ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಮಳೆ ಎರಡನೇ ಬಾರಿಗೆ ಅಡ್ಡಿ ಮಾಡಿದೆ. ಲೀಗ್ ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯದಲ್ಲಿ ಕೇವಲ ಒಂದು ಇನ್ನಿಂಗ್ಸ್ ಮಾತ್ರ ಆಡಲು ಸಾಧ್ಯವಾಯಿತು. ಸೂಪರ್ ಫೋರ್ ಹಂತದ ಪಂದ್ಯ ನಿನ್ನೆ (ಭಾನುವಾರ) ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ 24.1 ಓವರ್ ವರೆಗೆ ಸುಸೂತ್ರವಾಗಿ ನಡೆದಿತ್ತು. ಆದರೆ ಈ ವೇಳೆ ಬಂದ ಮಳೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಎಡೆಬಿಡದೇ ಸುರಿದ ಪರಿಣಾಮ ಮೈದಾನ ತೇವವಾಗಿದೆ ಎಂದು ಮೀಸಲು ದಿನವಾದ ಸೋಮವಾರಕ್ಕೆ ಪಂದ್ಯವನ್ನು ಮುಂದೂಡಲಾಗಿದೆ.
-
Well. I don't see this starting again. Colombo ki baarish is crazy pic.twitter.com/KiY8Mbzl77
— Shoaib Akhtar (@shoaib100mph) September 10, 2023 " class="align-text-top noRightClick twitterSection" data="
">Well. I don't see this starting again. Colombo ki baarish is crazy pic.twitter.com/KiY8Mbzl77
— Shoaib Akhtar (@shoaib100mph) September 10, 2023Well. I don't see this starting again. Colombo ki baarish is crazy pic.twitter.com/KiY8Mbzl77
— Shoaib Akhtar (@shoaib100mph) September 10, 2023
ನಿನ್ನೆ ಮಳೆ ಬಂದು ಪಂದ್ಯವನ್ನು ಮುಂದೂಡಿದ ನಂತರ ಶೋಯೆಬ್ ಅಖ್ತರ್ ಎಕ್ಸ್ ಆ್ಯಪ್ನಲ್ಲಿ ವಿಡಿಯೋ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ "ಮಳೆ ನಮ್ಮನ್ನು ಅಂತಿಮವಾಗಿ ಉಳಿಸಿದೆ, ಕಳೆದ ಬಾರಿ ಭಾರತವನ್ನು ಉಳಿಸಲು ಮಳೆ ಬಂದಿತು; ಇಂದು ನಾವು ಅಪಾಯದಲ್ಲಿದ್ದೆವು ಮತ್ತು ಮಳೆ ನಮ್ಮನ್ನು ರಕ್ಷಿಸಲು ಬಂದಿತು" ಎಂದು ಹೇಳಿದ್ದಾರೆ.
ರಾವಲ್ಪಿಂಡಿ ಎಕ್ಸ್‌ಪ್ರೆಸ್ ಎಂದು ಕರೆಯಲ್ಪಡುವ 48 ವರ್ಷದ ಶೋಯೆಬ್ ಅಖ್ತರ್ ಹೀಗೆ ಹೇಳಲು ಪ್ರಮುಖ ಕಾರಣ ನಿನ್ನೆ ಭಾರತ ತಂಡ ಪಾಕಿಸ್ತಾನಿ ಬೌಲರ್ಗಳನ್ನು ಉತ್ತಮವಾಗಿ ಎದುರಿಸಿದ ರೀತಿ. ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದು ಆರಂಭಿಕರು ಜೀವದಾನಗಳನ್ನು ಪಡೆದರೂ, ಪಾಕ್ನ ಬೌಲರ್ಗಳನ್ನು ಅಂಜದೇ ಎದುರಿಸಿದರು. ಶುಭಮನ್ ಗಿಲ್ ಪಾಕಿಸ್ತಾನದ ಸ್ಟಾರ್ ವೇಗಿ ಶಾಹೀನ್ ಶಾ ಅಫ್ರಿದಿ ಬೌಂಲಿಂಗ್ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿ ಗಮನ ಸೆಳೆದಿದ್ದರು. ಇನ್ನು ಅಫ್ರಿದಿ 5 ಓವರ್ಗೆ 37 ರನ್ ಬಿಟ್ಟುಕೊಟ್ಟಿದ್ದರು.
ರೋಹಿತ್ ಶರ್ಮಾ ಅವರನ್ನು ಪಾಕ್ನ ಯುವ ಬೌಲರ್ ನಸೀಮ್ ಕಾಡಿದರು. ಆದರೆ ರೋಹಿತ್ ಪವರ್ ಪ್ಲೇ ನಂತರ ಸ್ಪಿನ್ನರ್ಗಳಿಗೆ ಕ್ಲಾಸ್ ತೆಗೆದುಕೊಂಡರು. ಶಾಬಾದ್ ಖಾನ್ ಅವರು 13ನೇ ಓವರ್ ಮಾಡಲು ಬಂದಾಗ ಎರಡು ಸಿಕ್ಸ್ ಮತ್ತು 1 ಬೌಂಡರಿಯಿಂದ ಒಂದೇ 19 ರನ್ ಕಲೆ ಹಾಕಿದರು.
ಶತಕದ ಜೊತೆಯಾಟ: ರೋಹಿತ್ ಶರ್ಮಾ (56 ರನ್) ಮತ್ತು ಶುಭಮನ್ ಗಿಲ್ (58 ರನ್) ಭಾರತಕ್ಕೆ ಶತಕದ ಜೊತೆಯಾಟವನ್ನು ಮಾಡಿದರು. ಇದರಿಂದ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರನ್ನು ಅಸಾಧಾರಣ ಜೊತೆಯಾಟವನ್ನು ಶಾದಾಬ್ ಖಾನ್ ಮತ್ತು ಎಡಗೈ ವೇಗಿ ಶಾಹೀನ್ ಶಾ ಆಫ್ರಿದಿ ಕ್ರಮವಾಗಿ ಪೆವಿಲಿಯನ್‌ಗೆ ಕಳುಹಿಸಿದರು. ಭಾರತ 24.1 ಓವರ್‌ಗಳಲ್ಲಿ 147-2 ರಲ್ಲಿ ವಿರಾಟ್ ಕೊಹ್ಲಿ (8*) ಮತ್ತು ಕೆಎಲ್ ರಾಹುಲ್ (17*) ಕ್ರೀಸ್‌ನಲ್ಲಿದ್ದಾಗ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು.
ಇದನ್ನೂ ಓದಿ: ಇಂದಾದರೂ ನಡೆಯುತ್ತಾ ಭಾರತ-ಪಾಕಿಸ್ತಾನ ಪಂದ್ಯ? ಹವಾಮಾನ ವರದಿ ಹೀಗಿದೆ!