ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ ಕೀರೀಟಕ್ಕಾಗಿ ಇಂದು ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ಸೆಣಸಾಡುತ್ತಿದ್ದು, ಟಾಸ್ ಗೆದ್ದ ಲಂಕಾ ನಾಯಕ ಶನಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಗಾಯಗೊಂಡ ಅಕ್ಷರ್ ಪಟೇಲ್ ಏಷ್ಯಾಕಪ್ನಿಂದ ಹೊರಗುಳಿದಿದ್ದು ಅವರ ಜಾಗಕ್ಕೆ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಉಳಿದಂತೆ ಬಾಂಗ್ಲಾದೇಶದ ಪಂದ್ಯಕ್ಕೆ ವಿಶ್ರಾಂತಿ ನೀಡಿದ್ದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಮತ್ತೆ ತಂಡಕ್ಕೆ ಸೇರಿಕೊಂಡಿದ್ದಾರೆ.
ಶುಕ್ರವಾರ ನಡೆದ ಬಾಂಗ್ಲಾದೇಶದ ವಿರುದ್ಧದ ಸೂಪರ್ ಫೋರ್ ಹಂತದ ಪಂದ್ಯದ ವೇಳೆ ಎಡ ಕಾಲಿನ ತೊಡೆಯ ಭಾಗಕ್ಕೆ ಒತ್ತಡದ ನೋವಿಗೆ ಒಳಗಾದ ಅಕ್ಷರ್ ಪಟೇಲ್ ಅವರು ಏಷ್ಯಾಕಪ್ನಿಂದ ಹೊರಗುಳಿದಿದ್ದಾರೆ. ಅವರ ಜಾಗಕ್ಕೆ ನಿನ್ನೆ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆರ್ ಪ್ರೇಮದಾಸ ಮೈದಾನ ಸ್ಪಿನ್ಗೆ ಸಹಕಾರಿ ಆಗಿರುವುದರಿಂದ ಇಂದಿನ ಪಂದ್ಯದಲ್ಲಿ ಮೂರನೇ ಸ್ಪಿನ್ನರ್ ಆಗಿ ವಾಷಿಂಗ್ಟನ್ ಸುಂದರ್ ಅವರನ್ನು ತಂಡದಲ್ಲಿ ಆಡಿಸಲಾಗುತ್ತಿದೆ.
-
🚨 Toss & Team News from Colombo 🚨
— BCCI (@BCCI) September 17, 2023 " class="align-text-top noRightClick twitterSection" data="
Sri Lanka have elected to bat against #TeamIndia in the #AsiaCup2023 Final.
Here's our Playing XI 🙌 #INDvSL
Follow the match ▶️ https://t.co/xrKl5d85dN pic.twitter.com/tzLDct6Ppb
">🚨 Toss & Team News from Colombo 🚨
— BCCI (@BCCI) September 17, 2023
Sri Lanka have elected to bat against #TeamIndia in the #AsiaCup2023 Final.
Here's our Playing XI 🙌 #INDvSL
Follow the match ▶️ https://t.co/xrKl5d85dN pic.twitter.com/tzLDct6Ppb🚨 Toss & Team News from Colombo 🚨
— BCCI (@BCCI) September 17, 2023
Sri Lanka have elected to bat against #TeamIndia in the #AsiaCup2023 Final.
Here's our Playing XI 🙌 #INDvSL
Follow the match ▶️ https://t.co/xrKl5d85dN pic.twitter.com/tzLDct6Ppb
ಲಂಕಾದಲ್ಲೂ ಒಂದು ಬದಲಾವಣೆ: ಲಂಕಾದ ಸ್ಪಿನ್ನರ್ ಮಹೇಶ್ ತೀಕ್ಷ್ಣ ಗಾಯಗೊಂಡಿದ್ದರಿಂದ ಅವರ ಬದಲಿಯಾಗಿ ತಂಡದಲ್ಲಿ ದುಶನ್ ಹೇಮಂತ ಅವರನ್ನು ಆಡಿಸಲಾಗುತ್ತಿದೆ.
ಪಂದ್ಯಾರಂಭಕ್ಕೆ ಮಳೆ ಅಡ್ಡಿ: ಹವಾಮಾನ ಮುನ್ಸೂಚನೆಯ ಪ್ರಕಾರ ಇಂದು ಕೊಲಂಬೊದಲ್ಲಿ ಮಳೆಯ ಬರುವ ಪ್ರಮಾಣ ಕಡಿಮೆ ಎಂದು ಹೇಳಲಾಗಿತ್ತು. ಆದರೆ, ಪಂದ್ಯ ಆರಂಭಕ್ಕೆ 10 ನಿಮಿಷಕ್ಕೂ ಮುನ್ನ ಮಳೆ ಬಂದ ಕಾರಣ ಆಟ ತಡವಾಗಿ ಆರಂಭವಾಗಿದೆ. ಇಂದು ಪಂದ್ಯಕ್ಕೆ ಸಂಪೂರ್ಣವಾಗಿ ಮಳೆ ಅಡ್ಡಿ ಉಂಟುಮಾಡಿದರೆ ನಾಳೆ ಪಂದ್ಯ ನಡೆಯಲಿದೆ. ಈಗಾಗಲೇ ಎಸಿಸಿ ಸೋಮವಾರವನ್ನು ಮೀಸಲು ದಿನವಾಗಿ ಘೋಷಿಸಿದೆ.
-
🚨 NEWS: Washington Sundar replaces Axar Patel
— BCCI (@BCCI) September 16, 2023 " class="align-text-top noRightClick twitterSection" data="
Mr. Axar Patel has been ruled out of the #AsiaCup2023 final against Sri Lanka due to a left quadriceps strain sustained during India's Super Four match against Bangladesh on Friday. #TeamIndia
Details 🔽https://t.co/CNZ2DDlBBa
">🚨 NEWS: Washington Sundar replaces Axar Patel
— BCCI (@BCCI) September 16, 2023
Mr. Axar Patel has been ruled out of the #AsiaCup2023 final against Sri Lanka due to a left quadriceps strain sustained during India's Super Four match against Bangladesh on Friday. #TeamIndia
Details 🔽https://t.co/CNZ2DDlBBa🚨 NEWS: Washington Sundar replaces Axar Patel
— BCCI (@BCCI) September 16, 2023
Mr. Axar Patel has been ruled out of the #AsiaCup2023 final against Sri Lanka due to a left quadriceps strain sustained during India's Super Four match against Bangladesh on Friday. #TeamIndia
Details 🔽https://t.co/CNZ2DDlBBa
ತಂಡಗಳು ಇಂತಿವೆ.. ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್
ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಪೆರೇರಾ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ದುಶನ್ ಹೇಮಂತ, ಪ್ರಮೋದ್ ಮದುಶನ್, ಮತೀಶ ಪತಿರಾನ
ಇದನ್ನೂ ಓದಿ: ದ.ಆಫ್ರಿಕಾ-ಆಸ್ಟ್ರೇಲಿಯಾ ನಡುವೆ ನಿರ್ಣಾಯಕ ಪಂದ್ಯ: ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ದ.ಆಫ್ರಿಕಾಕ್ಕೆ ಆರಂಭಿಕ ಆಘಾತ