ETV Bharat / sports

2022ರ ಏಷ್ಯಾಕಪ್​​ ಟೂರ್ನಿಗೆ ಮುಹೂರ್ತ ಫಿಕ್ಸ್​​.. ಆಗಸ್ಟ್​​ 27ರಿಂದ T20 ಮಾದರಿಯಲ್ಲಿ ಟೂರ್ನಿ

ಕೊರೊನಾರ್ಭಟಕ್ಕೆ ಮುಂದೂಡಲ್ಪಟ್ಟಿದ್ದ ಏಷ್ಯಾಕಪ್​ ಟೂರ್ನಾಮೆಂಟ್​ ನಡೆಸಲು ಕೊನೆಗೂ ಕಾಲ ಕೂಡಿ ಬಂದಿದ್ದು, ಆಗಸ್ಟ್​​ 27ರಿಂದ ಪಂದ್ಯಗಳು ಆರಂಭಗೊಳ್ಳಲಿವೆ.

Asia Cup 2022
Asia Cup 2022
author img

By

Published : Mar 19, 2022, 4:02 PM IST

ಹೈದರಾಬಾದ್​​: 2022ರ ಏಷ್ಯಾಕಪ್​​ ಶ್ರೀಲಂಕಾದಲ್ಲಿ ನಡೆಯಲಿದ್ದು, ಅದಕ್ಕಾಗಿ ಕೊನೆಗೂ ಮುಹೂರ್ತ ಫಿಕ್ಸ್​​ ಆಗಿದೆ. ಆಗಸ್ಟ್​​​ 27ರಿಂದ ಈ ಟೂರ್ನಿ ಆರಂಭವಾಗಲಿದ್ದು, ಟಿ-20 ಮಾದರಿಯಲ್ಲಿ ಎಲ್ಲ ಪಂದ್ಯಗಳು ನಡೆಯಲಿವೆ.

ಏಷ್ಯಾಕಪ್ ಟೂರ್ನಿಗಾಗಿ ಕ್ವಾಲಿಫೈಯರ್​ ಪಂದ್ಯಗಳು ಆಗಸ್ಟ್​​​ 20ರಿಂದ ಆರಂಭಗೊಳ್ಳಲಿದ್ದು, ಟೂರ್ನಿ ಆಗಸ್ಟ್​​ 27ರಿಂದ ಆರಂಭಗೊಂಡು ಸೆಪ್ಟಂಬರ್​​ 11ರಂದು ಮುಕ್ತಾಯಗೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಟ್ವಿಟರ್​ ಮೂಲಕ ಅಧಿಕೃತ ಮಾಹಿತಿ ಹೊರಹಾಕಿದೆ.

  • The Asia Cup 2022 (T20 Format) will be held in Sri Lanka from 27 August - 11 September later this year. The Qualifiers for the same will be played 20 August 2022 onwards.

    — AsianCricketCouncil (@ACCMedia1) March 19, 2022 " class="align-text-top noRightClick twitterSection" data=" ">

ಪ್ರತಿ ಎರಡು ವರ್ಷಕ್ಕೊಮ್ಮೆ ಏಷ್ಯಾಕಪ್ ಟೂರ್ನಿ ನಡೆಸಲಾಗುತ್ತದೆ. ಆದರೆ, ಕೋವಿಡ್​ನಿಂದಾಗಿ 2020ರ ಟೂರ್ನಿ ರದ್ದುಗೊಳಿಸಿ ಏಷ್ಯನ್​ ಕ್ರಿಕೆಟ್ ಕೌನ್ಸಿಲ್​​ ಪ್ರಕಟಣೆ ಹೊರಡಿಸಿತ್ತು. ಆದರೆ, 2021ರಲ್ಲಿ ಟೂರ್ನಿ ನಡೆಸಲು ಎಸಿಸಿ ಕ್ರಮ ಕೈಗೊಂಡಿತ್ತು. ಈ ವೇಳೆ ಕೋವಿಡ್ ಮತ್ತಷ್ಟು ಉಲ್ಬಣಗೊಳ್ಳುತ್ತಿದ್ದಂತೆ ಟೂರ್ನಿ ಮುಂದೂಡಿಕೆ ಮಾಡಲಾಗಿತ್ತು.

14ನೇ ಆವೃತ್ತಿ ಏಷ್ಯಾ ಕಪ್​ ಟೂರ್ನಿ ಇದಾಗಿದ್ದು, 1984ರಿಂದಲೂ ನಡೆಯುತ್ತಿರುವ ಈ ಟೂರ್ನಾಮೆಂಟ್​​ನಲ್ಲಿ ಭಾರತ ಏಳು ಸಲ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಉಳಿದಂತೆ ಶ್ರೀಲಂಕಾ ಐದು ಸಲ ಚಾಂಪಿಯನ್​​ ಆಗಿದ್ದು, ಪಾಕಿಸ್ತಾನ ಕೇವಲ ಎರಡು ಸಲ ಪ್ರಶಸ್ತಿ ಗೆದ್ದಿದೆ.

2022ರ ಏಷ್ಯಾಕಪ್​​ನಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಆಫ್ಘಾನಿಸ್ತಾನ ಸೇರಿದಂತೆ ಒಂದು ಕ್ವಾಲಿಫೈಯರ್ ತಂಡ ಭಾಗಿಯಾಗಲಿದೆ. ಕ್ವಾಲಿಫೈಯರ್​​ನಲ್ಲಿ ಯುಎಇ ಮತ್ತು ಕುವೈತ್​ ಸೆಣಸಾಟ ನಡೆಸಲಿವೆ.

ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ವಿರೋಚಿತ ಸೋಲು ಕಂಡ ಭಾರತ.. ಸೆಮಿಫೈನಲ್ ಹಾದಿ ಕಠಿಣ..

2018ರಲ್ಲಿ ಕೊನೆಯ ಬಾರಿ ಏಷ್ಯಾಕಪ್​ ನಡೆದಿತ್ತು. ನಂತರ 2020ರ ಆವೃತ್ತಿಯನ್ನು ಶ್ರೀಲಂಕಾಗೆ ಸ್ಥಳಾಂತರಿಸಲಾಗಿತ್ತು. ಆದರೆ, ಕಳೆದ ವರ್ಷ ವಿಶ್ವದಾದ್ಯಂತ ಕೋವಿಡ್ 19 ಸಾಂಕ್ರಾಮಿಕವಿದ್ದ ಕಾರಣ 2021 ಜೂನ್​ಗೆ ಮುಂದೂಡಲಾಗಿತ್ತು. ಆದರೆ ಆತಿಥ್ಯ ವಹಿಸಿಕೊಳ್ಳಬೇಕಿದ್ದ ಶ್ರೀಲಂಕಾದಲ್ಲಿ ಕೊರೊನಾ ಏರಿಕೆಯಾಗಿದ್ದ ಕಾರಣ ಮತ್ತೊಮ್ಮೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ ದಿನಾಂಕ ನಿಗದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.