ಭಾರತದ ಮಾಜಿ ಸ್ಪಿನ್ ಅಸ್ತ್ರ ಅಮಿತ್ ಮಿಶ್ರಾ ಅವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳನ್ನು ರಂಜಿಸಲು ಹಲವು ವಿನೋದದ, ಕುತೂಹಲ ಮತ್ತು ವ್ಯಂಗ್ಯವಾದ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಸೆಮಿಫೈನಲ್ನಲ್ಲಿ ಇಂಡಿಯಾ ಲೆಜೆಂಡ್ಸ್‌ನ ಸುರೇಶ್ ರೈನಾ ಅದ್ಭುತ ಕ್ಯಾಚ್ ಹಿಡಿದ ವಿಡಿಯೋವನ್ನು ಹಂಚಿಕೊಂಡು ಶ್ಲಾಘಿಸಿದ್ದರು.
-
Done, all the best for your date. 😅 https://t.co/KuH7afgnF8 pic.twitter.com/nkwZM4FM2u
— Amit Mishra (@MishiAmit) September 29, 2022 " class="align-text-top noRightClick twitterSection" data="
">Done, all the best for your date. 😅 https://t.co/KuH7afgnF8 pic.twitter.com/nkwZM4FM2u
— Amit Mishra (@MishiAmit) September 29, 2022Done, all the best for your date. 😅 https://t.co/KuH7afgnF8 pic.twitter.com/nkwZM4FM2u
— Amit Mishra (@MishiAmit) September 29, 2022
ವಿಷಯ ಇಷ್ಟೇ ಆಗಿದ್ದರೆ ಸರಿ ಹೋಗಿತ್ತು. ರೈನಾರನ್ನು ಶ್ಲಾಘಿಸಿ ಅಮಿತ್ ಮಿಶ್ರಾ ಹಂಚಿಕೊಂಡ ವಿಡಿಯೋಗೆ ಟ್ವಿಟರ್ ಬಳಕೆದಾರನೊಬ್ಬ ಕಮೆಂಟ್ ಮಾಡಿ ಕೋರಿದ ಬೇಡಿಕೆ ವಿಚಿತ್ರವಾಗಿದೆ. ಅದೇನೆಂದರೆ, ಕಮೆಂಟ್ ಬಾಕ್ಸ್ನಲ್ಲಿ ತಾನು ಬಳಸುವ ಯುಪಿಐ ಲಿಂಕ್ ಹಾಕಿದ ಆ ವ್ಯಕ್ತಿ, ತನ್ನ ಗೆಳತಿಯನ್ನು ಡೇಟಿಂಗ್ಗೆ ಕರೆದುಕೊಂಡು ಹೋಗಬೇಕಿದ್ದು ತನಗೆ 300 ರೂಪಾಯಿ ಹಣ ಕಳುಹಿಸುವಂತೆ ಅಮಿತ್ ಮಿಶ್ರಾಗೆ ಕೋರಿದ್ದಾನೆ.
ಇದನ್ನು ಗಮನಿಸಿದ ಅಮಿತ್ ಮಿಶ್ರಾ ಅವರು, ಕೆಲವೇ ನಿಮಿಷಗಳಲ್ಲಿ ಆ ಬಳಕೆದಾರನ ಖಾತೆಗೆ 500 ರೂಪಾಯಿಗಳನ್ನು ವರ್ಗಾಯಿಸಿದ್ದಾರೆ. ಬಳಿಕ ಅದರ ಸ್ಕ್ರೀನ್‌ಶಾಟ್ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು, "ಹಣ ಕಳುಹಿಸಿದ್ದೇನೆ. ನಿನ್ನ ಗೆಳತಿಯ ಜೊತೆಗಿನ ಡೇಟಿಂಗ್ಗೆ ಶುಭವಾಗಲಿ" ಎಂದು ಹರಸಿದ್ದಾರೆ.
ಅಮಿತ್ ಮಿಶ್ರಾ ಈ ಟ್ವೀಟ್ಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದು, ಹಣ ಕೊಟ್ಟ ಔದಾರ್ಯ ಮೆರೆದ ಮಾಜಿ ಕ್ರಿಕೆಟಿಗನನ್ನು ಹೊಗಳಿದ್ದಾರೆ.
ಓದಿ: 24 ರನ್ ಗಳಿಸಿದರೆ ಈ ದಾಖಲೆ ಬರೆಯುವ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್.. ಏನದು?