ಲೀಡ್ಸ್: ಆಸ್ಟ್ರೇಲಿಯಾದಲ್ಲಿ ಜನಾಂಗೀಯ ನಿಂದನೆಯ ಬಳಿಕ, ಭಾರತದ ಉದಯೋನ್ಮುಖ ಕ್ರಿಕೆಟಿಗ ಮಹಮ್ಮದ್ ಸಿರಾಜ್ ಬಳಿ ಚೆಂಡು ಎಸೆದು ಇಂಗ್ಲಿಷ್ ಕ್ರಿಕೆಟ್ ಅಭಿಮಾನಿಗಳು ವಿಕೃತಿ ಮೆರೆದಿದ್ದಾರೆ. ನಿನ್ನೆ 3ನೇ ಟೆಸ್ಟ್‌ನ ಮೊದಲ ದಿನದ ಪಂದ್ಯದ ವೇಳೆ ಸಿರಾಜ್ ಬೌಂಡರಿಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದಾಗ ಘಟನೆ ನಡೆದಿದೆ. ಈ ವಿಚಾರವನ್ನು ಪಂದ್ಯ ಮುಗಿದ ಬಳಿಕ ಟೀಮ್‌ಮೇಟ್ ರಿಷಭ್ ಪಂತ್ ಬಹಿರಂಗಪಡಿಸಿದರು.
ಈ ಘಟನೆ ನಡೆದ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಸಿರಾಜ್ ಅವರಿಗೆ ಆಂಗ್ಲ ಕ್ರಿಕೆಟ್ ಅಭಿಮಾನಿಗಳು ಎಸೆದ ವಸ್ತುವನ್ನು ಹೊರಗೆಸೆಯುವಂತೆ ಕೋಪದಿಂದ ಸೂಚಿರುವುದನ್ನು ಕ್ಯಾಮರಾಗಳು ತೋರಿಸಿವೆ.
ಇಂಥ ಕೃತ್ಯಗಳಿಗೆ ಸೊಪ್ಪು ಹಾಕದ ಸಿರಾಜ್, ನಾವು ಈಗಾಗಲೇ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದ್ದೇವೆ ಅನ್ನುವುದನ್ನು ಕೈಸನ್ನೆಯ ಮೂಲಕ ಆಕರ್ಷಕವಾಗಿ ತೋರಿಸಿ, ಇಂಗ್ಲಿಷ್ ಕ್ರಿಕೆಟ್ ಅಭಿಮಾನಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದರು. ಈ ವಿಡಿಯೋ ನೋಡಿ..
- — Jon | Michael | Tyrion 🌊🌊 (@tyrion_jon) August 25, 2021 " class="align-text-top noRightClick twitterSection" data="
— Jon | Michael | Tyrion 🌊🌊 (@tyrion_jon) August 25, 2021
">— Jon | Michael | Tyrion 🌊🌊 (@tyrion_jon) August 25, 2021
ಈ ಬಗ್ಗೆ ರಿಷಭ್ ಪಂತ್ ಅವರನ್ನು ಕೇಳಿದಾಗ, 'ಇಂಗ್ಲಿಷ್ ಕ್ರಿಕೆಟಿಗರ ಪೈಕಿ ಯಾರೋ ಸಿರಾಜ್ ಮೇಲೆ ಚೆಂಡು ಎಸೆದಿದ್ದಾರೆ. ಇದು ಕೊಹ್ಲಿ ಅವರನ್ನು ಕೆರಳಿಸಿತು. ನೀವು ನಿಮಗೆ ಅನ್ನಿಸಿದ್ದನ್ನು ಹೇಳಬಹುದು, ಘೋಷಣೆಗಳನ್ನೂ ಕೂಗಬಹುದು. ಆದ್ರೆ ವಸ್ತುಗಳನ್ನು ಆಟಗಾರರ ಮೇಲೆ ಎಸೆಯುವುದು ಸರಿಯಲ್ಲ. ಇದು ಕ್ರಿಕೆಟ್ ಆಟಕ್ಕೂ ಒಳ್ಳೆಯದಲ್ಲ' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ಬೇಟೆಯಾಡಿದ ವೇಗಿ ಮಹಮ್ಮದ್ ಸಿರಾಜ್ ಕರಾರುವಾಕ್ ಪ್ರದರ್ಶನ ನೀಡಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ್ದರು. ಈ ಹಿಂದೆ ಆಸ್ಟ್ರೇಲಿಯಾದ ಎಂಸಿಜಿ ಕ್ರೀಡಾಂಗಣದಲ್ಲೂ ಸಿರಾಜ್ ಮೇಲೆ ಅಲ್ಲಿನ ಪ್ರೇಕ್ಷಕರು ಜನಾಂಗೀಯ ನಿಂದನೆ ಮಾಡಿರುವುದನ್ನು ಇಲ್ಲಿ ನೆನಪಿಸಬಹುದು. ಆ ಬಳಿಕ ಕೆಲವು ಪ್ರೇಕ್ಷಕರನ್ನು ಕ್ರಿಕೆಟ್ ಮೈದಾನದಿಂದ ಹೊರ ಕಳುಹಿಸಲಾಗಿತ್ತು. ಈ ಬಗ್ಗೆ ಸ್ವತ: ಸಿರಾಜ್ ಅಂಪೈರ್‌ಗಳಿಗೆ ದೂರು ನೀಡಿ ಕ್ರಮಕ್ಕೆ ಮನವಿ ಮಾಡಿದ್ದರು.
ಇದರ ಹೊರತಾಗಿ, ಲಾರ್ಡ್ಸ್ ಟೆಸ್ಟ್ ಸಂದರ್ಭದಲ್ಲಿ ಬೌಂಡರಿ ಗೆರೆಯ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಕೆ.ಎಲ್ ರಾಹುಲ್ ಮೇಲೆ ಶಾಂಪೇನ್ ಬಾಟಲಿಯ ಕಾರ್ಕ್‌ಗಳನ್ನು(ಮುಚ್ಚಳ) ಎಸೆದು ಕ್ರಿಕೆಟ್ ಆಟದ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದರು. ಈ ಸಂದರ್ಭದಲ್ಲಿ ಕೋಪಗೊಂಡಿದ್ದ ಕೊಹ್ಲಿ, ಇಂಗ್ಲಿಷ್ ಅಭಿಮಾನಿಗಳು ಎಸೆದ ಕಾರ್ಕ್‌ಗಳನ್ನು ಹಿಂತಿರುಗಿ ಎಸೆಯುವಂತೆ ಸೂಚಿಸಿದ್ದರು.