ETV Bharat / sports

ತಂದೆಯ ಹಾದಿಯಲ್ಲೇ ಮಗ: ಸಚಿನ್​ರಂತೆ ರಣಜಿ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಅರ್ಜುನ್​

ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ರಣಜಿ ಟ್ರೋಫಿ ಪಾದಾರ್ಪಣೆ ಪಂದ್ಯದಲ್ಲೇ ಚೊಚ್ಚಲ ಪ್ರಥಮ ದರ್ಜೆ ಶತಕ ಬಾರಿಸಿ ಮಿಂಚಿದ್ದಾರೆ. ಸಚಿನ್​ ಕೂಡ ರಣಜಿ ಟ್ರೋಫಿ ಚೊಚ್ಚಲ ಪಂದ್ಯದಲ್ಲಿ ಶತಕ ಸಾಧನೆ ಮಾಡಿದ್ದರು.

arjun-tendulkar-hits-century-on-ranji-trophy-debut
ತಂದೆಯ ಹಾದಿಯಲ್ಲೇ ಮಗ: ಸಚಿನ್​ರಂತೆ ರಣಜಿ ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಅರ್ಜುನ್​
author img

By

Published : Dec 14, 2022, 6:16 PM IST

Updated : Dec 14, 2022, 7:08 PM IST

ಭಾರತದ ದಿಗ್ಗಜ ಕ್ರಿಕೆಟಿಗ, ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್(120 ರನ್,​ 207 ಎಸೆತ) ರಣಜಿ ಪಾದಾರ್ಪಣೆ ಪಂದ್ಯದಲ್ಲೇ ಚೊಚ್ಚಲ ಪ್ರಥಮ ದರ್ಜೆ ಶತಕ ಬಾರಿಸಿ ಮಿಂಚಿದ್ದಾರೆ. ಅಲ್ಲದೆ, ತಂದೆಯ ಹಾದಿಯಲ್ಲೇ ಮಗನೂ ಹೆಜ್ಜೆ ಇಟ್ಟಿದ್ದು, 34 ವರ್ಷಗಳ ಹಿಂದೆ ಸಚಿನ್ ಕೂಡ ತಮ್ಮ ರಣಜಿ ಟ್ರೋಫಿಯ ಚೊಚ್ಚಲ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದರು.

23 ವರ್ಷದ ಅರ್ಜುನ್ ತೆಂಡೂಲ್ಕರ್ ರಣಜಿ ಟ್ರೋಫಿ ಕ್ರಿಕೆಟ್​ ಟೂರ್ನಿಯಲ್ಲಿ ಗೋವಾ ತಂಡದ ಪರ ಆಡುತ್ತಿದ್ದಾರೆ. ರಾಜಸ್ಥಾನ ವಿರುದ್ಧದ ಅರ್ಜುನ್​ 15 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ 120 ರನ್ ಸಿಡಿಸಿದರು. ಕಾಕತಾಳೀಯ ಎಂಬಂತೆ 1988ರಲ್ಲಿ ಸಚಿನ್ ಕೂಡ ಇದೇ ಸಾಧನೆ ತೋರಿದ್ದರು. ಇದೀಗ ಮಗನೂ ಸಹ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ.

ಗೋವಾದ ಪೊರ್ವೊರಿಮ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಅರ್ಜುನ್ ತೆಂಡೂಲ್ಕರ್ ಶತಕದೊಂದಿಗೆ ಸುಯಶ್ ಪ್ರಭುದೇಸಾಯಿ(212) ಜೊತೆ 221 ರನ್ ಜೊತೆಯಾಟ ಆಡಿದರು. ಎರಡನೇ ದಿನದ ಅಂತ್ಯಕ್ಕೆ ಗೋವಾ 140 ಓವರ್‌ಗಳಲ್ಲಿ 8 ವಿಕೆಟ್​ಗೆ 493 ರನ್ ಪೇರಿಸಿದೆ. ಈ ಹಿಂದೆ ಮುಂಬೈ ಪರ ವೈಟ್​​ಬಾಲ್ ಕ್ರಿಕೆಟ್ ಆಡಿದ್ದ ಅರ್ಜುನ್, ಹೆಚ್ಚಿನ ಅವಕಾಶ ಸಿಗದ ಕಾರಣ ಈ ವರ್ಷದ ಆರಂಭದಲ್ಲಿ ಗೋವಾ ತಂಡ ಸೇರಿದ್ದಾರೆ.

ಅರ್ಜುನ್ 2018ರಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಅಂಡರ್-19 ತಂಡದ ಪರ ಪಾದಾರ್ಪಣೆ ಮಾಡಿದ್ದಾರೆ. ಎರಡು ಅನಧಿಕೃತ ಟೆಸ್ಟ್‌ ಪಂದ್ಯ ಆಡಿದ್ದಾರೆ. ಬೌಲಿಂಗ್ ಆಲ್‌ರೌಂಡರ್ ಎಂದು ಪರಿಗಣಿಸಲ್ಪಟ್ಟ ಅರ್ಜುನ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದಾರೆ. ಆದರೆ ಇನ್ನೂ ಒಂದೂ ಪಂದ್ಯ ಆಡಿಲ್ಲ. ಐಪಿಎಲ್ 2021 ಹರಾಜಿನಲ್ಲಿ ಅವರನ್ನು ಆಯ್ಕೆ ಮಾಡಲಾಯಿತಾದರೂ ಗಾಯದ ಕಾರಣದಿಂದ ಹೊರಗುಳಿದರು. ಬಳಿಕ ಐಪಿಎಲ್​ 2022ರ ಮೆಗಾ ಹರಾಜಿನಲ್ಲಿ ಕೂಡ ಮುಂಬೈ ಪುನಃ ಖರೀದಿಸಿದೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ 2020-21 ಆವೃತ್ತಿಯಲ್ಲಿ ಮುಂಬೈ ಪರ ಎರಡು ಪಂದ್ಯಗಳಲ್ಲಿ ಆಡಿದ್ದರು. 1988ರಲ್ಲಿ ಸಚಿನ್​ ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಮತ್ತು ದೇವಧರ್ ಟ್ರೋಫಿ ಚೊಚ್ಚಲ ಪಂದ್ಯಗಳಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಆಗಿದ್ದರು. ಡಿಸೆಂಬರ್ 11ರಂದು, ತೆಂಡೂಲ್ಕರ್ ಗುಜರಾತ್ ವಿರುದ್ಧ ಅಜೇಯ ಶತಕ ಬಾರಿಸಿದಾಗ ಅವರಿಗೆ ಕೇವಲ 15 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ: Ban Vs Ind 1st Test: ಶತಕದ ಹೊಸ್ತಿಲಲ್ಲಿ ಎಡವಿದ ಪೂಜಾರ, ಅಯ್ಯರ್ ಅರ್ಧಶತಕ

Last Updated : Dec 14, 2022, 7:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.