ETV Bharat / sports

ಕೊರೊನಾರ್ಭಟಕ್ಕೆ ಈ ವರ್ಷವೂ ಏಷ್ಯಾ ಕಪ್​ ರದ್ದು - ಆಶ್ಲೇ ಡಿ ಸಿಲ್ವಾ

ಶ್ರೀಲಂಕಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ವರ್ಷ ಜೂನ್​ ತಿಂಗಳಿನಲ್ಲಿ ಟೂರ್ನಿ ನಡೆಯುವುದು ಅಸಾಧ್ಯ ಎಂದು ಎಸ್​ಎಲ್​ಸಿ ಸಿಇಒ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಏಷ್ಯಕಪ್​ ರದ್ದು
ಏಷ್ಯಕಪ್​ ರದ್ದು
author img

By

Published : May 19, 2021, 9:28 PM IST

Updated : May 19, 2021, 9:58 PM IST

ಕೊಲಂಬೊ: ಪಾಕಿಸ್ತಾನದಿಂದ ಶ್ರೀಲಂಕಾಕ್ಕೆ ಸ್ಥಳಾಂತರಗೊಂಡಿದ್ದ 2021ರ ಏಷ್ಯಾಕಪ್​ ಕೋವಿಡ್​ 19 ಪ್ರಕರಣಗಳ ಏರಿಕೆಯಿಂದ ಮುಂಜಾಗ್ರತ ಕ್ರಮವಾಗಿ ರದ್ದುಗೊಳಿಸಿದ್ದೇವೆ ಎಂದು ಶ್ರೀಲಂಕಾ ಕ್ರಿಕೆಟ್​ ಮಂಡಳಿ ಬುಧವಾರ ತಿಳಿಸಿದೆ.

2018ರಲ್ಲಿ ಕೊನೆಯ ಬಾರಿ ಏಷ್ಯಾಕಪ್​ ನಡೆದಿತ್ತು. ನಂತರ 2020ರ ಆವೃತ್ತಿಯನ್ನು ಶ್ರೀಲಂಕಾಗೆ ಸ್ಥಳಾಂತರಿಸಲಾಗಿತ್ತು. ಆದರೆ ಕಳೆದ ವರ್ಷ ವಿಶ್ವದಾದ್ಯಂತ ಕೋವಿಡ್ 19 ಸಾಂಕ್ರಾಮಿಕವಿದ್ದ ಕಾರಣ 2021 ಜೂನ್​ಗೆ ಮುಂದೂಡಲಾಗಿತ್ತು. ಆದರೆ ಆತಿಥ್ಯ ವಹಿಸಿಕೊಳ್ಳಬೇಕಿದ್ದ ಶ್ರೀಲಂಕಾದಲ್ಲೇ ಕಳೆದ ಒಂದು ವಾರದಿಂದ ಕೊರೊನಾ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಟೂರ್ನಿ ಆಯೋಜನೆ ಕಷ್ಟ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಿಇಒ ಆಶ್ಲೇ ಡಿ ಸಿಲ್ವಾ ತಿಳಿಸಿದ್ದಾರೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ವರ್ಷದ ಜೂನ್​ ತಿಂಗಳಿನಲ್ಲಿ ಟೂರ್ನಿಯನ್ನು ನಡೆಯುವುದು ಅಸಾಧ್ಯ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜಕೀಯ ಕಲಹಗಳಿರುವುದರಿಂದ ಎರಡು ದೇಶಗಳಿಗೆ ಪ್ರಯಾಣಿಸುವುದಕ್ಕೆ ಅನುಮತಿ ನೀಡಲಾಗಿಲ್ಲ. ಹಾಗಾಗಿ ಪಾಕಿಸ್ತಾನ ಶ್ರೀಲಂಕಾದಲ್ಲಿ ಟೂರ್ನಿ ಆಯೋಜಿಸಲು ತೀರ್ಮಾನಿಸಿತ್ತು. ಇದೀಗ ಮತ್ತೆ ರದ್ದಾಗಿದೆ. ಮುಂದಿನ 2 ವರ್ಷಗಳಿಗೆ ಈಗಾಗಲೇ ವೇಳಾಪಟ್ಟಿ ನಿಗದಿಯಾಗಿರುವುದಿಂದ 2023ರ ಏಕದಿನ ವಿಶ್ವಕಪ್​ ನಂತರವಷ್ಟೇ ಏಷ್ಯಾಕಪ್​ ಆಯೋಜನೆಗೆ ಸ್ಥಳವಾಕಾಶ ಹುಡುಕಬೇಕಿದೆ.

ಇದನ್ನು ಓದಿ:ಮಾಜಿ ಕ್ರಿಕೆಟರ್​ ತಾಯಿಯ ಚಿಕಿತ್ಸೆಗೆ 6.77 ಲಕ್ಷ ರೂ. ನೀಡಿ ಹೃದಯ ವೈಶಾಲ್ಯತೆ ಮೆರೆದ ಕೊಹ್ಲಿ

Last Updated : May 19, 2021, 9:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.