ಮುಂಬೈ : ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರ ಸಕ್ರಿಯರಾಗಿರುವ ಭಾರತ ತಂಡದ ಉಮೇಶ್ ಯಾದವ್ ಕೂಡ ಇಶಾಂತ್ ಶರ್ಮಾ ಮತ್ತು ರಹಾನೆಯವರಂತೆ ಇಂಗ್ಲೆಂಡ್ನಲ್ಲಿ ನಡೆಯಲಿರುವ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ತಮ್ಮ ಪಾಲಿಗೆ ವಿಶ್ವಕಪ್ ಇದ್ದಂತೆ ಎಂದಿದ್ದಾರೆ.
ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ, ಚೇತೇಶ್ವರ್ ಪೂಜಾರ, ಉಮೇಶ್ ಯಾದವ್, ಹನುಮ ವಿಹಾರಿ, ರವಿ ಚಂದ್ರನ್ ಅಶ್ವಿನ್ ಮತ್ತು ಇಶಾಂತ್ ಶರ್ಮಾ ಪ್ರಸ್ತುತ ಟೆಸ್ಟ್ ತಂಡದಲ್ಲಿ ಮಾತ್ರ ಆಡುತ್ತಿದ್ದಾರೆ.
ಹಾಗಾಗಿ, ಮುಂದಿನ ತಿಂಗಳು ಸೌತಾಂಪಟ್ಟನ್ನಲ್ಲಿ ನಡೆಯಲಿರುವ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಅವರ ಪಾಲಿನ ವಿಶ್ವಕಪ್ ಎಂದು ಭಾವಿಸಿದ್ದಾರೆ.
ಇಶಾಂತ್ ಶರ್ಮಾ ಮತ್ತು ರಹಾನೆ ಹೇಳಿರುವುದು ಸರಿಯಾಗಿದೆ. ಕೇವಲ ಟೆಸ್ಟ್ ಕ್ರಿಕೆಟ್ನಲ್ಲಿ ಆಡುವಂತಹ ನಮ್ಮಂಥವರಿಗೆ ಡಬ್ಲ್ಯೂಟಿಸಿ ವಿಶ್ವಕಪ್ ಸಮ ಎಂದು ಯಾದವ್ ಹೇಳಿದ್ದಾರೆ.
ನಾವು ಭವಿಷ್ಯದಲ್ಲಿ ಏಕದಿನ ತಂಡದಲ್ಲಿ ಆಡುತ್ತೇವೆ ಎನ್ನುವುದರ ಬಗ್ಗೆ ಖಚಿತತೆಯಿಲ್ಲ. ಆದ್ದರಿಂದ ಟೆಸ್ಟ್ ಆಟಗಾರನಿಗೆ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಒಂದು ವಿಶ್ವಕಪ್ ಇದ್ದಂತೆ. ನಾನೂ ಕೂಡ ಹಾಗೆಯೇ ಭಾವಿಸುತ್ತೇನೆ. ಡಬ್ಲ್ಯೂಟಿಸಿ ಫೈನಲ್ ವಿಭಿನ್ನ.
ಏಕೆಂದರೆ, ನಾವು ಫೈನಲ್ ತಲುಪುವ ಮುನ್ನ ಅತ್ಯಂತ ಶ್ರೇಷ್ಠ ತಂಡಗಳನ್ನು ಮಣಿಸಿ ಈ ಸ್ಥಾನ ತಲುಪಿದ್ದೇವೆ ಎಂದು ಉಮೇಶ್ ಯಾದವ್ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ:WTC ಫೈನಲ್ನಲ್ಲಿ ಕಿವೀಸ್ ವಿರುದ್ಧ ನಮ್ಮ ಬೌಲರ್ಗಳು ಮೇಲುಗೈ ಸಾಧಿಸಿಲಿದ್ದಾರೆ : ನೆಹ್ರಾ