ಲಂಡನ್: ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) 2021-22ರ ಪುರುಷರ ಮತ್ತು ಮಹಿಳಾ ಆ್ಯಶಸ್ ಸರಣಿಯನ್ನು ಆಸ್ಟ್ರೇಲಿಯಾದಲ್ಲಿ ನಡೆಸಲು ನಿರ್ಧರಿಸಿವೆ.
-
Who are you backing in the men's #Ashes Down Under? pic.twitter.com/l3v3fXvV9E
— ICC (@ICC) May 19, 2021 " class="align-text-top noRightClick twitterSection" data="
">Who are you backing in the men's #Ashes Down Under? pic.twitter.com/l3v3fXvV9E
— ICC (@ICC) May 19, 2021Who are you backing in the men's #Ashes Down Under? pic.twitter.com/l3v3fXvV9E
— ICC (@ICC) May 19, 2021
ಮೊದಲು ಪುರುಷರ ಆ್ಯಶಸ್ ಟೆಸ್ಟ್ ಸರಣಿ ನಡೆಯಲಿದ್ದು, ಡಿಸೆಂಬರ್ 8 ರಿಂದ ಮೊದಲ ಟೆಸ್ಟ್ ಆರಂಭವಾಗಲಿದೆ. ಡಿಸೆಂಬರ್ 8 ರಿಂದ 12 ರವರಗೆ ಮೊದಲ ಟೆಸ್ಟ್ ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆಯುತ್ತೆ. ಎರಡನೇ ಟೆಸ್ಟ್ ಡಿಸೆಂಬರ್ 16-20 ಅಡಿಲೇಡ್ನ ಓವಲ್‌ನಲ್ಲಿ ಹಗಲು-ರಾತ್ರಿ ಟೆಸ್ಟ್ ನಡೆಯಲಿದೆ. ಮೂರನೇ ಟೆಸ್ಟ್ ಡಿಸೆಂಬರ್ 26-30, ಹಾಗೂ ನಾಲ್ಕನೇ ಟೆಸ್ಟ್ ಜನವರಿ 5-9 ರ ವರಗೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ. ಅಂತಿಮ ಮತ್ತು ಐದನೇ ಟೆಸ್ಟ್ ಪಂದ್ಯ ಜನವರಿ 14-18 ರವರಗೆ ಪರ್ತ್‌ನ ಆಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
-
Calendars at the ready 📆
— ICC (@ICC) May 19, 2021 " class="align-text-top noRightClick twitterSection" data="
The women's #Ashes fixtures have been released 👇 pic.twitter.com/jzffQPuA7M
">Calendars at the ready 📆
— ICC (@ICC) May 19, 2021
The women's #Ashes fixtures have been released 👇 pic.twitter.com/jzffQPuA7MCalendars at the ready 📆
— ICC (@ICC) May 19, 2021
The women's #Ashes fixtures have been released 👇 pic.twitter.com/jzffQPuA7M
26 ವರ್ಷಗಳಲ್ಲಿ ಮೊದಲ ಬಾರಿಗೆ ಅಂತಿಮ ಆ್ಯಶಸ್ ಟೆಸ್ಟ್ ಸಿಡ್ನಿಯಲ್ಲಿ ನಡೆಯುತ್ತಿಲ್ಲ. ಇನ್ನು, ಮಹಿಳೆಯರ ಟೆಸ್ಟ್ ಪಂದ್ಯ ಜನವರಿ 27-30 ರವರಗೆ ಓವಲ್‌ನಲ್ಲಿ ನಡೆಯಲಿದೆ.
ಮೂರು ಟಿ -20 ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳು ಸಿಡ್ನಿಯಲ್ಲಿ (ಫೆಬ್ರವರಿ 4 ಮತ್ತು 6) ಮತ್ತು ಕೊನೆಯ ಪಂದ್ಯ ಅಡಿಲೇಡ್ ಓವಲ್ (ಫೆಬ್ರವರಿ 10) ರಂದು ನಡೆಯಲಿದೆ. ಇನ್ನು ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಫೆಬ್ರವರಿ 13 ಅಡಿಲೇಡ್ ಓವಲ್‌ನಲ್ಲಿ ನಡೆದರೆ, ಇನ್ನುಳಿದ ಎರಡು ಪಂದ್ಯಗಳು ಮೆಲ್ಬೋರ್ನ್‌ನ ಜಂಕ್ಷನ್ ಓವಲ್ ನಲ್ಲಿ ಫೆಬ್ರವರಿ 16 ಮತ್ತು 19 ರಂದು ನಡೆಯಲಿವೆ.