ಹೈದರಾಬಾದ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಹಿಡಿತ ಸಾಧಿಸಿದ್ದು, ಮೊದಲ ಇನ್ನಿಂಗ್ಸ್ನಲ್ಲೇ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಶತಕ ಸಿಡಿಸಿ ಮಿಂಚಿದ್ದಾರೆ. ಇವರ ಆಟಕ್ಕೆ ಈಗಾಗಲೇ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್ ಎಬಿ ಡಿವಿಲಿಯರ್ಸ್ ಕೂಡ ಟ್ವೀಟ್ ಮಾಡಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
-
Haven’t been home and missed most of the Cricket action. Finished watching the highlights now. That counterattack partnership from @RishabhPant17 and @imjadeja is right up there with the best I’ve ever seen in Test Cricket!
— AB de Villiers (@ABdeVilliers17) July 4, 2022 " class="align-text-top noRightClick twitterSection" data="
">Haven’t been home and missed most of the Cricket action. Finished watching the highlights now. That counterattack partnership from @RishabhPant17 and @imjadeja is right up there with the best I’ve ever seen in Test Cricket!
— AB de Villiers (@ABdeVilliers17) July 4, 2022Haven’t been home and missed most of the Cricket action. Finished watching the highlights now. That counterattack partnership from @RishabhPant17 and @imjadeja is right up there with the best I’ve ever seen in Test Cricket!
— AB de Villiers (@ABdeVilliers17) July 4, 2022
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಇಂಗ್ಲೆಂಡ್ ವಿರುದ್ಧ ಮರು ನಿಗಿದಿಯಾಗಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕಣಕ್ಕಿಳಿದಿದ್ದು, ಮೊದಲ ಇನ್ನಿಂಗ್ಸ್ನಲ್ಲಿ 98 ರನ್ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡಿದ್ದ ವೇಳೆ ಒಂದಾದ ಪಂತ್ - ಜಡೇಜಾ ಜೋಡಿ ದಾಖಲೆಯ 222ರನ್ಗಳ ಜೊತೆಯಾಟವಾಡಿತು. ಜೊತೆಗೆ ಇಬ್ಬರು ಶತಕ ಸಿಡಿಸಿ ಮಿಂಚಿದ್ದಾರೆ. ಇವರ ಆಟಕ್ಕೆ ಫಿದಾ ಆಗಿರುವ ಎಬಿಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Eng vs Ind Test: ಪಂದ್ಯದ ಮೇಲೆ ಭಾರತ ಬಿಗಿ ಹಿಡಿತ; ಸ್ಲೆಡ್ಜ್ ಮಾಡಿ ವಿರಾಟ್ ಕೊಹ್ಲಿ ಟ್ರೋಲ್
ಟೆಸ್ಟ್ ಕ್ರಿಕೆಟ್ನಲ್ಲಿ ನಾನು ಇಲ್ಲಿಯವರೆಗೆ ನೋಡಿದ ಅತ್ಯುತ್ತಮ ಜೊತೆಯಾಟ ಇದಾಗಿದೆ ಎಂದಿರುವ ಅವರು, 'ಮನೆಯಲ್ಲಿ ಇಲ್ಲದ ಕಾರಣ ಈ ಟೆಸ್ಟ್ ನೋಡುವುದನ್ನ ತಪ್ಪಿಸಿಕೊಂಡಿದ್ದೇನೆ. ಆದರೆ, ಇದೀಗ ಹೈಲೈಟ್ಸ್ ನೋಡಿದ್ದು, ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಜೊತೆಯಾಟ ಟೆಸ್ಟ್ ಕ್ರಿಕೆಟ್ನಲ್ಲಿ ನಾನು ನೋಡಿದ ಅತ್ಯುತ್ತಮ ಇನ್ನಿಂಗ್ಸ್ ಆಗಿದೆ' ಎಂದಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಪಂತ್ 146 ರನ್ಗಳಿಕೆ ಮಾಡಿದ್ರೆ, ಜಡೇಜಾ 104ರನ್ಗಳಿಸಿದ್ದಾರೆ. ಈ ಮೂಲಕ ಭಾರತ 416ರನ್ಗಳಿಕೆ ಮಾಡಿದ್ದು, ಮೊದಲ ಇನ್ನಿಂಗ್ಸ್ನಲ್ಲಿ 132ರನ್ಗಳ ಮುನ್ನಡೆ ಸಾಧಿಸಿದೆ.