ಲಂಡನ್: ಭಾರತದ ವೇಗಿ ಮೊಹಮ್ಮದ್ ಸಿರಾಜ್, ಆಕ್ರಮಣಶೀಲತೆಯು ತನ್ನಿಂದ ಉತ್ತಮವಾದದ್ದನ್ನು ಹೊರತರುತ್ತದೆ, ಮೈದಾನದಲ್ಲಿ ಆಕ್ರಮಣಕಾರಿಯಾಗಿರುವುದೇ ತನ್ನ ಯಶಸ್ಸಿನ ಸೂತ್ರ ಎಂದು ಹೇಳಿದ್ದಾರೆ. 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ನಂತರ ಸಿರಾಜ್ ಸಾಕಷ್ಟು ಅಂತಾರಾಷ್ಟ್ರೀಯ ಯಶಸ್ಸನ್ನು ಪಡೆದಿದ್ದಾರೆ. ಹೈದರಾಬಾದ್ ವೇಗಿ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಚೆಂಡಿನ ಮೂಲಕ ಭಾರತದ ಅಸಾಧಾರಣ ಪ್ರದರ್ಶನ ನೀಡಿದ್ದಾರೆ, ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದರು. ಹಾಗೇ ಟೆಸ್ಟ್ನಲ್ಲಿ ಐವತ್ತು ವಿಕೆಟ್ ಪಡೆದ ಸಾಧನೆ ಮಾಡಿದರು.
"ನನ್ನ ಬೌಲಿಂಗ್‌ನಲ್ಲಿ ಆಕ್ರಮಣಶೀಲತೆ ಬಹಳ ಮುಖ್ಯ. ಟೆಸ್ಟ್ ಕ್ರಿಕೆಟ್ ಆಕ್ರಮಣಶೀಲತೆಯನ್ನು ಆಧರಿಸಿದೆ. ಅಗ್ರೆಶನ್ ಜೊತೆಗೆ ನಾವು ಬಾಲ್ ಮಾಡಿದಾಗ ಸರಳವಾದ ಬೌಲ್ ಕೂಡಾ ಪರಿಣಾಮಕಾರಿಯಾಗಿ ಹೋಗುತ್ತದೆ. ನಾನು ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡುವಾಗ, ನಾನು ನನ್ನ ದೇಹವನ್ನು ತೊಡಗಿಸಿಕೊಳ್ಳುತ್ತೇನೆ. ಇತರ ಕೆಲವು ಬೌಲರ್‌ಗಳಂತೆ ಅಲ್ಲೊಂದು ಇಲ್ಲೊಂದು ಬೌಲ್ನ್ನು ಮಾತ್ರ ಆಕ್ರಮಣಕಾರಿಯಾಗಿ ಹಾಕಲು ಬಯಸುವುದಿಲ್ಲ, ನನ್ನ ಎಲ್ಲಾ ಬೌಲಿಂಗ್ ನಿಖರವಾಗಿರಿಸಲು ಭಯಸುತ್ತೇನೆ ಎಂದು ಐಸಿಸಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಸಿರಾಜ್ ಹೇಳಿದ್ದಾರೆ.
"ನನ್ನ ಆಟದಲ್ಲಿ ನಾನು ಹೆಚ್ಚು ಆಕ್ರಮಣಶೀಲತೆಯನ್ನು ಹಾಕುತ್ತೇನೆ, ನಾನು ಅದರಿಂದ ಹೆಚ್ಚು ಯಶಸ್ಸನ್ನು ಸಾಧಿಸುತ್ತೇನೆ. ನಾನು ಆಕ್ರಮಣಶೀಲತೆಯಿಂದ ಆಡುವುದನ್ನು ಸಂಪೂರ್ಣವಾಗಿ ಆನಂದಿಸುತ್ತೇನೆ" ಎಂದು ಹೇಳುವ ಮೂಲಕ ತಮ್ಮ ಬೌಲಿಂಗ್ನ ಸೀಕ್ರೆಟ್ ಬಗ್ಗೆ ಹಂಚಿಕೊಂಡಿದ್ದಾರೆ.
-
Mohammed Siraj will be out to bring the heat as India chase quick wickets on Day 4 of the #WTC23 Final 🔥
— ICC (@ICC) June 10, 2023 " class="align-text-top noRightClick twitterSection" data="
More on the fiery pacer 👇https://t.co/s7a00YS4OH
">Mohammed Siraj will be out to bring the heat as India chase quick wickets on Day 4 of the #WTC23 Final 🔥
— ICC (@ICC) June 10, 2023
More on the fiery pacer 👇https://t.co/s7a00YS4OHMohammed Siraj will be out to bring the heat as India chase quick wickets on Day 4 of the #WTC23 Final 🔥
— ICC (@ICC) June 10, 2023
More on the fiery pacer 👇https://t.co/s7a00YS4OH
ತಂದೆ ನೆನೆದ ಸಿರಾಜ್: ಸಿರಾಜ್ ಟೆಸ್ಟ್ ಕ್ರಿಕೆಟ್ ಆಡುವುದನ್ನು ಅತ್ಯತ್ತಮ ಆಟ ಎಂದೇ ಪರಿಗಣಿಸುತ್ತಾರೆ. ಅವರ ತಂದೆಗೆ ತಮ್ಮ ಟೆಸ್ಟ್ನ ಚೊಚ್ಚಲ ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ ಎಂಬುದರ ಬಗ್ಗೆ ಬೇಸರವನ್ನು ಹೊಂದಿದ್ದಾರೆ. ಡಿಸೆಂಬರ್ 26, 2020 ರಂದು ಮೆಲ್ಬೋರ್ನ್‌ನಲ್ಲಿ 77 ರನ್‌ಗಳಿಗೆ 5 ವಿಕೆಟ್ ಗಳಿಸುವ ಮೂಲಕ ಸಿರಾಜ್ ಭಾರತಕ್ಕೆ ಅತ್ಯುತ್ತಮ ಪಾದರ್ಪಣೆಯನ್ನು ಮಾಡಿದರು. ಆದರೆ ಟೆಸ್ಟ್‌ಗೆ ಸಿರಾಜ್ ಪಾದಾರ್ಪಣೆ ಮಾಡುವ ಕೆಲವೇ ವಾರಗಳ ಮೊದಲು ಸಿರಾಜ್ ಅವರ ತಂದೆ ಮೊಹಮ್ಮದ್ ಘೌಸ್ ನಿಧನರಾದರು.
"ಆ ಸಮಯದಲ್ಲಿ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದರಿಂದ ಆ ವರ್ಷ ನನಗೆ ವೈಯಕ್ತಿಕವಾಗಿ ಕಷ್ಟಕರವಾಗಿತ್ತು. ನಂತರ , ನಾನು ನನ್ನ ಚೊಚ್ಚಲ ಪಂದ್ಯವನ್ನಾಡುತ್ತೇನೋ ಇಲ್ಲವೋ ಎಂದು ನನಗೆ ಖಚಿತವಾಗಿರಲಿಲ್ಲ. ಆದಾಗ್ಯೂ, ಮೊಹಮ್ಮದ್ ಶಮಿ ಗಾಯಗೊಂಡಿದ್ದರಿಂದ ನಾನು ನನ್ನ ಮೊದಲ ಪಂದ್ಯವನ್ನು ಆಡಿದ್ದೇನೆ. ನಂತರ ನನಗೆ ಮೆಲ್ಬೋರ್ನ್‌ನಲ್ಲಿ ಆಡುವ ಅವಕಾಶ ಸಿಕ್ಕಿತು" ಎಂದು ಅವರು ಹೇಳಿದರು.
"ಆ ಸಮಯದಲ್ಲಿ ನನ್ನ ತಂದೆ ಬದುಕಿದ್ದರೆ ಎಷ್ಟು ಹೆಮ್ಮೆಪಡುತ್ತಿದ್ದರು ಎಂದು ನಾನು ಯೋಚಿಸುತ್ತಿದ್ದೆ, ಏಕೆಂದರೆ ನಾನು ಭಾರತಕ್ಕೆ ಟೆಸ್ಟ್‌ಗೆ ಪಾದಾರ್ಪಣೆ ಮಾಡಬೇಕೆಂದು ಮತ್ತು ಟೆಸ್ಟ್ ಕ್ರಿಕೆಟ್ ಆಡಬೇಕೆಂದು ಅವರು ಬಯಸಿದ್ದರು. ಟೆಸ್ಟ್ ಕ್ರಿಕೆಟ್ ಆಡುವುದು ಅಪಾರ ಗೌರವ ಮತ್ತು ಪ್ರತಿಷ್ಠೆಯ ವಿಷಯ" ಎಂದು ತಂದೆ ಹೇಳಿದ್ದನ್ನು ನೆನೆದಿದ್ದಾರೆ.
"ಆರಂಭದಲ್ಲಿ ನಾನು ಸಾಕಷ್ಟು ಟೆನಿಸ್-ಬಾಲ್ ಕ್ರಿಕೆಟ್ ಆಡುತ್ತಿದ್ದೆ. ನಾನು ಭಾರತೀಯ ಆಟಗಾರನಾಗುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ನಾನು ಟೆನಿಸ್-ಬಾಲ್ ಕ್ರಿಕೆಟ್ ಆಡುವಾಗ, ನಾನು ಯಾವಾಗಲೂ ನನ್ನ ಶೇಕಡಾ 100 ಅನ್ನು ನೀಡುತ್ತಿದ್ದೆ. ನಂತರ ಕ್ರಮೇಣ ನಾನು ಲೀಗ್‌ನಲ್ಲಿ ಆಡಲು ಪ್ರಾರಂಭಿಸಿದೆ, ನಾನು ಮೊದಲ ಬಾರಿಗೆ ಲೆದರ್ ಚೆಂಡನ್ನು ಹಿಡಿದಾಗ ನನಗೆ ಔಟ್ಸ್ವಿಂಗ್ ಮತ್ತು ಇನ್ಸ್ವಿಂಗ್ ಬಗ್ಗೆ ತಿಳಿದಿರಲಿಲ್ಲ. ಅದೇನೇ ಇದ್ದರೂ, ನಾನು ನನ್ನ ಚೊಚ್ಚಲ ಪಂದ್ಯದಲ್ಲೇ ಐದು ವಿಕೆಟ್‌ಗಳನ್ನು ಪಡೆದೆ. ಅಂದಿನಿಂದ ನಾನು ಆಟವನ್ನು ಮುಂದುವರಿಸಿದೆ. ಸತತವಾಗಿ ಮತ್ತು ನನ್ನ ಆತ್ಮವಿಶ್ವಾಸ ಬೆಳೆಯಿತು ಎಂದು ತಮ್ಮ ಟೆಸ್ಟ್ ಕ್ರಕೆಟ್ ಪ್ರಯಾಣದ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: WTC Final 2023: ಆಸಿಸ್ಗೆ ಕೊನೆಯಲ್ಲಿ ಕ್ಯಾರಿ - ಸ್ಟಾರ್ಕ್ ಬಲ.. ಭಾರತಕ್ಕೆ 444 ರನ್ನ ಗುರಿ ನೀಡಿದ ಆಸ್ಟ್ರೇಲಿಯಾ