ದುಬೈ: ಅರಬ್ ನಾಡಲ್ಲಿ ನಾಳೆಯಿಂದ ಏಷ್ಯಾಕಪ್ ಟಿ20 ಹಣಾಹಣಿ ಆರಂಭಗೊಳ್ಳಲಿದೆ. ಇದಕ್ಕಾಗಿ ಎಲ್ಲ ತಂಡಗಳು ಸನ್ನದ್ಧಗೊಂಡಿವೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಕೂಡ ಭರದ ಅಭ್ಯಾಸ ನಡೆಸುತ್ತಿದ್ದು, ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸೆಣಸಾಟ ನಡೆಸಲು ಭಾನುವಾರ ಕಣಕ್ಕಿಳಿಯಲಿದೆ.
ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಕೆಲ ಪ್ಲೇಯರ್ಸ್ ಐತಿಹಾಸಿಕ ಮೈಲಿಗಲ್ಲು ಸೃಷ್ಟಿಸುವ ತವಕದಲ್ಲಿದ್ದಾರೆ. ಆ ಸಾಲಿನಲ್ಲಿ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಕೂಡ ಇದ್ದಾರೆ. ಟಿ20 ಕ್ರಿಕೆಟ್ನಲ್ಲಿ ರಾಹುಲ್, ರೈನಾ, ಹೂಡಾ, ರೋಹಿತ್ ಶರ್ಮಾ ಹಾಗೂ ಹರ್ಮನ್ಪ್ರೀತ್ ಕೌರ್ ಬಳಿಕ ಶತಕ ಸಿಡಿಸಿರುವ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಇದೀಗ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆಯಲು ಉತ್ಸುಕರಾಗಿದ್ದಾರೆ.
-
Laughter, camera, some games and more....
— BCCI (@BCCI) August 26, 2022 " class="align-text-top noRightClick twitterSection" data="
Behind the scenes from #TeamIndia's headshots session ahead of #AsiaCup2022 📽️📽️ pic.twitter.com/go8nuPWBbg
">Laughter, camera, some games and more....
— BCCI (@BCCI) August 26, 2022
Behind the scenes from #TeamIndia's headshots session ahead of #AsiaCup2022 📽️📽️ pic.twitter.com/go8nuPWBbgLaughter, camera, some games and more....
— BCCI (@BCCI) August 26, 2022
Behind the scenes from #TeamIndia's headshots session ahead of #AsiaCup2022 📽️📽️ pic.twitter.com/go8nuPWBbg
ಅಗ್ರ ಸ್ಥಾನದ ಮೇಲೆ ಕಣ್ಣು: ಐಸಿಸಿ ಟಿ20 ಶ್ರೇಯಾಂಕ್ದಲ್ಲಿ ಈಗಾಗಲೇ ಎರಡನೇ ಸ್ಥಾನದಲ್ಲಿರುವ ಮಧ್ಯಮ ಕ್ರಮಾಂಕದ ಬ್ಯಾಟರ್ ಸೂರ್ಯಕುಮಾರ್, ಸದ್ಯ ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಂ ಅವರನ್ನು ಹಿಂದಿಕ್ಕಿ ನಂಬರ್ 1 ಬ್ಯಾಟರ್ ಆಗುವ ಅವಕಾಶ ಹೊಂದಿದ್ದಾರೆ. ಬಾಬರ್ ಆಜಂ 818 ಪಾಯಿಂಟ್ ಹೊಂದಿದ್ದು, ಸೂರ್ಯಕುಮಾರ್ ಯಾದವ್ 805 ಪಾಯಿಂಟ್ ಹೊಂದಿದ್ದಾರೆ. ಏಷ್ಯಾಕಪ್ ಕ್ರಿಕೆಟ್ನಲ್ಲಿ ಮಹತ್ವದ ರೆಕಾರ್ಡ್ ಬರೆಯಲು ಏಷ್ಯಾಕಪ್ ಅವರಿಗೆ ಒಳ್ಳೆಯ ವೇದಿಕೆಯಾಗಿದೆ.
ಇದನ್ನೂ ಓದಿ: ಐಸಿಸಿ ಟಿ20 ರ‍್ಯಾಂಕಿಂಗ್: 2ನೇ ಸ್ಥಾನಕ್ಕೆ ಲಗ್ಗೆ ಹಾಕಿದ ಮುಂಬೈಕರ್ ಸೂರ್ಯಕುಮಾರ್
ಉಳಿದಂತೆ ಟಿ20 ಕ್ರಿಕೆಟ್ನಲ್ಲಿ ಸಾವಿರ ರನ್ ಪೂರೈಸಲು ರಿಷಭ್ ಪಂತ್ಗೆ 117ರನ್ಗಳ ಅವಶ್ಯಕತೆ ಇದ್ದು, ಕೆ ಎಲ್ ರಾಹುಲ್ 2 ಸಾವಿರ ರನ್ ಪೂರೈಸಲು 335 ರನ್ಗಳು ಬೇಕು, ಹಾರ್ದಿಕ್ ಪಾಂಡ್ಯಾಗೆ 166ರನ್ ಬೇಕಾಗಿದೆ. ಉಳಿದಂತೆ ದಿನೇಶ್ ಕಾರ್ತಿಕ್ ಟಿ20 ಕ್ರಿಕೆಟ್ನಲ್ಲಿ 7 ಸಾವಿರ 4ರನ್ ಪೂರೈಸಲು 154ರನ್ಬೇಕಾಗಿವೆ. ಸೂರ್ಯಕುಮಾರ್ ಯಾದವ್ 115 ರನ್ ಸಿಡಿಸಿದರೆ ಟಿ20ಯಲ್ಲಿ 5 ಸಾವಿರ ರನ್ ಪೂರೈಸಿದಂತಾಗುತ್ತದೆ. ಇನ್ನೂ ರವೀಂದ್ರ ಜಡೇಜಾ ಕೇವಲ 1 ವಿಕೆಟ್ ಪಡೆದುಕೊಂಡರೆ ಏಷ್ಯಾಕಪ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್ ಆಗಿ ಹೊರಹೊಮ್ಮಲಿದ್ದಾರೆ. ಇನ್ನೂ ಏಷ್ಯಾಕಪ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿರುವ ಸಾಲಿನಲ್ಲಿ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಶಾಹಿದ್ ಆಫ್ರಿದಿ ಇದ್ದು, ಇದೀಗ ಆ ದಾಖಲೆ ಬ್ರೇಕ್ ಮಾಡಲು ರೋಹಿತ್ ಶರ್ಮಾಗೆ 6 ಸಿಕ್ಸರ್ಗಳ ಅವಶ್ಯಕತೆ ಇದೆ.
ಇದನ್ನೂ ಓದಿ: ಆಫ್ರಿದಿ ರೆಕಾರ್ಡ್ ಮೇಲೆ ಹಿಟ್ಮ್ಯಾನ್ ಕಣ್ಣು: ಸಿಕ್ಸರ್ ಸುರಿಮಳೆಗೈದು ದಾಖಲೆ ಪುಡಿಗಟ್ಟುವ ತವಕ