ಕರಾಚಿ(ಪಾಕಿಸ್ತಾನ): ಮುಂದಿನ 12 ದಿನಗಳಲ್ಲಿ ಏಷ್ಯಾಕಪ್ ಯುಎಇಯಲ್ಲಿ ಆರಂಭವಾಗಲಿದೆ. ಟಿ20 ಮಾದರಿಯಲ್ಲಿ ಈ ಟೂರ್ನಿಯಲ್ಲಿ ಮಿಂಚು ಹರಿಸಿದ ಆಟಗಾರರು ಕಿರು ವಿಶ್ವಕಪ್ ತಂಡಕ್ಕೆ ಕಾಲಿಟ್ಟಿದ್ದಾರೆ. ಅದಕ್ಕಾಗಿಯೇ ಯುವ ಆಟಗಾರರು ಸೇರಿದಂತೆ ಹಿರಿಯರು ಏಷ್ಯಾಕಪ್ 2022 ಕ್ರಿಕೆಟ್ನಲ್ಲಿ ಸ್ಥಾನ ಗಳಿಸಲು ಎದುರು ನೋಡುತ್ತಿದ್ದಾರೆ. ಏಷ್ಯಾಕಪ್‌ಗಾಗಿ ಆರು ತಂಡಗಳು ಸ್ಪರ್ಧಿಸಲಿವೆ. ಅದರಲ್ಲಿ ಭಾರತ ಮತ್ತು ಪಾಕಿಸ್ತಾನ ಫೇವರಿಟ್ ಆಗುವ ಸಾಧ್ಯತೆ ಇದೆ. ಈ ಕ್ರಮದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಸಲ್ಮಾನ್ ಭಟ್ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎಂದು ಭವಿಷ್ಯ ನುಡಿದಿದ್ದಾರೆ.
ಭಾರತ ಖಂಡಿತವಾಗಿಯೂ ಏಷ್ಯಾಕಪ್ ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಭಾರತ ತಂಡವು ಅತ್ಯುತ್ತಮ ಆಟಗಾರರನ್ನು ಹೊಂದಿದೆ. ಹೀಗಾಗಿ ಟೀಂ ಇಂಡಿಯಾವನ್ನು ಫೇವರಿಟ್ ಎಂದು ಪರಿಗಣಿಸಲಾಗಿದೆ. ಆದ್ರೆ ಪಾಕಿಸ್ತಾನ್ ತಂಡ ಅವರನ್ನು ಸೋಲಿಸಬಹುದು. ಪಾಕಿಸ್ತಾನವು ತಮ್ಮದೇ ಆದ ದಿನದಂದು ಯಾವುದೇ ತಂಡದ ವಿರುದ್ಧ ಜಯಗಳಿಸುವ ಸಾಮರ್ಥ್ಯ ಹೊಂದಿದೆ. ಅಫ್ಘಾನಿಸ್ತಾನ ಕೂಡ ಸಂಚಲನ ಮೂಡಿಸುವ ಸಾಮರ್ಥ್ಯ ಹೊಂದಿರುವ ತಂಡವಾಗಿದೆ. ಹಾಗಾಗಿಯೇ ಅಫ್ಘಾನಿಸ್ತಾನವನ್ನು ‘ಡಾರ್ಕ್ ಹಾರ್ಸ್’ ಎಂದು ಕರೆಯುತ್ತಾರೆ ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.
ಏಷ್ಯಾ ಕಪ್ ಆಗಸ್ಟ್ 27 ರಿಂದ ಆರಂಭವಾಗಲಿದೆ. ಮರುದಿನ (ಆಗಸ್ಟ್ 28) ಭಾರತ ಮತ್ತು ಪಾಕಿಸ್ತಾನದ ನಡುವೆ ಜಿದ್ದಾಜಿದ್ದಿ ಹೋರಾಟ ನಡೆಯಲಿದೆ. ಇಂತಹ ಮೆಗಾ ಟೂರ್ನಿಗಳನ್ನು ಹೊರತುಪಡಿಸಿದರೆ ಉಭಯ ತಂಡಗಳಿಗೂ ಹೊರಗೆ ಆಡುವ ಅವಕಾಶಗಳಿಲ್ಲದ ಕಾರಣ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದು ಬಟ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಓದಿ: 75ನೇ ಸ್ವಾತಂತ್ರ್ಯ ದಿನಾಚರಣೆ.. ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಾಥ್ ನೀಡಿದ ವಿರಾಟ್ ಕೊಹ್ಲಿ ದಂಪತಿ