ಚೆನ್ನೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿರಿಯ ಸ್ಪಿನ್ನರ್ ಅಮಿತ್ ಮಿಶ್ರಾ ಐಪಿಎಲ್ ಇತಿಹಾಸದಲ್ಲಿ 7 ಬಾರಿ ರೋಹಿತ್ ಶರ್ಮಾ ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.
ಚೆನ್ನೈನ ಚೆಪಾಕ್ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 30 ಎಸೆತಗಳಲ್ಲಿ 44 ರನ್ಗಳಿಸಿ ಮುನ್ನುಗ್ಗುತ್ತಿದ್ದ ರೋಹಿತ್ ವಿಕೆಟ್ ಪಡೆಯುವ ಮೂಲಕ 38 ವರ್ಷದ ಸ್ಪಿನ್ನರ್ ಪಂದ್ಯದ ಗರಿಯನ್ನೇ ಬದಲಾಯಿಸಿದರು. ಈ ಮೂಲಕ 13 ಐಪಿಎಲ್ ಆವೃತ್ತಿಗಳಲ್ಲಿ ಹಿಟ್ಮ್ಯಾನ್ ಅವರನ್ನು 7ನೇ ಬಾರಿ ಪೆವಿಲಿಯನ್ಗಟ್ಟಿದರು.
ಅಮಿತ್ ಮಿಶ್ರಾ ಹೊರತುಪಡಿಸಿದರೆ, ಕೆಕೆಆರ್ ತಂಡದ ಸ್ಪಿನ್ನರ್ ಸುನೀಲ್ ನರೈನ್ ಮತ್ತು ಕನ್ನಡಿಗ ವಿನಯ್ ಕುಮಾರ್ ತಲಾ 6 ಬಾರಿ ರೋಹಿತ್ ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಇನ್ನು ಯಾವುದೇ ಬೌಲರ್ 7ಕ್ಕಿಂತ ಹೆಚ್ಚು ಬಾರಿ ಯಾವುದೇ ಬ್ಯಾಟ್ಸ್ಮನ್ ವಿಕೆಟ್ ಪಡೆದಿಲ್ಲ. ಸನ್ ರೈಸರ್ಸ್ನಲ್ಲಿರುವ ಸಂದೀಪ್ ಶರ್ಮಾ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನು, ಮಾಜಿ ವೇಗಿ ಜಹೀರ್ ಖಾನ್ ಸಿಎಸ್ಕೆ ನಾಯಕ ಧೋನಿಯನ್ನು 7 ಬಾರಿ ಪೆವಿಲಿಯನ್ಗಟ್ಟಿದ ದಾಖಲೆ ಹೊಂದಿದ್ದಾರೆ.
ಈ ಪಂದ್ಯದಲ್ಲಿ ಅಮಿತ್ ಮಿಶ್ರಾ ರೋಹಿತ್ ಜೊತೆಗೆ ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ ಮತ್ತು ಇಶಾನ್ ಕಿಶನ್ ವಿಕೆಟ್ ಪಡೆದರು.
ಇದನ್ನು ಓದಿ: ಐಪಿಎಲ್ನಲ್ಲಿ ಹೆಚ್ಚು ರನ್: ಡೇವಿಡ್ ವಾರ್ನರ್ ಹಿಂದಿಕ್ಕಿದ 4ನೇ ಗರಿಷ್ಠ ಸ್ಕೋರರ್ ಆದ ರೋಹಿತ್