ನವದೆಹಲಿ: ಗುಜರಾತ್ ಟೈಟನ್ಸ್ ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವಿಚಾರವಾಗಿ ಉಪ ನಾಯಕ ಹಾರ್ದಿಕ್ ಪಾಂಡ್ಯ ಕಾಲೆಳೆದಿದ್ದಾರೆ. ನಾನ್ ಸ್ಟ್ರೈಕರ್ನಲ್ಲಿ ಇರೋದು ನಾನಲ್ಲ, ಬದಲಿಗೆ ದಿನೇಶ್ ಕಾರ್ತಿಕ್ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಹಾರ್ದಿಕ್ ಪಾಂಡ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್ಗಳಲ್ಲಿ 211ರನ್ಗಳಿಕೆ ಮಾಡಿತ್ತು. ಹಾರ್ದಿಕ್ ಪಾಂಡ್ಯ ತಾವು ಎದುರಿಸಿದ 12 ಎಸೆತಗಳಲ್ಲಿ 31ರನ್ಗಳಿಕೆ ಮಾಡಿದ್ದರು. ಕೊನೆಯ ಓವರ್ನಲ್ಲಿ ನಾನ್ ಸ್ಟ್ರೈಕರ್ನಲ್ಲಿದ್ದ ದಿನೇಶ್ ಕಾರ್ತಿಕ್ಗೆ ಬ್ಯಾಟಿಂಗ್ ನೀಡುವ ಬದಲು ತಾವೇ ಖುದ್ದಾಗಿ ಎದುರಿಸಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ.
- — RohitKohliDhoni (@RohitKohliDhoni) June 9, 2022 " class="align-text-top noRightClick twitterSection" data="
— RohitKohliDhoni (@RohitKohliDhoni) June 9, 2022
">— RohitKohliDhoni (@RohitKohliDhoni) June 9, 2022
ಮೂರು ವರ್ಷಗಳ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದ್ದ ದಿನೇಶ್ ಕಾರ್ತಿಕ್ ನಿನ್ನೆ ತಾವು ಎದುರಿಸಿದ ಎರಡು ಎಸೆತಗಳಲ್ಲಿ 1ರನ್ಗಳಿಕೆ ಮಾಡಿದ್ದರು. ಸ್ಟ್ರೈಕರ್ನಲ್ಲಿದ್ದ ಹಾರ್ದಿಕ್ ಪಾಂಡ್ಯ, ಸಿಂಗಲ್ ರನ್ ತೆಗೆದುಕೊಳ್ಳುವ ಬದಲು ತಾವೇ ಮುಂದಿನ ಎಸೆತ ಎದುರಿಸಲು ಮುಂದಾಗಿದ್ದರು. ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ನಾಯಕತ್ವದ ಮೊದಲ ಪಂದ್ಯದಲ್ಲೇ ಸೋಲು.. ಕೊಹ್ಲಿ ಕಳಪೆ ರೆಕಾರ್ಡ್ ಪಟ್ಟಿ ಸೇರಿದ ರಿಷಭ್ ಪಂತ್!
ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಮೊದಲ ಟಿ - 20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭಿಕ ಆಟಗಾರ ಇಶಾನ್ ಕಿಶನ್(76)ರನ್ಗಳ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ನಷ್ಟಕ್ಕೆ 211ರನ್ಗಳಿಕೆ ಮಾಡಿತ್ತು. ಇದರ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಡುಸ್ಸೆನ್ ಅಜೇಯ 75 ಹಾಗೂ ಮಿಲ್ಲರ್ 64ರನ್ಗಳ ನೆರವಿನಿಂದ 19.1 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 0-1 ಅಂತರದ ಮುನ್ನಡೆ ಸಾಧಿಸಿದೆ.