ETV Bharat / sports

4ನೇ ಟೆಸ್ಟ್​: ಹೀನಾಯ ಸೋಲು ಮರೆತು ತಿರುಗಿ ಬೀಳುವ ಉತ್ಸಾಹದಲ್ಲಿ ಭಾರತ, ಅಶ್ವಿನ್ ಆಟ ನಿರೀಕ್ಷೆ

ಲಾರ್ಡ್ಸ್​ನಲ್ಲಿ ಸ್ಫೂರ್ತಿದಾಯಕ ವಿಜಯ ಸಾಧಿಸಿದ್ದ ಭಾರತ ಲೀಡ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ನಿಂದ ಮುಗ್ಗರಿಸಿತ್ತು. ಅದರಲ್ಲೂ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 78 ರನ್​ಗಳಿಗೆ ಆಲೌಟಾಗುವ ಮೂಲಕ ಹೀನಾಯ ಪ್ರದರ್ಶನ ತೋರಿ ಇನ್ನಿಂಗ್ಸ್​ ಸೋಲು ಕಂಡಿತ್ತು.

ಭಾರತ vs ಇಂಗ್ಲೆಂಡ್ 4ನೇ ಟೆಸ್ಟ್​
author img

By

Published : Sep 1, 2021, 7:58 PM IST

ಲಂಡನ್: ಲೀಡ್ಸ್​ನಲ್ಲಿ ಹೀನಾಯ ಸೋಲುಂಡ ನಂತರ ಭಾರತ ಗುರುವಾರದಿಂದ ಓವಲ್​ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್​ನಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. ಕಳೆದ 3 ಪಂದ್ಯಗಳಲ್ಲಿ ಹೊರಗಿದ್ದ ಭಾರತದ ಗರಿಷ್ಠ ಶ್ರೇಯಾಂಕದ ಬೌಲರ್​ ಅಶ್ವಿನ್​ ಕಣಕ್ಕಿಳಿಯುವ ಸಾಧ್ಯತೆಯಿದೆ.

ಲಾರ್ಡ್ಸ್​ನಲ್ಲಿ ಸ್ಫೂರ್ತಿದಾಯಕ ವಿಜಯ ಸಾಧಿಸಿ ನಂತರ ಲೀಡ್ಸ್​ನಲ್ಲಿ ಕಳಪೆ ಬ್ಯಾಟಿಂಗ್​ನಿಂದಾಗಿ ಭಾರತ ಮುಗ್ಗರಿಸಿತ್ತು. ಅದರಲ್ಲೂ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 78 ರನ್​ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯ ಪ್ರದರ್ಶನ ತೋರಿ ಇನ್ನಿಂಗ್ಸ್​ ಸೋಲು ಅನುಭವಿಸಿತ್ತು.

ಸೋಲು-ಗೆಲುವು ಆಟದ ಭಾಗ ಎಂದು ಪ್ರತಿಪಾದಿಸುವ ನಾಯಕ ಕೊಹ್ಲಿ, ತಂಡದ ವಿರುದ್ಧ ಕೇಳಿ ಬರುವ ಹೊರಗಿನ ಟೀಕೆಗಳಿಗೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ. ಅಲ್ಲದೆ ಒಬ್ಬ ಬೌಲರ್​ ಕಡಿಮೆ ಮಾಡಿ ಹೆಚ್ಚುವರಿ ಬ್ಯಾಟ್ಸ್​ಮನ್​ ಸೇರ್ಪಡೆಗೂ ಅಸಮ್ಮತಿ ತೋರಿದ್ದಾರೆ. ಆದರೆ ಮೂರು ಟೆಸ್ಟ್​ ಪಂದ್ಯಗಳಲ್ಲಿ ತಂಡದಿಂದ ಹೊರಗುಳಿದಿದ್ದ ಅಶ್ವಿನ್ ತಂಡ ಸೇರಿಕೊಳ್ಳಬೇಕೆಂಬ ಚರ್ಚೆ ನಡೆಯುತ್ತಿದೆ.

ರಹಾನೆಗೆ ಮತ್ತೊಂದು ಅವಕಾಶ:

ಕಳೆದ 5 ಇನ್ನಿಂಗ್ಸ್​ನಲ್ಲಿ 19ರ ಸರಾಸರಿಯಲ್ಲಿ 95 ರನ್​ಗಳಿಸಿರುವ ರಹಾನೆ ಆಯ್ಕೆಯನ್ನು ಈಗಾಗಲೇ ಹಲವು ಮಾಜಿ ಕ್ರಿಕೆಟಿಗರು ಪ್ರಶ್ನಿಸಿದ್ದಾರೆ. ಅಲ್ಲದೆ ಸೂರ್ಯಕುಮಾರ್ ಯಾದವ್ ಅಥವಾ ಹನುಮ ವಿಹಾರಿಯರನ್ನು ಅವರ ಜಾಗದಲ್ಲಿ ಆಡಿಸಬೇಕೆಂಬ ಚರ್ಚೆ ನಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ಅಸ್ಥಿರ ಪ್ರದರ್ಶನ ತೋರುತ್ತಿರುವ ರಹಾನೆಗೆ ಅನುಭವದ ಆಧಾರ ಮೇಲೆ ಮತ್ತೊಂದು ಅವಕಾಶ ಸಿಗುವುದೇ ಅನ್ನೋದನ್ನು ನಾಳೆ ಕಾದುನೋಡಬೇಕು.

ಒಂದು ವೇಳೆ ರಹಾನೆಯನ್ನು ತಂಡದಿಂದ ಹೊರಗಿಡಲು ಬಯಸಿದರೆ ಅವರ ಸ್ಥಾನಕ್ಕೆ ಹನುಮ ವಿಹಾರಿ ಉತ್ತಮ ಆಯ್ಕೆ ಎಂದು ತಜ್ಞರ ಅಭಿಪ್ರಾಯ. ಏಕೆಂದರೆ ಅವರು ಬ್ಯಾಟಿಂಗ್ ಜೊತೆಗೆ ತಂಡಕ್ಕೆ ಹೆಚ್ಚುವರಿ ಸ್ಪಿನ್ ಬೌಲರ್​ ಆಗಿಯೂ ತಂಡಕ್ಕೆ ಅನುಕೂಲ ತಂದುಕೊಡಲಿದ್ದಾರೆ. ಲೆಜೆಂಡರಿ ಬ್ಯಾಟ್ಸ್​ಮನ್​ ಸುನೀಲ್ ಗವಾಸ್ಕರ್, ದಿಲೀಪ್ ವೆಂಗಸ್ಕರ್​ ಅಂಥವರೂ ಕೂಡ ನಾಲ್ಕನೇ ಟೆಸ್ಟ್​ನಲ್ಲಿ ಒಬ್ಬ ಹೆಚ್ಚುವರಿ ಬ್ಯಾಟ್ಸ್​ಮನ್​ ಮೂಲಕ ಭಾರತ ಕಣಕ್ಕಿಳಿಯಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನು ಕಳಪೆ ಬ್ಯಾಟಿಂಗ್ ಮತ್ತು ನಿಧಾನಗತಿ ಬ್ಯಾಟಿಂಗ್ ಮೂಲಕ ಟೀಕೆಗೆ ಗುರಿಯಾಗಿದ್ದ ಪೂಜಾರ, ಕಳೆದ ಟೆಸ್ಟ್​ನಲ್ಲಿ ಎರಡೂ ರೀತಿಯ ಟೀಕೆಗೂ ತಮ್ಮ ಬ್ಯಾಟಿಂಗ್ ಮೂಲಕ ಉತ್ತರ ನೀಡಿದ್ದಾರೆ. ಆದರೆ ಇಂಗ್ಲಿಷ್​ ಬೆಂಕಿಚೆಂಡುಗಳನ್ನು ಎದುರಿಸಲು ಇವರ ಪಾತ್ರ ಮಹತ್ವದ್ದಾಗಲಿದೆ.

ಇಶಾಂತ್-ಜಡೇಜಾ ಬದಲು ಶಾರ್ದೂಲ್​- ಅಶ್ವಿನ್​ ಸಾಧ್ಯತೆ

ಮೂರನೇ ಟೆಸ್ಟ್​ ಪಂದ್ಯದಲ್ಲಿ 22 ಓವರ್​ ಎಸೆದರೂ ಒಂದೂ ವಿಕೆಟ್ ಪಡೆಯಲೂ ವಿಫಲರಾಗಿರುವ ವೇಗಿ ಇಶಾಂತ್ ಶರ್ಮಾ ನಾಲ್ಕನೇ ಟೆಸ್ಟ್​ ಪಂದ್ಯದಿಂದ ಹೊರಗುಳಿಯುವುದು ಬಹುತೇಕ ಖಚಿತ. ಅಲ್ಲದೆ ಜಡೇಜಾ ಕೂಡ ಗಾಯಗೊಂಡು ಸ್ಕ್ಯಾನಿಂಗ್​ಗೆ ಒಳಗಾಗಿದ್ದಾರೆ. ಹೀಗಾಗಿ ಓವಲ್ ವಿಕೆಟ್ ಸ್ಪಿನ್​ ಬೌಲಿಂಗ್​ಗೆ ನೆರವಾಗುವುದರಿಂದ ಅಶ್ವಿನ್​ಗೆ ಅವಕಾಶ ಕೊಡಬೇಕೆಂದು ಈಗಾಗಲೇ ಆಶಿಷ್ ನೆಹ್ರಾ ಅವರಂಥ ಮಾಜಿ ಕ್ರಿಕೆಟಿಗರು ಸಲಹೆ ನೀಡಿದ್ದಾರೆ.

ಆದರೆ 4 ವೇಗಿಗಳ ಸಂಯೋಜನೆಗೆ ಅಂಟಿಕೊಂಡಿರುವ ವಿರಾಟ್​ ಕೊಹ್ಲಿ ಇಶಾಂತ್​ ಶರ್ಮಾ ಬದಲಿಗೆ ಶಾರ್ದುಲ್ ಠಾಕೂರ್​ರನ್ನು ಆಡಿಸಲು ಬಯಸುವ ಸಾಧ್ಯತೆಯಿದೆ. ಜೊತೆಗೆ ಶಾರ್ದೂಲ್​ ಬ್ಯಾಟಿಂಗ್​ನಲ್ಲೂ ತಂಡಕ್ಕೆ ನೆರವಾಗಬಲ್ಲರು. ಒಂದು ವೇಳೆ ಅಶ್ವಿನ್​ ತಂಡದಲ್ಲಿ ಆಡಬೇಕಾದರೆ 3 ಟೆಸ್ಟ್​ಗಳಿಂದ ಕೇವಲ 2 ವಿಕೆಟ್ ಪಡೆದು ಬೌಲಿಂಗ್​ನಲ್ಲಿ ವಿಫಲರಾಗಿರುವ ಜಡೇಜಾ ಜಾಗದಲ್ಲಿ ಮಾತ್ರ ಸಾಧ್ಯ. ಆದರೆ ಜಡೇಜಾ ಬ್ಯಾಟಿಂಗ್​ನಲ್ಲಿ ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿರುವುದರಿಂದ ಕೊಹ್ಲಿ ಮತ್ತು ಟೀಮ್ ಇಂಡಿಯಾ ಹೇಗೆ ಆಲೋಚಿಸಲಿದೆ ಎನ್ನುವುದೇ ಕುತೂಹಲಕಾರಿ ಸಂಗತಿ.

ಕೆಲಸದ ಹೊರೆ ನಿಯಂತ್ರಿಸಲು ಬುಮ್ರಾ-ಶಮಿ ಇಬ್ಬರಲ್ಲಿ ಒಬ್ಬರಿಗೆ ವಿಶ್ರಾಂತಿ

ಸರಣಿಯಲ್ಲಿ ನೂರಕ್ಕೂ ಹೆಚ್ಚು ಓವರ್​ ಬೌಲಿಂಗ್​ ಮಾಡಿರುವ ಬುಮ್ರಾ ಮತ್ತು ಶಮಿಗೆ ಕೆಲಸದ ಹೊರೆ ಕಡಿಮೆ ಮಾಡಲು ಒಬ್ಬರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯೂ ಇದೆ. ಏಕೆಂದರೆ ವಿಶ್ವಕಪ್​ ಕೂಡ ಹತ್ತಿರದಲ್ಲಿದ್ದು ಗಾಯವನ್ನು ನಿಯಂತ್ರಣದಲ್ಲಿಡಬೇಕಾದ ಆಲೋಚನೆ ಕೂಡ ನಾಯಕ ಕೊಹ್ಲಿ ಮನದಲ್ಲಿದೆ. ಈಗಾಗಲೇ ಟೀಮ್ ಮ್ಯಾನೇಜ್​ಮೆಂಟ್ ಆಯ್ಕೆ ಸಮಿತಿಗೆ ಮನವಿ ಮಾಡಿ ವೇಗಿ ಕನ್ನಡಿಗ ಪ್ರಸಿಧ್ ಕೃಷ್ಣ ಅವರನ್ನು ​ತಂಡಕ್ಕೆ ಸೇರಿಸಿಕೊಂಡಿರುವುದನ್ನು ಗಮನಿಸಿದರೆ ಬುಮ್ರಾ ಅಥವಾ ಶಮಿ ಇಬ್ಬರಲ್ಲಿ ಒಬ್ಬರು ಕೊನೆಯ 2 ಟೆಸ್ಟ್​ಗಳಲ್ಲಿ ಒಂದನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಕಾಣುತ್ತಿದೆ.

ಬ್ಯಾಟಿಂಗ್ ವಿಭಾಗದಲ್ಲಿ ಭಾರತಕ್ಕೆ ದೊಡ್ಡ ಸಮಸ್ಯೆಯಿದೆ. ಮೊದಲೆರಡು ಪಂದ್ಯಗಳಲ್ಲಿ ಮಿಂಚಿದ್ದ ಕನ್ನಡಿಗ ರಾಹುಲ್​ ಕಳೆದ ಪಂದ್ಯದಲ್ಲಿ ವಿಫಲರಾಗಿದ್ದಾರೆ. ಆದರೆ ರೋಹಿತ್ ಫಾರ್ಮ್​ನಲ್ಲಿರುವುದು, ಕೊಹ್ಲಿ ಮತ್ತು ಪೂಜಾರಾ ಕಳೆದ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ಉತ್ತಮ ಪ್ರದರ್ಶನ ತೋರಿರುವುದು ಬ್ಯಾಟಿಂಗ್ ವಿಭಾಗದಲ್ಲಿನ ಏಕೈಕ ಧನಾತ್ಮಕ ಅಂಶ. ಪಂತ್​ ಮೇಲೆ ಎಂದಿನಂತೆ ನಿರೀಕ್ಷೆಯ ಭಾರ ಈ ಪಂದ್ಯದಲ್ಲೂ ಸಾಗಲಿದೆ.

ತಂಡದ ಸಂಯೋಜನೆಯ ಗೊಂದಲ ಒಂದೆಡೆಯಾದರೆ, ಎದುರಾಳಿ ನಾಯಕ ಜೋ ರೂಟ್​ ಪ್ರಚಂಡ ಫಾರ್ಮ್​ ಕೂಡ ಭಾರತ ಪಾಳಯದಲ್ಲಿ ನಿದ್ದೆ ಕೆಡಿಸಿದೆ. ಏಕೆಂದರೆ, ಅವರು ಮೂರು ಟೆಸ್ಟ್​ಗಳಲ್ಲಿ ಹ್ಯಾಟ್ರಿಕ್ ಶತಕಗಳ ಸಹಿತ 500ಕ್ಕೂ ಹೆಚ್ಚು ರನ್​ಗಳಿಸಿದ್ದಾರೆ. ನಾಳೆ ಅಶ್ವಿನ್​ಗೆ ಅವಕಾಶ ನೀಡಿದರೆ ರೂಟ್​ vs ಅಶ್ವಿನ್ ಕಾಳಗ ಅದ್ಭುತವಾಗಿರಲಿದೆ.

ಇಂಗ್ಲೆಂಡ್ ತಂಡದಲ್ಲೂ ಒಂದೆರಡು ಬದಲಾವಣೆಗಳಾಗುವ ಸಾಧ್ಯತೆಯಿದೆ. ಕೀಪರ್ ಜೋಸ್ ಬಟ್ಲರ್​ ಪಿತೃತ್ವ ರಜೆ ಮೇರೆಗೆ ಕೊನೆಯ 2 ಟೆಸ್ಟ್​ ಪಂದ್ಯಗಳಿಂದ ಹೊರಹೋಗಿದ್ದಾರೆ. ಬೈರ್​ಸ್ಟೋವ್​ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಕ್ರಿಸ್ ವೋಕ್​​ ಕಮ್​ಬ್ಯಾಕ್ ಮಾಡಿರುವುದರಿಂದ ಆ್ಯಂಡರ್ಸನ್​ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಗಾಯದಿಂದ ಚೇತರಿಸಿಕೊಂಡಿರುವ ಮಾರ್ಕ್​ವುಡ್​ ಕೂಡ 4ನೇ ಟೆಸ್ಟ್​ಗೆ ಲಭ್ಯ. ಹೆಚ್ಚುವರಿ ಬ್ಯಾಟ್ಸ್​ಮನ್​ಗಳಾಗಿ ಸ್ಯಾಮ್​ ಬಿಲ್ಲಿಂಗ್ಸ್​ ಮತ್ತು ಒಲ್ಲಿ ಪೋಪ್ ಕೂಡ ತಂಡದಲ್ಲಿದ್ದಾರೆ. ಒಟ್ಟಾರೆ ತಂಡದಲ್ಲಿ ಭಾರತಕ್ಕೆ ತೊಂದರೆ ಉಂಟು ಮಾಡುವ ಎಲ್ಲಾ ಸಂಪನ್ಮೂಲ ಆತಿಥೇಯ ತಂಡದಲ್ಲಿದೆ ಎಂದರೆ ತಪ್ಪಾಗಲಾರದು.​

ನಾಲ್ಕನೇ ಟೆಸ್ಟ್​ಗೆ ಭಾರತ ತಂಡ:

ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪ ನಾಯಕ), ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್ ಹಾಗು ಪ್ರಸಿಧ್ ಕೃಷ್ಣ

ಇಂಗ್ಲೆಂಡ್ ತಂಡ:

ಜೋ ರೂಟ್ (ನಾಯಕ), ಮೊಯೀನ್ ಅಲಿ, ಜೇಮ್ಸ್ ಆಂಡರ್ಸನ್, ಬೈರ್‌ಸ್ಟೋವ್, ಸ್ಯಾಮ್​ ಬಿಲ್ಲಿಂಗ್ಸ್, ರೋರಿ ಬರ್ನ್ಸ್, ಸ್ಯಾಮ್ ಕರ್ರನ್, ಹಸೀಬ್​ ಹಮೀದ್, ಡಾನ್ ಲಾರೆನ್ಸ್, ಡೇವಿಡ್ ಮಲನ್, ಕ್ರೇಗ್ ಓವರ್‌ಟನ್, ಒಲ್ಲಿ ಪೋಪ್, ಒಲ್ಲಿ ರಾಬಿನ್ಸನ್, ಕ್ರಿಸ್ ವೋಕ್ಸ್ ಹಾಗು ಮಾರ್ಕ್ ವುಡ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.