ಢಾಕಾ : ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ ವೆಸ್ಟ್ ಇಂಡೀಸ್ ತಂಡದ ಆಲ್ರೌಂಡರ್ ಆ್ಯಂಡ್ರೆ ರಸೆಲ್ ವಿಚಿತ್ರ ರೀತಿ ರನ್ಔಟ್ ಆಗಿದ್ದಾರೆ. ಈ ವಿಡಿಯೋ ನೋಡಿದ ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
2022ರ ಬಿಪಿಎಲ್ ಆವೃತ್ತಿ ಶುಕ್ರವಾರ ಆರಂಭವಾಗಿದೆ. ಮೊದಲ ದಿನವೇ 2ನೇ ಪಂದ್ಯಗಳು ನಡೆದಿದ್ದವು. ಖುಲ್ನಾ ಟೈಗರ್ಸ್ ಮತ್ತು ಮಿನಿಸ್ಟರ್ ಗ್ರೂಪ್ ಢಾಕಾ ನಡುವಿನ ಪಂದ್ಯದಲ್ಲಿ ನಂಬಲಾಸಾಧ್ಯವಾದ ರನ್ಔಟ್ಗೆ ಕ್ರಿಕೆಟ್ ಜಗತ್ತು ಸಾಕ್ಷಿಯಾಗಿದೆ.
ಢಾಕಾ ತಂಡದಲ್ಲಿ ಆಡಿದ್ದ ವಿಂಡೀಸ್ ಆಲ್ರೌಂಡರ್ ರಸೆಲ್ ದುರಾದೃಷ್ಟಕರ ರೀತಿ ಬಲಿಯಾದರೆ, ಎದುರಾಳಿ ಖುಲ್ನಾ ತಂಡಕ್ಕೆ ಬೋನಸ್ ಸಿಕ್ಕಿದಂತಾಗಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
15ನೇ ಓವರ್ನಲ್ಲಿ ರಸೆಲ್ ಶಾರ್ಟ್ ಥರ್ಡ್ ಮ್ಯಾನ್ನತ್ತ ಚೆಂಡನ್ನು ಡ್ರೈವ್ ಮಾಡಿ ಸಿಂಗಲ್ ತೆಗೆದುಕೊಳ್ಳುವುದಕ್ಕೆ ಪ್ರಯತ್ನಿಸಿದ್ದರು. ಚೆಂಡನ್ನು ಹಿಡಿದ ಮೆಹೆದಿ ಹಸನ್ ಸ್ಟ್ರೈಕರ್‌ನತ್ತ ಬರುತ್ತಿದ್ದ ಮಹಮ್ಮದುಲ್ಲಾರನ್ನು ರನ್ಔಟ್ ಮಾಡಲು ಥ್ರೋ ಮಾಡಿದರು. ಆದರೆ, ಚೆಂಡು ಸ್ಟಂಪ್ಗೆ ಅಪ್ಪಳಿಸಿತ್ತಾದರೂ, ಅಷ್ಟರಲ್ಲಿ ಮಹಮ್ಮದುಲ್ಲಾ ಕ್ರೀಸ್ಗೆ ಕ್ರಾಸ್ ಮಾಡಿದ್ದರು.
-
I've been playing cricket and watching cricket all my life. Never have I seen something like this. Just unbelievable 🤯 🎥: @FanCode https://t.co/2CUACSJDL0
— Wasim Jaffer (@WasimJaffer14) January 22, 2022 " class="align-text-top noRightClick twitterSection" data="
">I've been playing cricket and watching cricket all my life. Never have I seen something like this. Just unbelievable 🤯 🎥: @FanCode https://t.co/2CUACSJDL0
— Wasim Jaffer (@WasimJaffer14) January 22, 2022I've been playing cricket and watching cricket all my life. Never have I seen something like this. Just unbelievable 🤯 🎥: @FanCode https://t.co/2CUACSJDL0
— Wasim Jaffer (@WasimJaffer14) January 22, 2022
ದುರಾದೃಷ್ಟವಶಾತ್ ಚೆಂಡು ಸ್ಟ್ರೈಕರ್ ಸ್ಟಂಪ್ಗೆ ಬಡಿದ ನಂತರ ನೇರವಾಗಿ ನಾನ್ಸ್ಟ್ರೈಕರ್ ಸ್ಟಂಪ್ಗೂ ಬಡಿಯಿತು. ಆದರೆ, ಚೆಂಡು ನಾನ್ ಸ್ಟ್ರೈಕರ್‌ನತ್ತ ಬರುತ್ತದೆ ಎಂದೂ ಭಾವಿಸದ ರಸೆಲ್ ನಿಧಾನವಾಗಿ ಹೋಗುತ್ತಿದ್ದರಿಂದ ರನ್ಔಟ್ಗೆ ಬಲಿಯಾಗಿ ನಿರಾಶೆಯಿಂದ ಪೆವಿಲಿಯನ್ನತ್ತ ನಗುತ್ತಲೇ ನಿರ್ಗಮಿಸಿದರು.
ಈ ರನ್ಔಟ್ ವಿಡಿಯೋ ನೋಡಿರುವ ಭಾರತದ ಮಾಜಿ ಕ್ರಿಕೆಟಿಗ ವಾಸೀಮ್ ಜಾಫರ್, ನನ್ನ ಇಷ್ಟು ವರ್ಷಗಳ ಕ್ರಿಕೆಟ್ ಜೀವನದಲ್ಲಿ ಇಂತಹ ವಿಚಿತ್ರ ರೀತಿಯಲ್ಲಿ ರನ್ಔಟ್ ಆಗಿರುವುದನ್ನು ನೋಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಐಪಿಎಲ್ಗೆ ಗೇಲ್ ಗುಡ್ ಬೈ?: 2022 ಹರಾಜಿಗೆ ಹೆಸರು ನೀಡದ ಸ್ಟಾರ್ಕ್, ಸ್ಟೋಕ್ಸ್, ಸ್ಯಾಮ್ ಕರ್ರನ್!