ನವದೆಹಲಿ : ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ರೋಹಿತ್, ತಂಡದ ಆಟಗಾರರಿಗೆ ಸಾಕಷ್ಟು ಸ್ವಾತಂತ್ರ್ಯ ನೀಡುತ್ತಿದ್ದು, ಅವರಲ್ಲಿ ಶ್ರೇಷ್ಠ ನಾಯಕನ ಗುಣಗಳಿವೆ ಎಂದು ಉಪನಾಯಕ ಅಜಿಂಕ್ಯ ರಹಾನೆ ಹಾಡಿ ಹೊಗಳಿದ್ದಾರೆ. ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಸೋಲಿನ ಬಳಿಕ ರೋಹಿತ್ ನಾಯಕತ್ವಕ್ಕಾಗಿ ಎಲ್ಲ ಕಡೆಯಿಂದ ಬರುತ್ತಿರುವ ಟೀಕೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ರಹಾನೆ ಈ ಹೇಳಿಕೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಮೊದಲ ಟೆಸ್ಟ್ ಪಂದ್ಯ ನಾಳೆ ಬುಧವಾರದಿಂದ ಆರಂಭವಾಗಲಿದ್ದು, ಇದಕ್ಕೂ ಮುನ್ನ ಭಾರತ ತಂಡದ ಅಜಿಂಕ್ಯ ರಹಾನೆ ನಾಯಕ ರೋಹಿತ್ ಶರ್ಮಾ ಬಗ್ಗೆ ವಿಶೇಷವಾಗಿ ಗುಣಗಾನ ಮಾಡಿದ್ದಾರೆ. ಲಂಡನ್‌ನ ಓವಲ್ನಲ್ಲಿ ಜೂನ್ 7 ರಿಂದ ಜೂನ್ 11 ರವರೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಮೊದಲ ಬಾರಿಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ 18 ತಿಂಗಳ ನಂತರ ರಹಾನೆ ಟೆಸ್ಟ್ ತಂಡಕ್ಕೆ ಮರಳಿದ್ದರು. ಈ ಪಂದ್ಯದಲ್ಲಿ ಭಾರತ ಸೋತರು ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ರಹಾನೆ ಮೊದಲ ಇನಿಂಗ್ಸ್‌ನಲ್ಲಿ 89 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 49 ರನ್ ಗಳಿಸಿ ತಂಡ ಗೆಲುವಿನ ಚಿಗುರೊಡಿಸಿ ತಂಡದ ಪರ ಟಾಪ್ ಸ್ಕೋರರ್ ಆಗಿದ್ದರು.
ಇದನ್ನೂ ಓದಿ : Rohit Sharma: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ರೋಹಿತ್ ಶರ್ಮಾಗೆ ಕೊಕ್ ಸಂಭವ: ರಹಾನೆಗೆ ಕ್ಯಾಪ್ಟನ್ ಹೊಣೆ?
ಈ ಅಂಕಿಗಳ ಜೊತೆ ರಹಾನೆ ಹಳೆ ಆಟದ ಲಯಕ್ಕೆ ಮರಳಿರುವುದನ್ನು ಗಮನಿಸಿದ ಬಿಸಿಸಿಐ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ರಹಾನೆ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಉಪನಾಯಕನ ಆಯ್ಕೆಯಾದ ಬಗ್ಗೆ ಮಾತನಾಡಿರುವ ರಹಾನೆ, ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕನಾಗಿ ಸುಮಾರು 4-5 ವರ್ಷಗಳಿಂದ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಮತ್ತೆ ತಂಡಕ್ಕೆ ಪುನರಾಗಮನ ಮಾಡಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
-
𝘿𝙊 𝙉𝙊𝙏 𝙈𝙄𝙎𝙎!
— BCCI (@BCCI) July 11, 2023 " class="align-text-top noRightClick twitterSection" data="
When #TeamIndia Captain @ImRo45 turned reporter in Vice-Captain @ajinkyarahane88's press conference 😎
What do you make of the questions 🤔 #WIvIND pic.twitter.com/VCEbrLfxrq
">𝘿𝙊 𝙉𝙊𝙏 𝙈𝙄𝙎𝙎!
— BCCI (@BCCI) July 11, 2023
When #TeamIndia Captain @ImRo45 turned reporter in Vice-Captain @ajinkyarahane88's press conference 😎
What do you make of the questions 🤔 #WIvIND pic.twitter.com/VCEbrLfxrq𝘿𝙊 𝙉𝙊𝙏 𝙈𝙄𝙎𝙎!
— BCCI (@BCCI) July 11, 2023
When #TeamIndia Captain @ImRo45 turned reporter in Vice-Captain @ajinkyarahane88's press conference 😎
What do you make of the questions 🤔 #WIvIND pic.twitter.com/VCEbrLfxrq
35ರ ಹರೆಯದಲ್ಲಿ ತಂಡಕ್ಕೆ ಮತ್ತೆ ಮರಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ನಾನು ಈಗಾಲೂ ಯಂಗ್ (ಚಿಕ್ಕವನೇ) ಆಗಿದ್ದು, ನನ್ನಲ್ಲಿ ಇನ್ನು ಸಾಕಷ್ಟು ಕ್ರಿಕೆಟ್ ಉಳಿದಿದೆ. ಐಪಿಎಲ್ ಮತ್ತು ದೇಶೀಯ ಋತುವಿನಲ್ಲಿ ನಡೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ನಾನು ಕೇವಲ ಆಟವನ್ನು ಆನಂದಿಸುತ್ತಿದ್ದು, ಬೇರೆ ಯಾವುದರ ಬಗ್ಗೆ ಕೂಡ ಯೋಚಿಸುತ್ತಿಲ್ಲ ಎಂದು ರಹಾನೆ ಉತ್ತರಿಸಿದ್ದಾರೆ. ಅಜಿಂಕ್ಯ ರಹಾನೆ ಅವರ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ ಬಗ್ಗೆ ನೋಡುವುದಾರೆ, ಭಾರತದ ಪರ ಇದುವರೆಗೆ 83 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 38.97 ಸರಾಸರಿಯಲ್ಲಿ 5066 ರನ್ ಗಳಿಸಿದ್ದು, ರಹಾನೆ ಹೆಸರಿನಲ್ಲಿ 12 ಶತಕ ಹಾಗೂ 26 ಅರ್ಧ ಶತಕಗಳು ದಾಖಲಾಗಿವೆ.
ಇದನ್ನೂ ಓದಿ : IND vs WI: ನಾಳೆಯಿಂದ ವಿಂಡೀಸ್ ವಿರುದ್ಧ ಮೊದಲ ಟೆಸ್ಟ್: ವಿಶೇಷ ಫೀಲ್ಡಿಂಗ್ ಕಸರತ್ತಿನಲ್ಲಿ ಭಾರತ ತಂಡ