ್ಟ್ನಲ್ಲೂ ಅಗ್ರ ಸ್ಥಾನ ಹೊಂದಲು ಸಾಧ್ಯವಾಗಿತ್ತು. ಆದರೆ, ರೋಹಿತ್ ಶರ್ಮಾ ಬಳಗವು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಮೊದಲ ಪಂದ್ಯವನ್ನು ಸೋತು, ಎರಡನೇ ಪಂದ್ಯ ಗೆಲ್ಲುವ ಮೂಲಕ 1-1ರಿಂದ ಡ್ರಾ ಮಾಡಿಕೊಂಡಿತು.
ಮತ್ತೊಂದೆಡೆ, ಆಸೀಸ್ ತಂಡ ತನ್ನ ತವರು ನೆಲೆದಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾರಮ್ಯ ಮೆರೆದಿದೆ. ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಪ್ಯಾಟ್ ಕಮಿನ್ಸ್ ನೇತೃತ್ವದ ಕಾಂಗರೂ ಪಡೆ ಎರಡು ಪಂದ್ಯಗಳನ್ನು 2-0 ಅಂತರದಿಂದ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಇದರಿಂದಾಗಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆಲುವು, ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ವಿಜಯದ ಜೊತೆಗೆ ಆಸ್ಟ್ರೇಲಿಯಾಕ್ಕೆ ಈಗ ಟೆಸ್ಟ್ ಶ್ರೇಯಾಂಕದಲ್ಲಿ ಮತ್ತೆ ನಂಬರ್ 1 ಪಟ್ಟಕ್ಕೇರಿಸಲು ಸಾಧ್ಯವಾಗಿದೆ.
ಡಬ್ಲ್ಯೂಟಿಸಿಯಲ್ಲಿ ಭಾರತವೇ ಟಾಪ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಪಟ್ಟಿಯಲ್ಲಿ ಭಾರತ ತಂಡ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ. ಕಳೆದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ತಲಾ ಒಂದು ಸೋಲು, ಡ್ರಾದೊಂದಿಗೆ ಶೇ.54.16ರಷ್ಟು ಅಂಕಗಳನ್ನು ಟೀಂ ಇಂಡಿಯಾ ಹೊಂದಿದೆ.
ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಎರಡು, ನ್ಯೂಜಿಲೆಂಡ್ ಮೂರು, ಆಸ್ಟ್ರೇಲಿಯಾ ತಂಡ ನಾಲ್ಕನೇ ಸ್ಥಾನದಲ್ಲಿದೆ. ಈಗ ನಡೆಯುತ್ತಿರುವ ಆಸ್ಟ್ರೇಲಿಯಾ - ಪಾಕಿಸ್ತಾನದ ಮೂರನೇ ಟೆಸ್ಟ್ ಪಂದ್ಯ, ಮುಂಬರುವ ಭಾರತ - ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಸರಣಿಯು ಟೆಸ್ಟ್ ರ‍್ಯಾಂಕಿಂಗ್, ಡಬ್ಲ್ಯೂಟಿಸಿಯಲ್ಲಿ ಮತ್ತೆ ಮಹತ್ವದ ಬದಲಾವಣೆ ತರುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ಕೇಪ್ ಟೌನ್‌ನಲ್ಲಿ ಐತಿಹಾಸಿಕ ಗೆಲುವು: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಗ್ರಸ್ಥಾನಕ್ಕೇರಿದ ಭಾರತ