ನವದೆಹಲಿ: ಎಂಟನೇ ಏಷ್ಯಾಕಪ್ ಗೆಲ್ಲಲು ಮತ್ತು 10 ವರ್ಷಗಳ ಐಸಿಸಿ ಕಪ್ ಬರವನ್ನು ನೀಗಿಸಲು ಭಾರತ ತಂಡ ಶತಾಯ ಗತಾಯ ಪ್ರಯತ್ನದಲ್ಲಿದೆ. ಇದಕ್ಕಾಗಿ ಬಿಸಿಸಿಐ ತನ್ನ ಸರ್ವಶಕ್ತಿಯನ್ನು ಬಳಸಿ ಯಶಸ್ಸಿನ ಹುಡುಕಾಟ ಮಾಡುತ್ತಿದೆ ಎಂದರೆ ತಪ್ಪಾಗದು. ಏಕೆಂದರೆ ವಿಶ್ವಕಪ್ಗೂ ಮುನ್ನ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಯಲ್ಲಿ ನಡೆಯುತ್ತಿರುವ ಅಭ್ಯಾಸದಲ್ಲಿ 15 ಹೆಚ್ಚು ನೆಟ್ ಬೌಲರ್ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಇದೆ.
ಏಷ್ಯಾಕಪ್ನಲ್ಲಿ ಭಾರತಕ್ಕೆ ಪಾಕಿಸ್ತಾನ ತಂಡ ಪ್ರಬಲ ಎದುರಾಳಿ ಎಂದು ಬಿಂಬಿತವಾಗುತ್ತಿದೆ. ಅಲ್ಲದೇ ಪಾಕಿಸ್ತಾನ ವೇಗದ ಬೌಲಿಂಗ್ನಲ್ಲಿ ಬಲಿಷ್ಠವಾಗಿದೆ. ಬಾಬರ್ ಅಜಮ್ ನಾಯಕತ್ವದ ಅಡಿಯಲ್ಲಿ ಪಾಕ್ ತಂಡ 10 ಏಕದಿನ ಪಂದ್ಯಗಳನ್ನು ಈ ವರ್ಷ ಆಡಿದ್ದು ಅದರಲ್ಲಿ ಕೇವಲ 3 ರಲ್ಲಿ ಸೋಲು ಕಂಡಿದೆ. ಏಷ್ಯಾಕಪ್ನಲ್ಲಿ ಪಾಕಿಸ್ತಾನದ ಎಡಗೈ ಬೌಲರ್ ಶಾಹೀನ್ ಆಫ್ರಿದಿ ಕಾಡಿದರೆ, ವಿಶ್ವಕಪ್ನಲ್ಲಿ ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಭೀತಿ ಇದೆ. ಹೀಗಾಗಿ ಇವರು ಎದುರಿಸುವ ನಿಟ್ಟಿನಲ್ಲಿ ವಿಭಿನ್ನ ಬೌಲಿಂಗ್ ಅನುಭವಕ್ಕಾಗಿ 15ಕ್ಕೂ ಹೆಚ್ಚು ಬೌಲರ್ಗಳಿಂದ ಬಾಲ್ ಹಾಕಿಸಲಾಗುತ್ತಿದೆ.
-
Indian team has 15 net bowlers at Alur for the Asia Cup practice including Umran Malik, Yash Dhayal, Kuldeep Sen, Sai Kishore, Rahul Chahar, Shams Mulani & more. [Star Sports] pic.twitter.com/i06yT8CJF3
— Johns. (@CricCrazyJohns) August 25, 2023 " class="align-text-top noRightClick twitterSection" data="
">Indian team has 15 net bowlers at Alur for the Asia Cup practice including Umran Malik, Yash Dhayal, Kuldeep Sen, Sai Kishore, Rahul Chahar, Shams Mulani & more. [Star Sports] pic.twitter.com/i06yT8CJF3
— Johns. (@CricCrazyJohns) August 25, 2023Indian team has 15 net bowlers at Alur for the Asia Cup practice including Umran Malik, Yash Dhayal, Kuldeep Sen, Sai Kishore, Rahul Chahar, Shams Mulani & more. [Star Sports] pic.twitter.com/i06yT8CJF3
— Johns. (@CricCrazyJohns) August 25, 2023
ಅನಿಕೇತ್ ಚೌಧರಿ ಅವರು ದೇಶಿಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಆಲೂರಿನಲ್ಲಿ ನಡೆಯುತ್ತಿರುವ ಅಭ್ಯಾಸಕ್ಕಾಗಿ ಕರೆಸಲಾಗಿದೆ. ಕಳೆದ ರಣಜಿ ಆವೃತ್ತಿಯಲ್ಲಿ 33 ವರ್ಷದ ಅನಿಕೇತ್ 7 ಪಂದ್ಯದಿಂದ 33 ವಿಕೆಟ್ ಪಡೆದು ಮಿಂಚಿದ್ದಾರೆ. ಇವರು ಎಡಗೈ ವೇಗದ ಬೌಲರ್ ಆಗಿರುವುದರಿಂದ ಶಾಹೀನ್ ಆಫ್ರಿದಿ, ಟ್ರೆಂಟ್ ಬೌಲ್ಟ್ ಅವರನ್ನು ಮಹತ್ವದ ಟೂರ್ನಿಯಲ್ಲಿ ಎದುರಿಸಲು ಸಹಾಯವಾಗಲಿದೆ.
ಇವರಲ್ಲದೇ ನೆಟ್ ಬೌಲರ್‌ಗಳಲ್ಲಿ ಉಮ್ರಾನ್ ಮಲಿಕ್, ಕುಲದೀಪ್ ಸೇನ್, ಯಶ್ ದಯಾಳ್ ಮತ್ತು ಸಾಯಿ ಕಿಶೋರ್, ರಾಹುಲ್ ಚಾಹರ್ ಮತ್ತು ತುಷಾರ್ ದೇಶಪಾಂಡೆ ಸಹ ಇದ್ದಾರೆ. ಇವರು ದೇಶಿಯ ಟೂರ್ನಿಗಳಲ್ಲಿ ಮತ್ತು ಐಪಿಎಲ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವುದರಿಂದ ಆಯ್ಕೆ ಆಗಿದ್ದಾರೆ.
-
Day 1 practice session of the Indian team at Alur. [Star Sports]
— Johns. (@CricCrazyJohns) August 25, 2023 " class="align-text-top noRightClick twitterSection" data="
- 6 hours of practice
- Payers were batting as pair: Rohit & Gill, Kohli & Iyer, Hardik & Jadeja (Around 1 hour each)
- KL Rahul batted for long time
- Sai Kishore, Kuldeep was bowling a lot to Kohli
- 10-12 net… pic.twitter.com/JngMYLH6IO
">Day 1 practice session of the Indian team at Alur. [Star Sports]
— Johns. (@CricCrazyJohns) August 25, 2023
- 6 hours of practice
- Payers were batting as pair: Rohit & Gill, Kohli & Iyer, Hardik & Jadeja (Around 1 hour each)
- KL Rahul batted for long time
- Sai Kishore, Kuldeep was bowling a lot to Kohli
- 10-12 net… pic.twitter.com/JngMYLH6IODay 1 practice session of the Indian team at Alur. [Star Sports]
— Johns. (@CricCrazyJohns) August 25, 2023
- 6 hours of practice
- Payers were batting as pair: Rohit & Gill, Kohli & Iyer, Hardik & Jadeja (Around 1 hour each)
- KL Rahul batted for long time
- Sai Kishore, Kuldeep was bowling a lot to Kohli
- 10-12 net… pic.twitter.com/JngMYLH6IO
ಬಿಸಿಸಿಐ ತೆಗೆದುಕೊಂಡಿರುವ ಈ ಕ್ರಮವನ್ನು ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮೆಚ್ಚಿಕೊಂಡಿದ್ದಾರೆ. 5 ರಿಂದ 15ಕ್ಕೂ ಹೆಚ್ಚು ನೆಟ್ ಬೌಲರ್ಗಳಿಗೆ ಏರಿಕೆ ಮಾಡಿರುವುದು ಉತ್ತಮ. ಇದರಿಂದ ಬ್ಯಾಟರ್ಗಳ ಬ್ಯಾಟಿಂಗ್ ಸಾಮರ್ಥ್ಯ ಹೆಚ್ಚಾಗಲಿದೆ. ವಿಶ್ವಕಪ್ ಭಾರತದಲ್ಲೇ ನಡೆಯಲಿರುವ ಹಿನ್ನೆಲೆಯಲ್ಲಿ ಇದು ಉತ್ತಮ ಕ್ರಮ ಎಂದಿದ್ದಾರೆ.
ಇದನ್ನೂ ಓದಿ: Asia Cup 2023: ಕಿಂಗ್ ಅಂಕ ಮೀರಿದ ಪ್ರಿನ್ಸ್.. ಯೋ - ಯೋ ಟೆಸ್ಟ್ನಲ್ಲಿ ಶುಭಮನ್ ಗಿಲ್ ಟಾಪರ್