ದುಬೈ: ಏಷ್ಯಾಕಪ್ ಟೂರ್ನಾಮೆಂಟ್ನ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ- ಅಫ್ಘಾನಿಸ್ಥಾನ ತಂಡ ಮುಖಾಮುಖಿಯಾಗಿದ್ದು, ಟಾಸ್ ಗೆದ್ದಿರುವ ಅಫ್ಘಾನಿಸ್ಥಾನ ಬೌಲಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಈ ಪಂದ್ಯ ಆಯೋಜನೆಗೊಂಡಿದೆ.
ಮೊದಲ ಪಂದ್ಯದಲ್ಲಿ ಗೆಲುವು ದಾಖಲು ಮಾಡುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡುವ ಇರಾದೆ ಉಭಯ ತಂಡಗಳಿಗಿದೆ. ಹೀಗಾಗಿ, ಪಂದ್ಯದಲ್ಲಿ ತೀವ್ರ ಪೈಪೋಟಿ ಕಂಡು ಬರಲಿದೆ. ಪ್ರಸಕ್ತ ಸಾಲಿನಲ್ಲಿ ಶ್ರೀಲಂಕಾ ಹೆಚ್ಚಿನ ಸೋಲು ಕಂಡಿದ್ದು, ಆದರೆ, ಈ ಸರಣಿಯಲ್ಲಿ ತಿರುಗೇಟು ನೀಡುವ ತವಕದಲ್ಲಿದೆ. ದೊಡ್ಡ ದೊಡ್ಡ ತಂಡಗಳಿಗೆ ಸೋಲಿನ ರುಚಿ ತೋರಿಸಿರುವ ಅಫ್ಘಾನಿಸ್ತಾನ ಸಹ ಗೆಲುವು ಸಾಧಿಸುವ ಸಾಮರ್ಥ್ಯ ಹೊಂದಿದೆ.
ಟಿ20 ಸರಣಿಯಲ್ಲಿ ಉಭಯ ತಂಡಗಳು ಇಲ್ಲಿಯವರೆಗೆ ಕೇವಲ ಒಂದು ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ಶ್ರೀಲಂಕಾ ಗೆಲುವು ಸಾಧಿಸಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ಉದ್ದೇಶದಿಂದ ಶ್ರೀಲಂಕಾ ಇಬ್ಬರು ಹೊಸ ಪ್ರತಿಭೆಗಳಿಗೆ ಮಣೆ ಹಾಕಿದೆ.
-
Two debutants for Sri Lanka! 🤩
— Sri Lanka Cricket 🇱🇰 (@OfficialSLC) August 27, 2022 " class="align-text-top noRightClick twitterSection" data="
Congratulations to Matheesha Pathirana and Dilshan Madushanka! 🎉#RoaringForGlory pic.twitter.com/WTb79DQ78G
">Two debutants for Sri Lanka! 🤩
— Sri Lanka Cricket 🇱🇰 (@OfficialSLC) August 27, 2022
Congratulations to Matheesha Pathirana and Dilshan Madushanka! 🎉#RoaringForGlory pic.twitter.com/WTb79DQ78GTwo debutants for Sri Lanka! 🤩
— Sri Lanka Cricket 🇱🇰 (@OfficialSLC) August 27, 2022
Congratulations to Matheesha Pathirana and Dilshan Madushanka! 🎉#RoaringForGlory pic.twitter.com/WTb79DQ78G
ಇದನ್ನೂ ಓದಿ: ಬಾಬರ್ ಆಜಂ ವಿಶ್ವದ ಅತ್ಯುತ್ತಮ ಬ್ಯಾಟರ್: ವಿರಾಟ್ ಕೊಹ್ಲಿ
ಶ್ರೀಲಂಕಾ ತಂಡ: ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್(ವಿ.ಕೀ), ಚರಿತ್ ಅಸಲಂಕಾ, ಭಾನುಕ ರಾಜಪಕ್ಸೆ, ದಸುನ್ ಶನಕ(ಕ್ಯಾಪ್ಟನ್), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಣ
ಅಫ್ಘಾನಿಸ್ತಾನ ತಂಡ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿ.ಕೀ), ಇಬ್ರಾಹಿಂ ಝದ್ರಾನ್, ಕರೀಮ್ ಜನತ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ಕ್ಯಾಪ್ಟನ್), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ನವೀನ್-ಉಲ್-ಹಕ್, ಮುಜೀಬ್ ಉರ್ಹಕ್ಮಾನ್, ಫರೂಕ್ಲ್ ರಹಖ್ಮಾನ್