ಮುಲ್ತಾನ್ (ಪಾಕಿಸ್ತಾನ): ಈ ವರ್ಷದ ಏಕದಿನ ಕ್ರಿಕೆಟ್ ವಿಶ್ವಕಪ್ ಹಿನ್ನೆಲೆಯಲ್ಲಿ ಏಕದಿನ ಮಾದರಿಯಲ್ಲೇ ನಡೆಯುತ್ತಿರುವ ಏಷ್ಯಾ ಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ನೇಪಾಳ ತಂಡಗಳು ಇದೀಗ ಪರಸ್ಪರ ಮುಖಾಮುಖಿ ಆಗುತ್ತಿವೆ. ಕ್ರಿಕೆಟ್ ಶಿಶು ನೇಪಾಳದ ವಿರುದ್ಧ ವಿಶ್ವದ ಅಗ್ರ ಶ್ರೇಯಾಂಕಿತ ಏಕದಿನ ಕ್ರಿಕೆಟ್ ತಂಡವಾದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡುತ್ತಿದೆ.
"ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಮೊದಲೇ ನಾವು ತಂಡವನ್ನು ಪ್ರಕಟಿಸಿದ್ದೇವೆ" ಎಂದು ಬಾಬರ್ ಆಜಮ್ ಹೇಳಿದರು. "ಪಿಚ್ ಶುಷ್ಕವಾಗಿದೆ. ಮೊದಲು ಬ್ಯಾಟಿಂಗ್ ಮಾಡಲು ಸಹಕಾರಿಯಾಗುವಂತೆ ಕಾಣುತ್ತಿದೆ" ಎಂದರು.
-
Pakistan won the all-important toss and have elected to bat first!
— AsianCricketCouncil (@ACCMedia1) August 30, 2023 " class="align-text-top noRightClick twitterSection" data="
Will Pakistan's opening batsmen weather the storm and set a formidable total? Or will Nepal's bowlers shine brightly in their maiden Asia Cup outing? 🤩💪#AsiaCup2023 #PAKvNEP pic.twitter.com/E9Zf1zzddN
">Pakistan won the all-important toss and have elected to bat first!
— AsianCricketCouncil (@ACCMedia1) August 30, 2023
Will Pakistan's opening batsmen weather the storm and set a formidable total? Or will Nepal's bowlers shine brightly in their maiden Asia Cup outing? 🤩💪#AsiaCup2023 #PAKvNEP pic.twitter.com/E9Zf1zzddNPakistan won the all-important toss and have elected to bat first!
— AsianCricketCouncil (@ACCMedia1) August 30, 2023
Will Pakistan's opening batsmen weather the storm and set a formidable total? Or will Nepal's bowlers shine brightly in their maiden Asia Cup outing? 🤩💪#AsiaCup2023 #PAKvNEP pic.twitter.com/E9Zf1zzddN
ಇದೇ ಮೊದಲ ಬಾರಿಗೆ ಏಷ್ಯಾಕಪ್ ಆಡುತ್ತಿರುವ ನೇಪಾಳ ಈ ಪಂದ್ಯದಲ್ಲಿ ಪೈಪೋಟಿ ನೀಡುವ ಉತ್ಸಾಹದಲ್ಲಿದೆ. ಟಾಸ್ ನಂತರ ಮಾತನಾಡಿದ ತಂಡದ ನಾಯಕ ರೋಹಿತ್ ಪೌಡೆಲ್, "ಖುಷಿಯಲ್ಲಿದ್ದೇವೆ. ಏಷ್ಯಾಕಪ್‌ನಲ್ಲಿ ಇದು ನಮ್ಮ ಮೊದಲ ಪಂದ್ಯ. ನೇಪಾಳದ ಪ್ರತಿಯೊಬ್ಬರೂ ಪಂದ್ಯದ ಬಗ್ಗೆ ಉತ್ಸುಕರಾಗಿದ್ದಾರೆ. ಇಲ್ಲಿನ ವಾತಾವರಣ ಮತ್ತು ಪಿಚ್ ನೇಪಾಳಕ್ಕೆ ಹೋಲುತ್ತದೆ. ಬ್ಯಾಟ್ ಮಾಡಲು ಸುಂದರವಾದ ವಿಕೆಟ್‌ನಂತೆ ಕಾಣುತ್ತಿದೆ" ಎಂದು ಹೇಳಿದರು.
ವೇಗದ ಬೌಲಿಂಗ್ನಲ್ಲಿ ಅಸಾಧಾರಣ ಆಟಗಾರರನ್ನು ಹೊಂದಿರುವ ಪಾಕಿಸ್ತಾನಕ್ಕೆ ಸ್ಪಿನ್ ಬೌಲಿಂಗ್ನಲ್ಲಿ ಸಾಮರ್ಥ್ಯ ಹೊಂದಿರುವ ನೇಪಾಳ ಎದುರಾಳಿಯಾಗಿದೆ. ಇಲ್ಲಿ ಪಾಕಿಸ್ತಾನವು ನೇಪಾಳವನ್ನು ಕಡೆಗಣಿಸುವಂತಿಲ್ಲ. ಇತ್ತೀಚೆಗೆ ಪಾಕ್ ಅಫ್ಘಾನಿಸ್ತಾನದ ವಿರುದ್ಧ ಆಡಿದ ಪಂದ್ಯದಲ್ಲಿ ಸ್ಪಿನ್ ಸವಾಲು ಎದುರಿಸಲು ಹರಸಾಹಸಪಟ್ಟಿತ್ತು. ನೇಪಾಳದಲ್ಲಿ 23 ವರ್ಷದ ಸಂದೀಪ್ ಲಮಿಚಾನೆ ಅವರು ಪಾಕ್ಗೆ ತಲೆನೋವಾಗಿ ಕಾಡಲಿದ್ದಾರೆ. 2018ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಸಂದೀಪ್, ಈವರೆಗೆ 49 ಏಕದಿನ ಪಂದ್ಯಗಳಿಂದ 111 ವಿಕೆಟ್‌ಗಳನ್ನು ಪಡೆದಿದ್ದಾರೆ.
ತಂಡಗಳು ಇಂತಿವೆ.. ನೇಪಾಳ: ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ ಕೀಪರ್), ರೋಹಿತ್ ಪೌಡೆಲ್ (ನಾಯಕ), ಆರಿಫ್ ಶೇಖ್, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸೋಂಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಮಿಚಾನೆ, ಲಲಿತ್ ರಾಜಬನ್ಶಿ
ಪಾಕಿಸ್ತಾನ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಆಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್
ಇದನ್ನೂ ಓದಿ: ಏಷ್ಯಾಕಪ್ 2023: ನೇಪಾಳದ ವಿರುದ್ಧ ಪಾಕಿಸ್ತಾನದ 11 ಆಟಗಾರರ ತಂಡ ಪ್ರಕಟ, ತಂಡಕ್ಕೆ ಮರಳಿದ ಇಫ್ತಿಕರ್, ನಸೀಮ್