ಬ್ಯಾಂಕಾಕ್: ಯೋನೆಕ್ಸ್ ಥಾಯ್ಲೆಂಡ್ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮಲೇಷ್ಯಾದ ಕಿಸೋನಾ ಸೆಲ್ವಾಡುರೈ ಅವರನ್ನು 21-15, 21-15 ಸೆಟ್‌ಗಳಿಂದ ಸೋಲಿಸಿದ ಸೈನಾ ನೆಹ್ವಾಲ್ 2ನೇ ಸುತ್ತು ಪ್ರವೇಶಿಸಿದ್ದಾರೆ.
ಟೂರ್ನಿಗೂ ಮೊದಲೇ ನಡೆಸಿದ ಕೊರೊನಾ ವರದಿಯಲ್ಲಿ ಪಾಸಿಟಿವ್ ಫಲಿತಾಂಶದಿಮದ ಆಘಾತಕ್ಕೆ ಸಿಲುಕಿದ್ದೆ. ನನಗೆ ಕಳೆದ ನವೆಂಬರ್‌ನಲ್ಲೇ ಕೊರೊನಾ ಬಂದು ಹೋಗಿದೆ, ನಾನು ಚೇತರಿಸಿಕೊಂಡಿದ್ದೇನೆ ಎಂದು ಮನದಟ್ಟು ಮಾಡಿದೆ. ವೈದ್ಯರು ಹೇಳಿದಂತೆ ಎಲ್ಲಾ ಪರೀಕ್ಷೆ ಮಾಡಿಸಿದೆ. ವೈದ್ಯರು ನೀವು ಪ್ರತಿಕಾಯಗಳನ್ನು ಹೊಂದಿದ್ದೀರಿ, ಮತ್ತು ಯಾರಿಗೂ ಸೋಂಕು ತಗುಲಿಸುವುದಿಲ್ಲ ಪಂದ್ಯದಲ್ಲಿ ಭಾಗವಹಿಸುವಂತೆ ಗ್ರೀನ್ ಸಿಗ್ನಲ್ ನೀಡಿದ್ರು ಎಂದು ತಿಳಿಸಿದ್ದಾರೆ.
"ಇಡೀ ಪ್ರಪಂಚವೇ ಕೊರೊನಾದಿಂದ ಬಳಲುತ್ತಿರುವಾಗ, ಟೂರ್ನಿಯನ್ನು ನಡೆಸಲು ಬಿಡಬ್ಲ್ಯೂಎಫ್ ಸಾಕಷ್ಟು ಶ್ರಮ ವಹಿಸಿದೆ. ಮತ್ತೆ ಸ್ಪರ್ಧಾತ್ಮ ಕ್ರೀಡೆಗೆ ಮರಳಿರುವುದು ನನಗೆ ತುಂಬಾ ಸಂತಸ ತಂದಿದೆ. ಇದು ಒಂದು ದೊಡ್ಡ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಇಂತಾ ಟೂರ್ನಿಗಾಗಿ ಶ್ರಮವಹಿಸಿದ ಥಾಯ್ಲೆಂಡ್ ಸರ್ಕಾರಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಆಟಗಾರರು ಸಹ ತುಂಬಾ ಸುರಕ್ಷಿತರಾಗಿದ್ದಾರೆ. ಎಲ್ಲವೂ ಉತ್ತಮವಾಗಿ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.