ಅಡಿಲೇಡ್ : ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲೂ ಆಸ್ಟ್ರೇಲಿಯಾ ಪ್ರಾಬಲ್ಯ ಮೆರೆದಿದೆ. ಡೇ ಅಂಡ್ ನೈಟ್ ಟೆಸ್ಟ್ನಲ್ಲಿ ಆಂಗ್ಲರನ್ನು ಮೊದಲ ಇನ್ನಿಂಗ್ಸ್ನಲ್ಲಿ 236 ರನ್ಗಳಿಗೆ ಕಟ್ಟಿ ಹಾಕಿ, 237 ರನ್ಗಳ ಬೃಹತ್ ಮುನ್ನಡೆ ಸಾಧಿಸಿದೆ.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 473 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತು. ಮಾರ್ನಸ್ ಲಾಬುಶೇನ್ 103, ಸ್ಟೀವ್ ಸ್ಮಿತ್ 95 ಹಾಗೂ ಡೇವಿಡ್ ವಾರ್ನರ್ 95 ರನ್ಗಳಿಸಿದ್ದರು.
473 ರನ್ಗಳನ್ನು ಹಿಂಬಾಲಿಸಿದ ಇಂಗ್ಲೆಂಡ್ ಕೇವಲ 12 ರನ್ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. 3ನೇ ದಿನ 17 ರನ್‌ಗಳೊಂದಿಗೆ ಬ್ಯಾಟಿಂಗ್ ಆರಂಭಿಸಿದ ಆಂಗ್ಲರು 236 ರನ್ಗಳಿಸಿ ಸರ್ವಪತನಗೊಂಡರು.
-
England are all out ☝️
— ICC (@ICC) December 18, 2021 " class="align-text-top noRightClick twitterSection" data="
Australia will bat again as they opt against enforcing the follow-on.
Watch the #Ashes live on https://t.co/CPDKNx77KV (in select regions) 📺#AUSvENG | #WTC23 pic.twitter.com/esticplAAj
">England are all out ☝️
— ICC (@ICC) December 18, 2021
Australia will bat again as they opt against enforcing the follow-on.
Watch the #Ashes live on https://t.co/CPDKNx77KV (in select regions) 📺#AUSvENG | #WTC23 pic.twitter.com/esticplAAjEngland are all out ☝️
— ICC (@ICC) December 18, 2021
Australia will bat again as they opt against enforcing the follow-on.
Watch the #Ashes live on https://t.co/CPDKNx77KV (in select regions) 📺#AUSvENG | #WTC23 pic.twitter.com/esticplAAj
3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ರೂಟ್ ಮತ್ತು ಡೇವಿಡ್ ಮಲನ್ 3ನೇ ವಿಕೆಟ್‌ಗೆ 138 ರನ್ ಸೇರಿಸಿದರು. ರೂಟ್ 116 ಎಸೆತಗಳಲ್ಲಿ 7 ಬೌಂಡರಿ ಸಹಿತ 62 ರನ್ಗಳಿಸಿ ಔಟಾದರೆ, ಮಲನ್ 157 ಎಸೆತಗಳಲ್ಲಿ 10 ಬೌಂಡರಿ ಸಹಿತ 80 ರನ್ಗಳಿಸಿ ಸ್ಟಾರ್ಕ್ಗೆ ವಿಕೆಟ್ ಒಪ್ಪಿಸಿದರು.
ಇವರಿಬ್ಬರ ವಿಕೆಟ್ ಪತನದ ನಂತರ ಬಂದ ಸ್ಟೋಕ್ಸ್ 34, ಒಲ್ಲಿ ಪೋಪ್ 5, ಜೋಶ್ ಬಟ್ಲರ್ ಶೂನ್ಯ, ಕ್ರಿಸ್ ವೋಕ್ಸ್ 24, ಬ್ರಾಡ್ 9 ಮತ್ತು ರಾಬಿನ್ಸನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಮಿಚೆಲ್ ಸ್ಟಾರ್ಕ್ 37ಕ್ಕೆ 4, ನೇಥನ್ ಲಿಯಾನ್ 58ಕ್ಕೆ 3, ಕ್ಯಾಮೆರಾನ್ ಗ್ರೀನ್ 24ಕ್ಕೆ 2, ಮೈಕಲ್ ನೇಸರ್ 33ಕ್ಕೆ 1 ವಿಕೆಟ್ ಪಡೆದರು.
ಇದನ್ನೂ ಓದಿ:ಕನ್ನಡಿಗ ಕೆ ಎಲ್ ರಾಹುಲ್ಗೆ ಭಾರತ ಟೆಸ್ಟ್ ತಂಡದ ಉಪನಾಯಕನ ಪಟ್ಟ