ETV Bharat / sports

ಕೆಕೆಆರ್​ ವಿರುದ್ಧ 38 ರನ್​ಗಳ ಜಯ... ಐಪಿಎಲ್​ನಲ್ಲಿ ಇದೇ ಮೊದಲ ಸಲ ಆರಂಭದ 3 ಪಂದ್ಯಗಳನ್ನು ಗೆದ್ದ ಆರ್​ಸಿಬಿ

ಸಂಘಟಿತ ಪ್ರದರ್ಶನ ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಕೆಆರ್ ವಿರುದ್ಧ ಗೆಲುವು ಸಾಧಿಸಿ ಟೂರ್ನಿಯಲ್ಲಿ ಸೋಲಿಲ್ಲದ ತಂಡ ಎನಿಸಿಕೊಂಡಿದೆ.

ಕೆಕೆಆರ್​ ವಿರುದ್ಧ  ಆರ್​ಸಿಬಿಗೆ 38 ರನ್​ಗಳ ಜಯ

author img

By

Published : Apr 18, 2021, 7:30 PM IST

Updated : Apr 18, 2021, 7:57 PM IST

ಚೆನ್ನೈ: ಗ್ಲೇನ್ ಮ್ಯಾಕ್ಸ್​ವೆಲ್ ಮತ್ತು ಎಬಿಡಿ ಅರ್ಧಶತಕ ಹಾಗೂ ಬೌಲರ್​ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಆರ್​ಸಿಬಿ 38 ರನ್​ಗಳ ಅಂತರದಿಂದ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು ಮಣಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಆರ್​ಸಿಬಿ ಗ್ಲೇನ್ ಮ್ಯಾಕ್ಸ್​ವೆಲ್​ರ 78(49) ಮತ್ತು ವಿಲಿಯರ್ಸ್​ರ 76(34) ರನ್​ಗಳ ನೆರವಿನಿಂದ 204 ರನ್​ಗಳಿಸಿ, ಕೆಕೆಆರ್​ಗೆ 205 ರನ್​ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್​ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 166 ರನ್​ಗಳಿಸಲಷ್ಟೇ ಶಕ್ತವಾಗಿ 38 ರನ್​ಗಳ ಸೋಲುಂಡಿತು.

ಆರಂಭಿಕರಾಗಿ ಕಣಕ್ಕಿಳಿದ ಶುಬ್ಮನ್ ಗಿಲ್ 2ನೇ ಓವರ್​ನಲ್ಲೇ ಜೇಮಿಸನ್​ಗೆ ಎರಡು ಸಿಕ್ಸರ್​ ಮತ್ತು ಬೌಂಡರಿ ಸಿಡಿಸಿ ಸ್ಫೋಟಕ ಆರಂಭ ಒದಗಿಸಿದರು. ಆದರೆ ಅದೇ ಓವರ್​ನ 5ನೇ ಎಸೆತದಲ್ಲಿ ಕ್ರಿಸ್ಚಿಯನ್ ಪಡೆದ ಅದ್ಭುತ ಕ್ಯಾಚ್​ಗೆ ಬಲಿಯಾದರು. ನಂತರ ಬಂದ ರಾಹುಲ್ ತ್ರಿಪಾಠಿ(25) ಮತ್ತು ರಾಣಾ(18) 2ನೇ ವಿಕೆಟ್​ಗೆ 34 ರನ್​ಗಳ ಜೊತೆಯಾಟ ನೀಡಿದರು. 20 ಎಸೆತಗಳಲ್ಲಿ 5 ಬೌಂಡರಿ ಸಹಿತ 25 ರನ್​ಗಳಿಸಿದ್ದ ತ್ರಿಪಾಠಿ, ಸುಂದರ್​ ಬೌಲಿಂಗ್​ನಲ್ಲಿ ಔಟಾದರೆ, ನಂತರದ ಓವರ್​ನಲ್ಲೇ ಚಹಾಲ್ ಬೌಲಿಂಗ್​ನಲ್ಲಿ ರಾಣಾ ಕೂಡ ಪಡಿಕ್ಕಲ್​ಗೆ ಕ್ಯಾಚ್​ ನೀಡಿ ಔಟಾದರು.

ನಂತರ ಬಂದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ 2 ರನ್​ಗಳಿಸಿ ಚಹಾಲ್ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಟಾರ್ಗೆಟ್​ ಹೆಚ್ಚಿದ್ದರಿಂದ ಬಂದ ಬ್ಯಾಟ್ಸ್​ಮನ್​ಗಳೆಲ್ಲಾ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲಿದರು. ಇಯಾನ್ ಮಾರ್ಗನ್​ 23 ಎಸೆತಗಳಲ್ಲಿ 29, ಶಕಿಬ್, 25 ಎಸೆತಗಳಲ್ಲಿ 26 , ರಸೆಲ್ 20 ಎಸೆತಗಳಲ್ಲಿ 32 ರನ್​, ಕಮ್ಮಿನ್ಸ್​ 6 ರನ್​ಗಳಿಸಿ ಔಟಾದರು.

ಕೊನೆಯ 18 ಎಸೆತಗಳಲ್ಲಿ 59 ರನ್​ಗಳ ಅಗತ್ಯವಿತ್ತು, 18ನೇ ಓವರ್​ನಲ್ಲಿ ಜೆಮೀಸ್ನ 15 ರನ್​ ನೀಡಿ 2 ವಿಕೆಟ್ ಪಡೆದರು. 19ನೇ ಓವರ್​ನಲ್ಲಿ ಸಿರಾಜ್​ ಕೇವಲ 1 ರನ್​ ನೀಡಿದರೆ, 20ನೇ ಓವರ್​ನಲ್ಲಿ ಹರ್ಷೆಲ್ ಪಟೇಲ್ 4 ರನ್​ ನೀಡಿ ರಸೆಲ್​ ವಿಕೆಟ್ ಪಡೆದರು.

ಆರ್​ಸಿಬಿ ಪರ ಜೆಮೀಸನ್ 41 ರನ್​ ನೀಡಿ ದುಬಾರಿಯಾದರು ಪ್ರಮುಖ 3 ವಿಕೆಟ್​ ಪಡೆಯುವಲ್ಲಿ ಸಫಲರಾದರು. ಹರ್ಷೆಲ್ ಪಟೇಲ್ 17ಕ್ಕೆ 2, ಚಹಾಲ್ 34ಕ್ಕೆ 2 ಹಾಗೂ ಸುಂದರ್​ 33ಕ್ಕೆ 1 ವಿಕೆಟ್ ಪಡೆದರು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Last Updated : Apr 18, 2021, 7:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.