ETV Bharat / sports

ಏಷ್ಯಾಕಪ್‌: ಬಾಬರ್​, ಇಫ್ತಿಕರ್​ ಶತಕದಾಟ; ಪಾಕಿಸ್ತಾನ ನೀಡಿದ ಈ ಗುರಿ ಸಾಧಿಸುವುದೇ ನೇಪಾಳ? - ETV Bharath Kannada news

Asia Cup 2023 Pakistan vs Nepal Match: ಏಷ್ಯಾಕಪ್​ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೇಪಾಳಕ್ಕೆ ಬೃಹತ್‌ ಗುರಿ ನೀಡಿದೆ.

Asia Cup 2023:
Asia Cup 2023:
author img

By ETV Bharat Karnataka Team

Published : Aug 30, 2023, 7:46 PM IST

ಮುಲ್ತಾನ್​ (ಪಾಕಿಸ್ತಾನ): ಏಕದಿನ ಕ್ರಿಕೆಟ್‌ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಪಾಕಿಸ್ತಾನ ತಂಡ ಕ್ರಿಕೆಟ್​ ಶಿಶು ನೇಪಾಳದ ಮೇಲೆ ಸವಾರಿ ನಡೆಸಿದೆ. ನಾಯಕ ಬಾಬರ್​ ಆಜಮ್​ ಮತ್ತು ಇಫ್ತಿಕರ್​ ಅಹಮದ್​ ಅವರ ಶತಕದಾಟದ ನೆರವಿನಿಂದ ನೇಪಾಳಕ್ಕೆ 343 ರನ್‌ಗಳ​ ಬೃಹತ್​ ಗುರಿ ನೀಡಿತು.

ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿಂದು ಪಾಕಿಸ್ತಾನ- ನೇಪಾಳ ಮುಖಾಮುಖಿಯಾಗಿದೆ. ಟಾಸ್​ ಗೆದ್ದ ಪಾಕ್ ನಾಯಕ ಬಾಬರ್​, ಶುಷ್ಕ ಪಿಚ್​ನಲ್ಲಿ ಮೊದಲು ಹೆಚ್ಚು ರನ್​ ಗಳಿಸಬಹುದು ಎಂಬ ಲೆಕ್ಕಾಚಾರದಲ್ಲಿ ಬ್ಯಾಟಿಂಗ್​ ಆಯ್ದುಕೊಂಡರು. ಈ ಲೆಕ್ಕಾಚಾರದಂತೆ ಪಾಕಿಸ್ತಾನ 6 ವಿಕೆಟ್​ ನಷ್ಟಕ್ಕೆ 342 ರನ್​ ಪೇರಿಸಿತು. ​

ಮೊದಲ ಬಾರಿಗೆ ಏಷ್ಯಾಕಪ್​ಗೆ ಪಾದಾರ್ಪಣೆ ಮಾಡಿರುವ ನೇಪಾಳ, ಆರಂಭಿಕ 10 ಓವರ್​ಗಳಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿತು. 6ನೇ ಓವರ್​ನಲ್ಲಿ 14 ರನ್‌ಗಳಿಸಿ ಆಡುತ್ತಿದ್ದ ಫಕರ್ ಜಮಾನ್ ವಿಕೆಟ್ ಅ​ನ್ನು ​ಕರಣ್ ಕೆ.ಸಿ. ಪಡೆದರು. ಮೂರನೇ ವಿಕೆಟ್ ಆಗಿ ಕ್ರೀಸ್‌ಗೆ​ ಬಂದ ಬಾಬರ್​ ಮತ್ತು ಇಮಾಮ್​ ಉಲ್​ ಹಕ್​ ನಡುವೆ ಓಟದ ವೇಳೆ ನಡೆದ ಗೊಂದಲದಲ್ಲಿ ಉಲ್​ ಹಕ್​ ರನ್​ ಔಟ್​ಗೆ ಬಲಿಯಾದರು. ನಂತರ ಬಂದ ಮಹಮ್ಮದ್​ ರಿಜ್ವಾನ್​ ನಾಯಕನೊಂದಿಗೆ ಉತ್ತಮ ಜೊತೆಯಾಟ ಕಟ್ಟಿದರು. ಮೊದಲ ಪವರ್​ ಪ್ಲೇಯನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ತಂಡ ಎಡವಿತು. 10 ಓವರ್​ ವಿಕೆಟ್​ ಕಳೆದುಕೊಂಡು 44 ರನ್​ ಮಾತ್ರ ಗಳಿಸಿತು.

  • What a knock! What a player! Babar Azam has once again proven why he's a force to be reckoned with in the world of cricket. His sensational 151 off 131 balls, including 14 fours and 4 sixes, demolished Nepal's bowling attack! 🇵🇰 💪#AsiaCup2023 #PAKvNEP pic.twitter.com/QKFJMann97

    — AsianCricketCouncil (@ACCMedia1) August 30, 2023 " class="align-text-top noRightClick twitterSection" data=" ">

ಮುಂದಿನ ಹತ್ತು ಓವರ್​ನಲ್ಲಿ ಪಾಕ್​ ವಿಕೆಟ್​ ಕೊಡದಿದ್ದರೂ ನೇಪಾಳದ ಸ್ಪಿನ್ನರ್​ಗಳ ಮುಂದೆ ರನ್​ ಗಳಿಸಲು ಪರದಾಡಿತು. 20 ಓವರ್‌ಗಳ​ ವೇಳೆಗೆ 2 ವಿಕೆಟ್​ಗೆ 91 ರನ್​ ಕಲೆಹಾಕಿತು. ಅಂದರೆ 10 ಓವರ್​ಗಳ ನಂತರ 47 ರನ್ ಮಾತ್ರ ಸೇರಿಸಲು ಸಾಧ್ಯವಾಯಿತು. 24ನೇ ಓವರ್​ನಲ್ಲಿ 44 ರನ್​ ಗಳಿಸಿದ್ದ ರಿಜ್ವಾನ್​ ರನ್​ಔಟ್​ಗೆ ಬಲಿಯಾದರು. 4ನೇ ವಿಕೆಟ್​ ಆಗಿ ಬಂದ ಸಲ್ಮಾನ್​ 5 ರನ್​ಗೆ ವಿಕೆಟ್​ ಕೊಟ್ಟರು.

ಬಾಬರ್​-ಇಫ್ತಿಕರ್​ ಜೊತೆಯಾಟ: ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನಕ್ಕೆ 25ನೇ ಓವರ್‌ನಗಳ ನಂತರ ನಾಯಕ ಬಾಬರ್​ ಮತ್ತು ಇಫ್ತಿಕರ್​ ನೆಲೆ ನಿಂತರು. ಇಬ್ಬರು ಬ್ಯಾಟರ್​ಗಳು ನೇಪಾಳದ ಬೌಲರ್​ಗಳನ್ನು ಕಾಡಲಾರಂಭಿಸಿದರು. 20 ಮತ್ತು 30 ಓವರ್​ಗಳ ನಡುವೆ 2 ವಿಕೆಟ್​ ಬಿದ್ದ ಕಾರಣ ಪಾಕಿಸ್ತಾನ ಈ ಹತ್ತು ಓವರ್​ನಲ್ಲಿ ಕೇವಲ 48 ರನ್​ ಸೇರಿಸಿತ್ತಷ್ಟೇ. 30ನೇ ಓವರ್​ಗೆ 139ಕ್ಕೆ 4 ವಿಕೆಟ್​ ಕಳೆದುಕೊಂಡಿತ್ತು.

30 ಓವರ್‌ಗಳ ವೇಳೆಗೆ ಅರ್ಧಶತಕ ದಾಖಲಿಸಿದ್ದ ಬಾಬರ್​ ತಮ್ಮ ಸ್ಕೋರ್​ ವೇಗ ಹೆಚ್ಚಿಸಿದರು. ಪಿಚ್ ಗುಣ ಅರಿತ ಅವರು ಇಫ್ತಿಕರ್​ ಜೊತೆ ಜಂಟಿಯಾಗಿ ರನ್​ ಕಲೆಹಾಕಿದರು. ಬಾಬರ್​ ಆಜಮ್​ ಕೇವಲ ಬೌಂಡರಿಗಳ ಮೂಲಕವೇ ಶತಕದವರೆಗೆ ಸ್ಕೋರ್​ ಕಲೆಹಾಕಿದರು. ಇವರಿಗೆ ಇಫ್ತಿಕರ್​ ಸಾಥ್​ ನೀಡಿದರು. ಇಬ್ಬರು 40 ಓವರ್‌ಗಳ​ ನಂತರ ದೊಡ್ಡ ಹೊಡೆತಗಳಿಗೆ ಮುಂದಾದರು. ಅಂತಿಮವಾಗಿ ಬಾಬರ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 31ನೇ ಮತ್ತು ಏಕದಿನ ಕ್ರಿಕೆಟ್​ನಲ್ಲಿ 19ನೇ ಶತಕ ದಾಖಲಿಸಿದರೆ, ಇಫ್ತಿಕರ್​ ಅಹಮದ್​ ಏಕದಿನದ ಚೊಚ್ಚಲ ಶತಕ ಸಿಡಿಸಿದರು.

  • What an incredible display of skill and determination by Iftikhar Ahmed! Turning the game around, he hammered an unbeaten 109* off just 71 balls with 11 fours and 4 sixes. His onslaught against Nepal's bowlers propelled Pakistan to a total of 342 runs! 👊#AsiaCup2023 #PAKvNEP pic.twitter.com/GWgeudoc3j

ಬಾಬರ್​ ಆಜಮ್​ 131 ಎಸೆತಗಳಲ್ಲಿ 14 ಬೌಂಡರಿ ಮತ್ತು ನಾಲ್ಕು ಸಿಕ್ಸ್​ನಿಂದ 151 ರನ್ ಕಲೆಹಾಕಿ ಕೊನೆಯ ಎರಡು ಎಸೆತ​ ಇರುವಾಗ ವಿಕೆಟ್​ಕೊಟ್ಟರು. ಇಫ್ತಿಕರ್​ ಅಹಮದ್​ 71 ಎಸೆತದಲ್ಲಿ 11 ಬೌಂಡರಿ, 4 ಸಿಕ್ಸ್​ನಿಂದ 109 ರನ್​ ಗಳಿಸಿ ಅಜೇಯರಾಗುಳಿದರು. ಶಾದಾಬ್ ಖಾನ್ ಕೊನೆಯ ಎಸೆತದಲ್ಲಿ 4 ರನ್​ಗೆ ಔಟ್​ ಆದರು.

ಸೋಂಪಾಲ್ ಕಾಮಿ ನೇಪಾಳದ ಪರ 10 ಓವರ್​ ಮಾಡಿ 85 ಕೊಟ್ಟು 2 ವಿಕೆಟ್​ ಪಡೆದು ದುಬಾರಿಯಾದರು. ಸಂದೀಪ್ ಲಮಿಚಾನೆ, ಕರಣ್ ಕೆ.ಸಿ. ತಲಾ ಒಂದೊಂದು ವಿಕೆಟ್​ ಪಡೆದರು.

ಇದನ್ನೂ ಓದಿ: ಏಷ್ಯಾಕಪ್‌: ನೇಪಾಳ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನದ ಬಾಬರ್ ಆಜಮ್ ಭರ್ಜರಿ ಶತಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.