ETV Bharat / sports

Los Angeles Olympics 2028: ಒಲಿಂಪಿಕ್​ ಕ್ರೀಡಾಕೂಟ ಸೇರಲಿದೆ ಕ್ರಿಕೆಟ್.. ಪ್ರಸಾರದ ಹಕ್ಕಿನ ಲಾಭಕ್ಕಾಗಿ ಈ ನಿರ್ಧಾರ! - ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡಾಕೂಟ

ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿರುವ ಕ್ರಿಕೆಟ್​ಗೆ​ 2028ರ ಒಲಿಂಪಿಕ್​ನಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Los Angeles Olympics 2028
Los Angeles Olympics 2028
author img

By

Published : Jul 29, 2023, 5:19 PM IST

ಲಂಡನ್: ಸದ್ಯ ಜಗತ್ತಿನಲ್ಲಿ ಜನರಿಂದ ಹೆಚ್ಚು ಮನ್ನಣೆ ಪಡೆಯುತ್ತಿರುವ ಆಟಗಳು ಎಂದು ಗಮನಿಸುವುದಾದರೆ ಕ್ರಿಕೆಟ್​ ಮತ್ತು ಫುಟ್ಬಾಲ್​ ಕಾಣ ಸಿಗುತ್ತದೆ. ಜನಪ್ರಿಯತೆ ಗಳಿಸಿರುವ ಕ್ರಿಕೆಟ್​ನ್ನು ಒಲಿಂಪಿಕ್​ಗೆ ಸೇರಿಸುವುದು ಈ ಹಿಂದೆಯೇ ನಡೆದ ಚರ್ಚೆ. ಈಗ ಇದು ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ 20 ಮಾದರಿಯಲ್ಲಿ ನಡೆಯುವ ಕ್ರಿಕೆಟ್​ಗೆ ಸಿಗುತ್ತಿರುವ ಜನ ಮನ್ನಣೆ ಎಂದರೆ ತಪ್ಪಾಗದು.

ಟಿ-20 ಕ್ರಿಕೆಟ್‌ಗೆ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಒಲಿಂಪಿಕ್​ಗೆ ಸೇರಿಸಲು ಪ್ರಯತ್ನಗಳು ನಡೆಯುತ್ತಿದೆ. ಇದು ಕ್ರಿಕೆಟ್ ಮತ್ತೊಮ್ಮೆ ಒಲಿಂಪಿಕ್​ಗೆ ಮರಳುವ ಹಾದಿಯಲ್ಲಿದೆ ಎಂದು ತೋರುತ್ತದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್​​ನ್ನು ಟಿ20 ಸ್ವರೂಪವನ್ನು ಸೇರಿಸುವ ಸಾಧ್ಯತೆಯಿದೆ. ಇದರಿಂದಾಗಿ ಪುರುಷ ಮತ್ತು ಮಹಿಳಾ ಟಿ20 ಕ್ರಿಕೆಟ್ ತಂಡಗಳು ಒಲಿಂಪಿಕ್​ನಲ್ಲಿ ಪದಕ ಗೆಲ್ಲಲು ಅರ್ಹತೆ ಪಡೆಯುತ್ತವೆ.

ಪುರುಷರ ಮತ್ತು ಮಹಿಳಾ ಟಿ -20 ಕ್ರಿಕೆಟ್ ತಂಡಗಳು ಒಲಿಂಪಿಕ್​ನಲ್ಲಿ ಆಡಲು ಅರ್ಹತೆ ಪಡೆಯಬಹುದು. ಬೇಸ್‌ಬಾಲ್ - ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್, ಬ್ರೇಕ್ ಡ್ಯಾನ್ಸ್, ಕರಾಟೆ, ಕಿಕ್‌ಬಾಕ್ಸಿಂಗ್, ಸ್ಕ್ವಾಷ್ ಮತ್ತು ಮೋಟಾರ್‌ಸ್ಪೋರ್ಟ್ ಜೊತೆಗೆ 2028 ರ ಲಾಸ್ ಏಂಜಲೀಸ್ ಒಲಿಂಪಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾದ ಒಂಬತ್ತು ಕ್ರೀಡೆಗಳಲ್ಲಿ ಕ್ರಿಕೆಟ್ ಒಂದಾಗಿದೆ ಎಂದು ಹೇಳಲಾಗುತ್ತದೆ. ಇದಕ್ಕೂ ಮೊದಲು, ಅಂದರೆ 1900ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್​ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಮೊದಲ ಬಾರಿಗೆ ಆಡಿಸಲಾಗಿತ್ತು.

ಒಲಿಂಪಿಕ್​ಗೆ ಕ್ರಿಕೆಟ್‌ನ ಪ್ರವೇಶದ ಪ್ರಸ್ತುತ ಪ್ರಸ್ತಾಪವು ಪ್ರತಿ ಸ್ಪರ್ಧೆಯಲ್ಲಿ ಐದು ತಂಡಗಳನ್ನು ಹೊಂದಿರುತ್ತದೆ, ಅವರ ಅರ್ಹತೆಯು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ರಚಿಸಿದ ಶ್ರೇಯಾಂಕವನ್ನು ಆಧರಿಸಿರುತ್ತದೆ. ವರ್ಷಾಂತ್ಯದಲ್ಲಿ 2028ರ ಲಾಸ್ ಏಂಜಲೀಸ್ ಒಲಿಂಪಿಕ್​ಗೆ ಕ್ರಿಕೆಟ್​​ ಮತ್ತು ಇತರ ಕ್ರೀಡೆಗಳ ಸೇರ್ಪಡೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ವರದಿಯಾಗಿದೆ.

ಕ್ರಿಕೆಟ್​ ಜೊತೆಗೆ ಬೇಸ್‌ಬಾಲ್ - ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್, ಬ್ರೇಕ್ ಡ್ಯಾನ್ಸಿಂಗ್, ಕರಾಟೆ, ಕಿಕ್‌ಬಾಕ್ಸಿಂಗ್, ಸ್ಕ್ವಾಷ್ ಮತ್ತು ಮೋಟಾರ್‌ಸ್ಪೋರ್ಟ್ ಸ್ಪರ್ಧೆಯನ್ನು ಒಲಿಂಪಿಕ್​​ಗೆ ಸೇರಿಸುವ ಬಗ್ಗೆ ಚರ್ಚೆಗಳಿವೆ. ಈ ಒಂಬತ್ತು ಕ್ರೀಡೆಗಳನ್ನು ಒಲಂಪಿಕ್​ ಸಮಿತಿ ಯಾವುದಕ್ಕೆ ಒಪ್ಪಿಗೆ ನೀಡಲಿದೆ ಎಂಬುದು ಈ ವರ್ಷದ ಕಡೆಯಲ್ಲಿ ತಿಳಿದು ಬರಲಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಮತ್ತು ಮಹಿಳೆಯರ ಟಿ20 ಮಾದರಿಯಲ್ಲಿ ಆಟವನ್ನು ಆಡಲಾಗುತ್ತದೆ. ಒಲಿಂಪಿಕ್ಸ್‌ಗೆ ಕ್ರಿಕೆಟ್‌ ಸೇರ್ಪಡೆಗೊಂಡರೆ ಪ್ರಸಾರ ಮಾಧ್ಯಮ ಹಕ್ಕುಗಳ ಮಾರಾಟದ ಮೇಲೆ ಪರಿಣಾಮ ಬೀರಲಿದೆ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಪ್ರಸಾರದ ಹಕ್ಕಿನ ಲಾಭ: ವರದಿಯ ಪ್ರಕಾರ, ಭಾರತದಲ್ಲಿ ಪ್ರಸ್ತುತ ಒಲಿಂಪಿಕ್ ಪ್ರಸಾರದ ಹಕ್ಕುಗಳನ್ನು ವೈಯಕ್ತಿಕ ಕ್ರೀಡೆಗಳಿಗೆ ಮೀಸಲಾಗಿಸಿದೆ. 2024 ರ ಪ್ಯಾರಿಸ್ ಒಲಿಂಪಿಕ್ ಕೇವಲ 15.6 ಮಿಲಿಯನ್ ಪೌಂಡ್ ($20 ಮಿಲಿಯನ್) ಮೌಲ್ಯದ್ದಾಗಿದೆ ಎಂದು ಹೇಳಲಾಗಿದೆ. ಆದರೆ, ಭಾರತೀಯ ಕ್ರಿಕೆಟ್ ತಂಡಗಳು ಒಲಿಂಪಿಕ್​ನಲ್ಲಿ ಭಾಗವಹಿಸುವ ಭರವಸೆ ನೀಡಿದರೆ, 2028 ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮತ್ತು ನಂತರ 2032 ಬ್ರಿಸ್ಬೇನ್ ಒಲಿಂಪಿಕ್​ಗೆ ಈ ಸಂಖ್ಯೆ 150 ಮಿಲಿಯನ್‌ ಪೌಂಡ್​ಗೆ ಏರಬಹುದು ಎನ್ನಲಾಗುತ್ತಿದೆ. ಈ ಲಾಭಕ್ಕಾಗಿ ಕ್ರಿಕೆಟ್​ ಒಲಂಪಿಕ್​​ನಲ್ಲಿ ಸ್ಥಾನ ಪಡೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕ್ರೀಡೆಯು 2028 ರ ಲಾಸ್ ಏಂಜಲೀಸ್ ಒಲಿಂಪಿಕ್​ಗೆ ಬಂದರೆ, ಇಂಗ್ಲೆಂಡ್ ತಂಡ ಗ್ರೇಟ್ ಬ್ರಿಟನ್ ಆಗಿ ಸ್ಪರ್ಧಿಸುತ್ತದೆ ಎಂದು ಅದು ಹೇಳಿದೆ. ಟೆಕ್ಸಾಸ್ ಮತ್ತು ನಾರ್ತ್ ಕೆರೊಲಿನಾದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC) ಉದ್ಘಾಟನಾ ಋತುವಿನೊಂದಿಗೆ ಯುನೈಟೆಡ್ ಸ್ಟೇಟ್ಸ್‌ ಸಹ ಕ್ರಿಕೆಟ್​​ಗೆ ಪ್ರವೇಶವನ್ನು ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: ಮೈದಾನದಲ್ಲಿ ವಿಶ್ವಕಪ್​ ಪಂದ್ಯ ನೋಡಲು ಆಸೆಯೇ..? ಹಾಗಾದರೆ ಈ ದಿನಾಂಕದಿಂದ ನಿಮ್ಮ ಟಿಕೆಟ್​ ಕಾಯ್ದಿರಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.