ಢಾಕಾ: ಸಂಘಟಿತ ಪ್ರದರ್ಶನ ತೋರಿದ ಅಫ್ಘಾನಿಸ್ತಾನ ಅತಿಥೇಯ ಬಾಂಗ್ಲಾದೇಶದ ವಿರುದ್ಧ 2ನೇ ಟಿ20 ಪಂದ್ಯವನ್ನು ಗೆದ್ದು 1-1ರಲ್ಲಿ ಸರಣಿಯನ್ನು ಹಂಚಿಕೊಂಡಿದೆ.
ಶನಿವಾರ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ಅಫ್ಘನ್ ಬೌಲರ್ಗಳ ದಾಳಿಕೆ ತತ್ತರಿಸಿದ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 115 ರನ್ಗಳಿಸಿತ್ತು. ಮುಶ್ಫೀಕರ್ ರಹೀಮ್ 30 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು, ರಹೀಮ್ ಹೊರತುಪಡಿಸಿ ನಾಯಕ ಮಹ್ಮುದುಲ್ಲಾ(21) ಮಾತ್ರ 20ರ ಗಡಿ ದಾಟಿದರು.
ಅಫ್ಘಾನಿಸ್ತಾನದ ಪರ ಅಜ್ಮತ್ತುಲ್ಲಾ ಒಮರ್ಝಾಯ್ 22ಕ್ಕೆ 3, ಫಜಲಕ್ ಫರೂಕಿ 18ಕ್ಕೆ 3 ವಿಕೆಟ್ ಪಡೆದರೆ, ರಶೀದ್ 30ಕ್ಕೆ , ನಬಿ 14ಕ್ಕೆ 1 ವಿಕೆಟ್ ಪಡೆದರು.
ಇನ್ನು 116 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ 17.4 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಹಜರುತ್ತುಲ್ಲಾ ಝಾಜೈ 45 ಎಸೆತಗಳಲ್ಲಿ 3 ಬೌಂಡರಿ ಮತ್ತು 5 ಸಿಕ್ಸರ್ ಸಹಿತ ಅಜೇಯ 59, ಉಸ್ಮಾನ್ ಘನಿ 48 ಎಸೆತಗಳಲ್ಲಿ 47 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಮೊದಲ ಪಂದ್ಯದಲ್ಲಿ 61 ರನ್ಗಳಿಂದ ಸೋಲು ಕಂಡಿದ್ದ ಅಫ್ಘಾನಿಸ್ತಾನ ತಂಡ 2 ನೇ ಪಂದ್ಯವನ್ನು ಗೆದ್ದು 2 ಪಂದ್ಯಗಳ ಸರಣಿಯನ್ನು ಬಾಂಗ್ಲಾದೇಶದೊಂದಿಗೆ ಹಂಚಿಕೊಂಡಿತು.
ಇದನ್ನೂ ಓದಿ:ರಾಕ್ಸ್ಟಾರ್ ಜಡೇಜಾ ಆಲ್ರೌಂಡರ್ ಆಟ: ಎರಡನೇ ದಿನವೂ ಪ್ರಾಬಲ್ಯ ಮೆರೆದ ಭಾರತ