ETV Bharat / sports

ಆಸ್ಟ್ರೇಲಿಯಾವನ್ನು ಅವರ ನೆಲದಲ್ಲೇ ಮಣಿಸಿದ್ದು ಆತ್ಮ ವಿಶ್ವಾಸ ಹೆಚ್ಚಿಸಿದೆ: ಇಶಾಂತ್

ಈ ಸರಣಿಯ ನಂತರ ನಾವು ಎಂತಹ ಸ್ಥಿತಿಯಿದ್ದರೂ ಹಿಂತಿರುಗಬಹುದು ಎಂಬ ನಂಬಿಕೆ ದೊಡ್ಡದಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ಭಾರತೀಯ ಕ್ರಿಕೆಟ್​ ಮುಂದಿನ ಹಂತಕ್ಕೆ ಪ್ರವೇಶಿಸಲು ಸಹಾಯ ಮಾಡಿದೆ.. ನಾನು ಆ ವಿಜಯದ ಭಾಗವಾಗಿರದಿದ್ದರೂ, ಬಾರ್ಡರ್ - ಗವಾಸ್ಕರ್ ಟ್ರೋಫಿ ಜಯ ನಮ್ಮ ತಂಡಕ್ಕೆ ವಿಭಿನ್ನ ರೀತಿಯ ಆತ್ಮ ನಂಬಿಕೆಯನ್ನು ನೀಡಿದೆ ಎಂದು ಇಶಾಂತ್ ಶರ್ಮಾ ಹೇಳಿದ್ದಾರೆ.

ಇಶಾಂತ್ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್

author img

By

Published : Jun 12, 2021, 4:43 PM IST

ಸೌತಾಂಪ್ಟನ್: ಆಸ್ಟ್ರೇಲಿಯಾದಲ್ಲಿ 2020-21ರ ಬಾರ್ಡರ್ ಗವಾಸ್ಕರ್​ ಟ್ರೋಫಿಯನ್ನು ಗೆದ್ದಿರುವುದು ಟೀಮ್​ ಇಂಡಿಯಾಗೆ ವಿಭಿನ್ನವಾದ ಆತ್ಮವಿಶ್ವಾಸವನ್ನು ತುಂಬಿದೆ ಎಂದು ವೇಗಿ ಇಶಾಂತ್ ಶರ್ಮಾ ಹೇಳಿದ್ದಾರೆ. ನ್ಯೂಜಿಲ್ಯಾಂಡ್​ ವಿರುದ್ಧ ಇದೇ ತಿಂಗಳು ಇಂಗ್ಲೆಂಡ್​ನಲ್ಲಿ ನಡೆಯುವ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲೂ ಅದೇ ವಿಶ್ವಾಸದಿಂದ ಆಡುವುದಾಗಿ ಅವರು ತಿಳಿಸಿದ್ದಾರೆ.

ಜೂನ್​ 18ರಂದು ಸೌತಾಂಪ್ಟನ್​ನ ಏಜಿಯಸ್ ಬೌಲ್​ನಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ನಡೆಯಲಿದೆ. ಈ ವರ್ಷದ ಆರಂಭದಲ್ಲಿ ಗಾಯದಿಂದ ಪೆಟ್ಟು ತಿಂದಿದ್ದ ಭಾರತ ತಂಡ ಅನನುಭವಿಗಳ ನೆರವಿನಿಂದಲೇ ಬಲಿಷ್ಠ ಆಸ್ಟ್ರೇಲಿಯಾ ತಂಡದ ವಿರುದ್ಧ 2-1ರಲ್ಲಿ ಸರಣಿ ಜಯಿಸಿತ್ತು. ಅದರಲ್ಲೂ 32 ವರ್ಷಗಳಿಂದ ಸೋಲೇ ಕಾಣದ ಗಬ್ಬಾದಲ್ಲಿ ಆಸೀಸ್​ ತಂಡಕ್ಕೆ ಭಾರತ ಸೋಲುಣಿಸಿತ್ತು.

ಇದೊಂದು ಪ್ರಯೋಗಾತ್ಮಕ ಮತ್ತು ಭಾವನಾತ್ಮಕ ಪಯಣ, ಈ ಐಸಿಸಿ ಟೂರ್ನಮೆಂಟ್​ 50 ಓವರ್​ಗಳ ಏಕದಿನ ವಿಶ್ವಕಪ್​ಗೆ ಮಹತ್ವವನ್ನು ಹೊಂದಿದೆ. ಇದು ಕೇವಲ ಒಂದು ತಿಂಗಳ ಪರಿಶ್ರಮದ ಫಲಿತಾಂಶವಲ್ಲ. ಇದರಲ್ಲಿ ನಮ್ಮ ಎರಡು ವರ್ಷಗಳ ಬೆವರು ಮತ್ತು ಕಠಿಣ ಪರಿಶ್ರಮವಿದೆ ಎಂದು ವಿರಾಟ್​ ಕೊಹ್ಲಿ ಈಗಾಗಲೆ ಹೇಳಿದ್ದಾರೆ.

ನಾವು ಕೋವಿಡ್​ನಿಂದ ಹೆಚ್ಚು ಶ್ರಮಿಸಿದ್ದೇವೆ. ಇದರ ಜೊತೆಗೆ ಹೊಸ ನಿಯಮಗಳು ಮತ್ತು ಒತ್ತಡದಲ್ಲೂ ಆಸ್ಟ್ರೇಲಿಯಾದಲ್ಲಿ ಕಠಿಣ ಸರಣಿ ಜಯಿಸಿದ್ದೇವೆ. ಜೊತೆಗೆ ಇಂಗ್ಲೆಂಡ್ ವಿರುದ್ಧವೂ 3-1ರಲ್ಲಿ ಸರಣಿ ಜಯಿಸಿದ್ದೇವೆ ಎಂದು ಇಶಾಂತ್ ಬಿಸಿಸಿಐ ಟಿವಿಗೆ ಹೇಳಿದ್ದಾರೆ.

"ಈ ಸರಣಿಯ ನಂತರ ನಾವು ಎಂತಹ ಸ್ಥಿತಿಯಿದ್ದರೂ ಹಿಂತಿರುಗಬಹುದು ಎಂಬ ನಂಬಿಕೆ ದೊಡ್ಡದಾಗಿದೆ. ಇದು ಭಾರತೀಯ ಕ್ರಿಕೆಟ್​ ಮುಂದಿನ ಹಂತಕ್ಕೆ ಪ್ರವೇಶಿಸಲು ಸಹಾಯ ಮಾಡಿದೆ.. ನಾನು ಆ ವಿಜಯದ ಭಾಗವಾಗಿರದಿದ್ದರೂ, ಬಾರ್ಡರ್ - ಗವಾಸ್ಕರ್ ಟ್ರೋಫಿ ಜಯ ನಮ್ಮ ತಂಡಕ್ಕೆ ವಿಭಿನ್ನ ರೀತಿಯ ಆತ್ಮ ನಂಬಿಕೆಯನ್ನು ನೀಡಿದೆ." ಎಂದು ಅವರು ಹೇಳಿದರು.

ಇದನ್ನು ಓದಿ: WTC ಫೈನಲ್​.. ಬೌಲ್ಟ್​ vs ರೋಹಿತ್ ನಡುವಿನ ರೋಚಕ ಕಾಳಗ ನೋಡಲು ಕಾತುರದಿಂದ್ದೇನೆ: ಸೆಹ್ವಾಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.