ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್‌ನಲ್ಲಿ ಭಾರತದೊಂದಿಗೆ ಸೂಪರ್ ಫೋರ್ ಹಂತದ ಘರ್ಷಣೆಗೆ ಪಾಕಿಸ್ತಾನ ಶನಿವಾರ ತನ್ನ ಪ್ಲೇಯಿಂಗ್ ಇಲೆವೆನ್ ಅನ್ನು ಪ್ರಕಟಿಸಿದೆ, ಮಳೆಯಿಂದ ಗ್ರೂಪ್ ಹಂತದ ಪಂದ್ಯದಲ್ಲಿ ಪಾಕ್ಗೆ ಬ್ಯಾಟಿಂಗ್ ಅವಕಾಶ ಸಿಕ್ಕಿರಲಿಲ್ಲ. ನಾಳೆ ಭಾರತೀಯ ಕಾಲಮಾನ 3ಕ್ಕೆ ಇಲ್ಲಿನ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಇದಕ್ಕೆ ಮಳೆ ಮುನ್ಸೂಚನೆ ಇದ್ದರೂ ಮೀಸಲು ದಿನ ಇರುವುದು ಪಂದ್ಯ ಫಲಿತಾಂಶ ಕಾಣುವ ಸಾಧ್ಯತೆ ಹೆಚ್ಚಿದೆ.
-
Our playing XI for the #PAKvIND match 🇵🇰#AsiaCup2023 pic.twitter.com/K25PXbLnYe
— Pakistan Cricket (@TheRealPCB) September 9, 2023 " class="align-text-top noRightClick twitterSection" data="
">Our playing XI for the #PAKvIND match 🇵🇰#AsiaCup2023 pic.twitter.com/K25PXbLnYe
— Pakistan Cricket (@TheRealPCB) September 9, 2023Our playing XI for the #PAKvIND match 🇵🇰#AsiaCup2023 pic.twitter.com/K25PXbLnYe
— Pakistan Cricket (@TheRealPCB) September 9, 2023
ಸೂಪರ್ ಫೋರ್ ಹಂತದ ಮೊದಲ ಪಂದ್ಯವನ್ನು ಪಾಕಿಸ್ತಾನ ಬಾಂಗ್ಲಾದೇಶದ ವಿರುದ್ಧ ಆಡಿತ್ತು. ಆ ಪಂದ್ಯ ಪಾಕಿಸ್ತಾನದ ಲಾಹೋರ್ನಲ್ಲಿ ನಡೆದಿತ್ತು. ಈ ಪಂದ್ಯಕ್ಕೂ ಬಾಂಗ್ಲಾ ವಿರುದ್ಧದ ಆಟಗಾರರನ್ನೇ ಇಳಿಸುವುದಾಗಿ ಪ್ರಕಟಿಸಿದೆ. ಭಾರತವನ್ನು ಗುಂಪು ಹಂತದ ಮೊದಲ ಪಂದ್ಯದಲ್ಲಿ ಕಾಡಿದ ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ ಮತ್ತು ಹಾರಿಸ್ ರೌಫ್ ನಾಳೆಯೂ ಆಡಲಿದ್ದಾರೆ.
ಗುಂಪು ಹಂತದ ಭಾರತದ ವಿರುದ್ಧದ ಪಂದ್ಯಕ್ಕೆ ಫಹೀಮ್ ಅಶ್ರಫ್ ಇರಲಿಲ್ಲ. ನಾಳಿನ ಪಂದ್ಯಕ್ಕೆ ಅವರನ್ನು ಆಡಿಸಲಾಗುತ್ತಿದೆ. ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 7 ಓವರ್ ಮಾಡಿ 27 ರನ್ ಕೊಟ್ಟು 3.90 ಎಕಾನಮಿಯಲ್ಲಿ 1 ವಿಕೆಟ್ ಪಡೆದು ಫಹೀಮ್ ಅಶ್ರಫ್ ಪ್ರಬಾವಿ ಬೌಲರ್ ಎನಿಸಿಕೊಂಡಿದ್ದರು. ಹೀಗಾಗಿ ಅಶ್ರಫ್ ಅವರನ್ನು ನಾಳಿನ ಪಂದ್ಯಕ್ಕೆ ಬಾಬರ್ ಉಳಿಸಿಕೊಂಡಿದ್ದಾರೆ.
ಪಲ್ಲೆಕೆಲೆಯಲ್ಲಿ ನಡೆದ ಲೀಗ ಪಂದ್ಯದ ವೇಳೆ ಭಾರತ 66 ರನ್ ಗಳಿಸುವಷ್ಟರಲ್ಲಿ ತನ್ನ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಶಾಹೀನ್ ಶಾ ಅಫ್ರಿದಿ ನೇತೃತ್ವದ ಪಾಕ್ ಬೌಲರ್ಗಳು ಪ್ರಬಾವಿ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು. ಆದರೆ ಭಾರತದ ಮಧ್ಯಮ ಕ್ರಮಾಂಕದ ಆಟಗಾರರು, ನಂತರದ ಪಾಕ್ ದಾಳಿಯನ್ನು ಹಿಮ್ಮೆಟ್ಟಿಸಿದ್ದರಿಂದ ಭಾರತ ತಂಡ ಗೌರವಯುತ ರನ್ಗಳಿಸಲು ಸಾಧ್ಯವಾಗಿತ್ತು. ಆ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ 80 ಪ್ಲೆಸ್ ರನ್ 266 ಸ್ಕೋರ್ ಕಲೆಹಾಕಲು ಸಹಕಾರಿ ಆಗಿತ್ತು.
ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಇಬ್ಬರೂ ಸ್ಪಿನ್ನರ್‌ಗಳಾದ ಶಾದಾಬ್ ಖಾನ್, ಮೊಹಮ್ಮದ್ ನವಾಜ್ ಮತ್ತು ಸಲ್ಮಾನ್ ಅಲಿ ಅಘಾ ಅವರು ಶತಕದ ಜೊತೆಯಾಟವನ್ನು ಹಂಚಿಕೊಂಡಿದ್ದರಿಂದ ಭಾರತದ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ನಾಲ್ಕನೇ ಸೀಮರ್‌ನ ಅವಶ್ಯಕತೆಯಿದೆ ಎಂದು ಪಾಕಿಸ್ತಾನ ಭಾವಿಸಿದೆ. ಪಾಕಿಸ್ತಾನವು ನಾಳಿನ ಪಂದ್ಯಕ್ಕೆ ಮೊಹಮ್ಮದ್ ನವಾಜ್ ಅವರನ್ನು ಕೈಬಿಟ್ಟಿದೆ, ಉಪನಾಯಕ ಶಹಾಬ್ ಖಾನ್ ಮತ್ತು ಸಲ್ಮಾನ್ ಅಘಾ ಅವರನ್ನು ಇಬ್ಬರು ಸ್ಪಿನ್ನರ್‌ಗಳಾಗಿ ಉಳಿಸಿಕೊಂಡಿದೆ.
ಪಾಕಿಸ್ತಾನ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಹೀಮ್ ಅಶ್ರಫ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ , ಹಾರಿಸ್ ರೌಫ್
ಇದನ್ನೂ ಓದಿ: ಎಂಟು ದಿನದ ಬಳಿಕ ಮತ್ತೆ ಪಾಕ್ ಮೇಲೆ ಪಂದ್ಯ.. ಭಾರತ ತಂಡದಲ್ಲಿ ಎರಡು ಬದಲಾವಣೆ ಖಂಡಿತಾ!