ETV Bharat / sports

ಸೈಯದ್​​ ಮುಸ್ತಾಕ್​ ಅಲಿ ಟಿ-20 ಟ್ರೋಪಿ: ಮುಂಬೈ ಕ್ಯಾಪ್ಟನ್​ ಆಗಿ ರಹಾನೆ ಆಯ್ಕೆ - ಮುಂಬೈ ಕ್ಯಾಪ್ಟನ್​ ಆಗಿ ರಹಾನೆ ಆಯ್ಕೆ

ಟೀಂ ಇಂಡಿಯಾದ ನಿಗದಿತ ಓವರ್​ಗಳ ಕ್ರಿಕೆಟ್​​ನಿಂದ ಕಡೆಗಣನೆಗೊಳಗಾಗಿರುವ ಅಜಿಂಕ್ಯಾ ರಹಾನೆ ಇದೀಗ ಸೈಯದ್ ಮುಸ್ತಾಕ್​ ಅಲಿ ಟಿ-20 ಟೂರ್ನಿಯಲ್ಲಿ ಮುಂಬೈ ತಂಡ ಮುನ್ನಡೆಸಲಿದ್ದಾರೆ.

ajinkya
ajinkya
author img

By

Published : Oct 18, 2021, 7:53 PM IST

ಮುಂಬೈ: ಟೀಂ ಇಂಡಿಯಾ ಟೆಸ್ಟ್​​ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಇದೀಗ ಮುಂಬರುವ ಸೈಯದ್ ಮುಸ್ತಾಕ್​ ಅಲಿ ಟಿ-20 ಟೂರ್ನಿಯಲ್ಲಿ ಮುಂಬೈ ತಂಡ ಮುನ್ನಡೆಸಲಿದ್ದು, ತಂಡದ ಕ್ಯಾಪ್ಟನ್​​ ಆಗಿ ಆಯ್ಕೆಯಾಗಿದ್ದಾರೆ. ಉಪನಾಯಕನಾಗಿ ಸ್ಫೋಟಕ ಬ್ಯಾಟ್ಸಮನ್​ ಪೃಥ್ವಿ ಶಾಗೆ ಮಣೆ ಹಾಕಲಾಗಿದೆ.

ಮುಂಬೈ ಕ್ರಿಕೆಟ್​ ಅಸೋಸಿಯೇಷನ್​​​​ ಹಿರಿಯ ಆಯ್ಕೆಗಾರರ ಸಮಿತಿ 20 ಸದಸ್ಯರ ತಂಡ ಆಯ್ಕೆ ಮಾಡಿದ್ದು, ಇದರಲ್ಲಿ ಯಶಸ್ವಿ ಜೈಸ್ವಾಲ್​ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ನವೆಂಬರ್​ 4ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಮುಂಬೈ ತಂಡ ಸೆಣಸಾಟ ನಡೆಸಲಿದೆ.

ಮುಂಬೈ ತಂಡ ಇಂತಿದೆ: ಅಂಜಿಕ್ಯಾ ರಹಾನೆ(ಕ್ಯಾಪ್ಟನ್​), ಪೃಥ್ವಿ ಶಾ(ಉ.ನಾಯಕ), ಆದಿತ್ಯ ತಾರೆ, ಶಿವಂ ದುಬೆ, ತುಷಾರ್ ದೇಶಪಾಂಡೆ, ಸರ್ಫರಾಜ್ ಖಾನ್​, ಪ್ರಶಾಂತ್​ ಸೊಲಂಕಿ, ಶಾಮ್ಸ್​ ಮುಲಾನಿ, ಅಥರ್ವ್ ಅಕೊಂಲ್ಕರ್​, ದವಲ್ ಕುಲಕರ್ಣಿ, ಹಾರ್ದಿಕ್​ ತಾಮೂರೆ, ಮೊಹಿತ್​​​ ಅವಸ್ಥಿ, ಸಿದ್ದೇಶ್ ಲಾಡ್​,ಸೈರಾಜ್​ ಪಾಟೀಲ್​, ಅಮನ್ ಖಾನ್​, ಅರ್ಮಾನ್ ಜಾಫರ್, ಯಶಸ್ವಿ ಜೈಸ್ವಾಲ್​, ತನುಶ್​ ಕೊಟಿನ್​, ದೀಪಕ್​ ಶೆಟ್ಟಿ ಹಾಗೂ ರೊಯಸ್ತಾನ್​

ಇದನ್ನೂ ಓದಿರಿ: ಹಾವು ಕಚ್ಚಿ ಪ್ರಾಣ ಕಳೆದುಕೊಂಡ ಅಕ್ಕ-ತಮ್ಮ.. ಸಾಂಗ್ಲಿಯಲ್ಲಿ ದಾರುಣ ಘಟನೆ

ತಂಡದ ಭಾಗವಾಗಬೇಕಾಗಿದ್ದ ರೋಹಿತ್ ಶರ್ಮಾ, ಶ್ರೇಯಸ್​​ ಅಯ್ಯರ್ ಹಾಗೂ ಶಾರ್ದೂಲ್​ ಠಾಕೂರ್​ ಸದ್ಯ ಟಿ-20 ವಿಶ್ವಕಪ್​ನಲ್ಲಿ ಭಾಗಿಯಾಗಿರುವ ಕಾರಣ, ಅವರಿಗೆ ಮಣೆ ಹಾಕಿಲ್ಲ. ಕಳೆದ ಕೆಲ ವರ್ಷಗಳಿಂದ ಕೇವಲ ಟೆಸ್ಟ್​ ತಂಡದ ಭಾಗವಾಗಿರುವ ಅಂಜಿಕ್ಯಾ ರಹಾನೆ, ಇದೀಗ ಚುಟುಕು ಕ್ರಿಕೆಟ್​ನಲ್ಲಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್​ ಕೌಶಲ್ಯ ಪ್ರದರ್ಶಿಸಿ, ನಿಗದಿತ ಓವರ್​ಗಳ ಕ್ರಿಕೆಟ್​ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.