ಮೆಲ್ಬೋರ್ನ್: ಗಾಯದ ಕಾರಣ ಆಸ್ಟ್ರೇಲಿಯಾದ ವೇಗಿ ಜೋಶ್ ಹೆಜಲ್ವುಡ್ ಗುರುವಾರದಿಂದ ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಆ್ಯಶಸ್ ಟೆಸ್ಟ್‌ನಿಂದ ಹೊರಬಿದ್ದಿದ್ದಾರೆ. ಬ್ರಿಸ್ಬೇನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಹೆಜಲ್ವುಡ್ ಗಾಯಗೊಂಡಿದ್ದರು.
ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ಗೆ ಒಂಬತ್ತು ವಿಕೆಟ್‌ಗಳ ಸೋಲುಣಿಸಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಹೆಜಲ್ವುಡ್ 3 ವಿಕೆಟ್ ಕಬಳಿಸಿದ್ದರು.
-
#Ashes Update | Josh Hazlewood will miss the second Vodafone Ashes Test in Adelaide with a side injury.
— Cricket Australia (@CricketAus) December 12, 2021 " class="align-text-top noRightClick twitterSection" data="
He returned to Sydney yesterday afternoon for further assessment and rehabilitation with a decision on his fitness for the Boxing Day Test to be made in due course.
">#Ashes Update | Josh Hazlewood will miss the second Vodafone Ashes Test in Adelaide with a side injury.
— Cricket Australia (@CricketAus) December 12, 2021
He returned to Sydney yesterday afternoon for further assessment and rehabilitation with a decision on his fitness for the Boxing Day Test to be made in due course.#Ashes Update | Josh Hazlewood will miss the second Vodafone Ashes Test in Adelaide with a side injury.
— Cricket Australia (@CricketAus) December 12, 2021
He returned to Sydney yesterday afternoon for further assessment and rehabilitation with a decision on his fitness for the Boxing Day Test to be made in due course.
ಗುರುವಾರದಿಂದ ಪ್ರಾರಂಭವಾಗುವ ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಜೋಶ್ ಅಲಭ್ಯರಾಗಿದ್ದು, ಚಿಕಿತ್ಸೆಗಾಗಿ ಭಾನುವಾರ ಸಿಡ್ನಿಗೆ ಮರಳಿದ್ದಾರೆ. ಹೀಗಾಗಿ ಈ ಪಂದ್ಯಕ್ಕೆ 11ರ ಬಳಗದಲ್ಲಿ ಹೆಜಲ್ವುಡ್ ಸ್ಥಾನಕ್ಕೆ ಜೈ ರಿಚರ್ಡ್‌ಸನ್ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಹೆಜಲ್ವುಡ್ ಅಲಭ್ಯತೆಯು ಆಸೀಸ್ಗೆ ಬಹುದೊಡ್ಡ ಹಿನ್ನಡೆಯಾಗಲಿದೆ. ಈ ಹಿಂದೆ ಹೆಜಲ್ವುಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲಿಯೋನ್ ಅವರಿದ್ದ ಬೌಲಿಂಗ್ ಪಡೆಯು ಎಲ್ಲಾ ಆರು ಆಶಸ್ ಟೆಸ್ಟ್‌ಗಳನ್ನು ಗೆದ್ದಿರುವ ದಾಖಲೆ ಹೊಂದಿದೆ.
ಅಲ್ಲದೆ, ಹೆಜಲ್ವುಡ್ ಹಗಲು-ರಾತ್ರಿ ಟೆಸ್ಟ್‌ಗಳಲ್ಲಿ ಕೇವಲ 19.90 ಸರಾಸರಿ ಹೊಂದಿದ್ದು, ಏಳು ಪಂದ್ಯಗಳಲ್ಲಿ 32 ವಿಕೆಟ್‌ಗಳೊಂದಿಗೆ ಸ್ಟಾರ್ಕ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ.
ವೇಗದ ಬೌಲರ್‌ಗಳಾದ ಮೈಕೆಲ್ ನೆಸರ್, ಜೈ ರಿಚರ್ಡ್‌ಸನ್ ಮತ್ತು ಲೆಗ್ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಅವರು ಇಂದು ಬೆಳಗ್ಗೆ ಅಡಿಲೇಡ್‌ನಲ್ಲಿ 14 ಮಂದಿಯ ತಂಡವನ್ನು ಸೇರಿಕೊಂಡಿದ್ದಾರೆ.