ನವದೆಹಲಿ: ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಗೆ ಭಾರತ ತಂಡವನ್ನು ಇಂದು ಪ್ರಕಟಿಸಲಾಗುವುದು. ವಿಶ್ವಕಪ್‌ಗೂ ಮುನ್ನ ಈ ಸರಣಿ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಈ ಸರಣಿ ಸೆಪ್ಟೆಂಬರ್ 22 ರಿಂದ ಆರಂಭವಾಗಲಿದೆ. ಈ ಸರಣಿಯ ಬಗ್ಗೆ ದೊಡ್ಡ ಅಪ್ಡೇಟ್ ಹೊರಬರುತ್ತಿದೆ. ಇಂದು ರಾತ್ರಿ 8 ಗಂಟೆಗೆ ಈ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗಲಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮಾಧ್ಯಮಗೋಷ್ಟಿಯಲ್ಲಿ ತಂಡವನ್ನು ಪ್ರಕಟಿಸಲಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ 2023 ಕ್ಕಿಂತ ಮೊದಲು ನಡೆಯಲಿರುವ ಈ ಸರಣಿಯನ್ನು ಭಾರತದ ದೃಷ್ಟಿಕೋನದಿಂದ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ಸರಣಿಯಲ್ಲಿ ಭಾರತ ತಂಡವು ಏಕದಿನ ವಿಶ್ವಕಪ್‌ಗೆ ತನ್ನ ಸಿದ್ಧತೆಗಳಿಗೆ ಅಂತಿಮ ಸ್ಪರ್ಶ ನೀಡಲು ಬಯಸುತ್ತದೆ.
-
India vs Australia ODI series begins on 22nd.
— Johns. (@CricCrazyJohns) September 18, 2023 " class="align-text-top noRightClick twitterSection" data="
- Cricket Carnival season.....!!!! pic.twitter.com/4CCRV25cAr
">India vs Australia ODI series begins on 22nd.
— Johns. (@CricCrazyJohns) September 18, 2023
- Cricket Carnival season.....!!!! pic.twitter.com/4CCRV25cArIndia vs Australia ODI series begins on 22nd.
— Johns. (@CricCrazyJohns) September 18, 2023
- Cricket Carnival season.....!!!! pic.twitter.com/4CCRV25cAr
ಭಾರತ ತಂಡ ಹೇಗಿರಲಿದೆ?: ವಿಶ್ವಕಪ್‌ಗೆ ಮುನ್ನ ನಡೆಯಲಿರುವ ಈ ಸರಣಿಯಲ್ಲಿ ಟೀಂ ಇಂಡಿಯಾ ತನ್ನ ಸಂಪೂರ್ಣ ಬಲದೊಂದಿಗೆ ಪ್ರವೇಶಿಸಲು ಬಯಸುತ್ತದೆ. ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಿಂದ ಯಾವುದೇ ಪ್ರಮುಖ ಆಟಗಾರನಿಗೆ ವಿಶ್ರಾಂತಿ ನೀಡಲು ಆಯ್ಕೆದಾರರು ಬಯಸುವುದಿಲ್ಲ. ತಂಡದ ನಾಯಕತ್ವ ರೋಹಿತ್ ಶರ್ಮಾ ಕೈಯಲ್ಲಿದ್ದರೆ, ಹಾರ್ದಿಕ್ ಪಾಂಡ್ಯ ಉಪನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಕೂಡ ಹಿರಿಯ ಆಟಗಾರರಾಗಿ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.
ಏಷ್ಯಾಕಪ್ನಲ್ಲಿ ಭಾರತದ ಪರ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಶುಭಮನ್ ಗಿಲ್, ಕೆಎಲ್ ರಾಹುಲ್, ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಇದಲ್ಲದೇ ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಮತ್ತು ವಾಷಿಂಗ್ಟನ್ ಸುಂದರ್ ಆಲ್ರೌಂಡರ್ಗಳಾಗಿ ತಂಡದಲ್ಲಿ ಕಾಣಿಸಿಕೊಳ್ಳಬಹುದು.
ಏಷ್ಯಾಕಪ್‌ನ ಅಂತಿಮ ಪಂದ್ಯಕ್ಕೂ ಮುನ್ನ ಗಾಯಗೊಂಡು ಅಕ್ಷರ್ ಪಟೇಲ್ ಭಾರತ ತಂಡದಿಂದ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ವಾಷಿಂಗ್ಟನ್ ಸುಂದರ್‌ಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು. ಇದಾದ ನಂತರ ಅವರು ನೇರವಾಗಿ ಏಷ್ಯಾಕಪ್ ಫೈನಲ್‌ನ 11ನೇ ಆಟಗಾರನಿಗೆ ಸೇರ್ಪಡೆಗೊಂಡರು. ಈಗ ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್‌ಗೂ ಮುನ್ನ ಅವರಿಗೆ ಅವಕಾಶ ನೀಡಬಹುದು. ಇಲ್ಲಾ ಅನುಭವಿ ಅಶ್ವಿನ್ಗೆ ವಿಶ್ವಕಪ್ ಹಿನ್ನೆಲೆಯಲ್ಲಿ ಅವಕಾಶ ನೀಡುವ ನಿರೀಕ್ಷೆಯೂ ಇದೆ.
ಭಾರತ vs ಆಸ್ಟ್ರೇಲಿಯಾ ಸರಣಿ ವೇಳಾಪಟ್ಟಿ:
- ಸೆಪ್ಟೆಂಬರ್ 22 - ಮೊದಲ ಏಕದಿನ ಪಂದ್ಯ - ಸ್ಥಳ - ಐಎಸ್ ಬಿಂದ್ರಾ ಸ್ಟೇಡಿಯಂ, ಮೊಹಾಲಿ - ಸಮಯ - ಮಧ್ಯಾಹ್ನ 1:30
- ಸೆಪ್ಟೆಂಬರ್ 24 - 2ನೇ ಏಕದಿನ ಪಂದ್ಯ - ಸ್ಥಳ - ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ, ಇಂದೋರ್ - ಸಮಯ - ಮಧ್ಯಾಹ್ನ 1:30
- ಸೆಪ್ಟೆಂಬರ್ 27 - 3ನೇ ಏಕದಿನ ಪಂದ್ಯ - ಸ್ಥಳ - ಎಸಿಎ ಸ್ಟೇಡಿಯಂ, ರಾಜ್‌ಕೋಟ್ - ಸಮಯ - ಮಧ್ಯಾಹ್ನ 1:30
ಭಾರತದ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.
ಇದನ್ನೂ ಓದಿ: ವಿಶ್ವಕಪ್‌ಗೂ ಮುನ್ನ ಆಸ್ಟ್ರೇಲಿಯಾಗೆ ಹಿನ್ನಡೆ; ಏಕದಿನ ಸರಣಿ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ