ಹೈದರಾಬಾದ್: 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಲ್ ಪದಕ ಗೆದ್ದ ನಂತರ ಭಾರತದಲ್ಲಿ ಬ್ಯಾಡ್ಮಿಂಟನ್ ಕ್ರಾಂತಿಯೇ ಸಂಭವಿಸಿದೆ. ಈ ಹಿಂದೆ ಪ್ರಕಾಶ್ ಪಡುಕೋಣೆ, ಗೋಪಿಚಂದ್ ಅವರಂತಹ ಮಹಾನ್ ಆಟಗಾರರಿದ್ದರೂ ಸೈನಾ, ಒಲಿಂಪಿಕ್ಸ್‌ನಲ್ಲಿ ಮೊದಲ ಪದಕ ಗೆದ್ದಿದ್ದು ಬ್ಯಾಡ್ಮಿಂಟನ್ ಕ್ರೀಡೆಯ ಕಡೆಗೆ ಯುವ ಪೀಳಿಗೆಯನ್ನು ಬಲವಾಗಿ ಸೆಳೆಯಿತು. ಜೊತೆಗೆ ಪೋಷಕರು ಕೂಡ ತಮ್ಮ ಮಕ್ಕಳನ್ನು ಬ್ಯಾಡ್ಮಿಂಟನ್ ಕಡೆಗೆ ಹೆಚ್ಚು ತೊಡಗಿಸಿಕೊಳ್ಳಲು ಸೈನಾ ಪರೋಕ್ಷವಾಗಿ ಕಾರಣರಾದರು.
ಸೈನಾ ಪದಕ ಗೆದ್ದ ನಂತರ ಮಾಧ್ಯಮಗಳು ಕೂಡ ಬ್ಯಾಡ್ಮಿಂಟನ್ ಕಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು. ಅದರಲ್ಲೂ ಪಿ.ವಿ ಸಿಂಧು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಪಡೆದ ಮೇಲೆ ಭಾರತದಲ್ಲಿ ಕ್ರಿಕೆಟ್ ಹೊರತುಪಡಿಸಿದರೆ ಹೆಚ್ಚು ಪ್ರಾಶಸ್ತ್ಯ ನೀಡಿದ ಎರಡನೇ ಕ್ರೀಡೆ ಬ್ಯಾಡ್ಮಿಂಟನ್ ಅಂದ್ರೆ ತಪ್ಪಾಗಲಾರದು.
ಟೋಕಿಯೋ ಒಲಿಂಪಿಕ್ಸ್ ಆರಂಭಕ್ಕೆ ಕೇವಲ ನಾಲ್ಕು ದಿನಗಳು ಬಾಕಿ ಉಳಿದಿವೆ. 2012ರಲ್ಲಿ ಕಂಚು ಗೆದ್ದಿದ್ದ ಸೈನಾ ಈ ಬಾರಿ ಕೋವಿಡ್ ಕಾರಣದಿಂದ ಟೋಕಿಯೋಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಮಾಜಿ ವಿಶ್ವದ ನಂಬರ್ 1 ಆಟಗಾರ ಕಿಡಂಬಿ ಶ್ರೀಕಾಂತ್, ಪರುಪಳ್ಳಿ ಕಶ್ಯಪ್ ಕೂಡ ಟೋಕಿಯೋಗೆ ಅರ್ಹತೆ ಪಡೆದಿಲ್ಲ. ಆದರೆ ವಿಶ್ವ ಚಾಂಪಿಯನ್ ಸಿಂಧು, ಪುರುಷರ ವಿಭಾಗದಲ್ಲಿ ಸಾಯಿ ಪ್ರಣೀತ್ ಮತ್ತು ಡಬಲ್ಸ್ನಲ್ಲಿ ಯುವ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಅರ್ಹತೆ ಪಡೆದಿದ್ದು, ಈ ಎಲ್ಲ ಉದಯೋನ್ಮುಖ ತಾರೆಯರ ಮೇಲೂ ಕೋಟ್ಯಂತರ ಭಾರತೀಯರು ಪದಕ ಭರವಸೆ ಇಟ್ಟುಕೊಂಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಭಾರತೀಯ ಸ್ಪರ್ಧಿಗಳ ಸಂಪೂರ್ಣ ವಿವರ ಇಲ್ಲಿದೆ...
ಪಿ.ವಿ ಸಿಂಧು (ಮಹಿಳೆಯರ ಸಿಂಗಲ್ಸ್)
ಮಹಿಳಾ ಬ್ಯಾಡ್ಮಿಂಟನ್ನಲ್ಲಿ ಸೈನಾ ನೆಹ್ವಾಲ್ ನಂತರ ಭಾರತದ ಧ್ರುವತಾರೆಯಾಗಿ ಮಿನುಗುತ್ತಿರುವ ಸಿಂಧು ಭಾರತಕ್ಕೆ ಟೋಕಿಯೋದಲ್ಲಿ ಪದಕ ತಂದುಕೊಡಬಲ್ಲ ಕ್ರೀಡಾಪಟುಗಳ ಸಾಲಿನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದಿರುವ ಇವರು, 2019ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನ ಗೆಲ್ಲುವ ಮೂಲಕ ಮೊದಲ ಬಾರಿಗೆ ವಿಶ್ವಚಾಂಪಿಯನ್ ಆಗಿದ್ದರು. ಪ್ರಸ್ತುತ ವಿಶ್ವದ 7ನೇ ಶ್ರೇಯಾಂಕದ ಆಟಗಾರ್ತಿಯಾಗಿದ್ದು, ಟೂರ್ನಿಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ.
ವಯಸ್ಸು: 25
ವಿಶ್ವ ಶ್ರೇಯಾಂಕ: 07
ಸಾಧಕಿಯ ಹೆಜ್ಜೆ ಗುರುತು...
ವಿಶ್ವ ಚಾಂಪಿಯನ್ಶಿಪ್
- 2019ರ ಮಹಿಳೆಯರ ಸಿಂಗಲ್ಸ್ನಲ್ಲಿ ಚಿನ್ನದ ಪದಕ
- 2017 ಮತ್ತು 2018ರಲ್ಲಿ ಬೆಳ್ಳಿ ಪದಕ
- 2013 ಮತ್ತು 2014ರಲ್ಲಿ ಕಂಚಿನ ಪದಕ
ಏಷ್ಯನ್ ಗೇಮ್ಸ್
- 2018 -ಜಕಾರ್ತದಲ್ಲಿ ಮಹಿಳೆಯರ ಸಿಂಗಲ್ಸ್ನಲ್ಲಿ ಬೆಳ್ಳಿ ಪದಕ
- 2014 -ಇಂಚಿಯಾನ್ನಲ್ಲಿ ಮಹಿಳೆಯರ ತಂಡದ ವಿಭಾಗದಲ್ಲಿ ಕಂಚಿನ ಪದಕ
ಕಾಮನ್ವೆಲ್ತ್ ಗೇಮ್ಸ್
- 2018 ಗೋಲ್ಡ್ಕಾಸ್ಟ್ - ಮಿಕ್ಸಡ್ ಡಬಲ್ಸ್ನಲ್ಲಿ ಚಿನ್ನ
- 2018- ಗೋಲ್ಡ್ ಕಾಸ್ಟ್- ಮಹಿಳೆಯರ ತಂಡದ ವಿಭಾಗದಲ್ಲಿ ಬೆಳ್ಳಿ
- 2014- ಗ್ಲಾಸ್ಗೊ ಮಹಿಳೆಯರ ವಿಭಾಗದಲ್ಲಿ ಕಂಚು
ಉಬರ್ ಕಪ್
- 2014 ಮಹಿಳಾ ತಂಡದ ವಿಭಾಗದಲ್ಲಿ ಕಂಚು
- 2016 ಮಹಿಳಾ ತಂಡದ ವಿಭಾಗದಲ್ಲಿ ಕಂಚು
ಸಾಯಿ ಪ್ರಣೀತ್( ಪುರುಷರ ಸಿಂಗಲ್ಸ್)
ಪಿ.ವಿ ಸಿಂಧು ಚಿನ್ನ ಗೆದ್ದ 2019ರ ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್ಶಿಪ್ನಲ್ಲೇ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದರು. 1983ರಲ್ಲಿ ಕನ್ನಡಿಗ ಪ್ರಕಾಶ್ ಪಡುಕೋಣೆ ನಂತರ 36 ವರ್ಷಗಳ ಬಳಿಕ ಪ್ರಣೀತ್ ಭಾರತಕ್ಕೆ 2ನೇ ವಿಶ್ವ ಚಾಂಪಿಯನ್ಶಿಪ್ ಪದಕ ತಂದುಕೊಟ್ಟಿದ್ದರು. ಇದೀಗ ಟೋಕಿಯೋದಲ್ಲಿ ಮತ್ತೊಂದು ಇತಿಹಾಸ ನಿರ್ಮಿಸುವರೇ? ಎಂದು ಕಾದು ನೋಡಬೇಕಿದೆ.
ವಯಸ್ಸು: 28
ವಿಶ್ವ ಶ್ರೇಯಾಂಕ: 15
ಸಾಧಕನ ಹೆಜ್ಜೆ ಗುರುತು..
- 2019ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ
- 2017ರ ಥಾಯ್ಲೆಂಡ್ ಓಪನ್ನಲ್ಲಿ ಚಿನ್ನ
- 2017ರ ಸಿಂಗಾಪುರ್ ಸೂಪರ್ ಸಿರೀಸ್ ಪ್ರಶಸ್ತಿ
- 2016 ಕೆನಡಾ ಓಪನ್
- 2016 ಸೌತ್ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ
- 2016ರ ಏಷ್ಯನ್ ಟೀಮ್ ಚಾಂಪಿಯನ್ಶಿಪ್ನಲ್ಲಿ ಕಂಚು
ಸಾತ್ವಿಕ್ ಸಾಯಿರಾಕ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ (ಪುರುಷರ ಡಬಲ್ಸ್)
ಭಾರತದ ಬ್ಯಾಡ್ಮಿಂಟನ್ ಕಡೆಗೆ ಒಮ್ಮೆ ತಿರುಗಿ ನೋಡಿದರೆ ಯಾರೊಬ್ಬರೂ ಡಬಲ್ಸ್ ಸ್ಪೆಷಲಿಸ್ಟ್ ಆಗಲು ಬಯಸುವುದಿಲ್ಲ. ಆದರೆ 2014ರಲ್ಲಿ ಗೋಪಿಚಂದ್ ಅಕಾಡೆಮಿ ಸೇರಿದ ಸಾತ್ವಿಕ್, ಚಿರಾಗ್ ಶೆಟ್ಟಿ ಜೊತೆಗೂಡಿ ಡಬಲ್ಸ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರಿದರು. ಈ ಜೋಡಿ 2016ರಿಂದ ಭಾರತಕ್ಕೆ ಹಲವಾರು ಪದಕಗಳನ್ನು ತಂದುಕೊಟ್ಟಿದೆ. ಚಿರಾಗ್ ಶೆಟ್ಟಿ ಜೊತೆಗೂಡಿ 2019ರಲ್ಲಿ ಥಾಯ್ಲೆಂಡ್ ಓಪನ್ ಗೆದ್ದಿರುವುದು ಇವರ ವೃತ್ತಿ ಜೀವನದ ಶ್ರೇಷ್ಠ ಸಾಧನೆ. ಈ ಜೋಡಿ ಒಲಿಂಪಿಕ್ಸ್‌ನಲ್ಲಿ ಡಾರ್ಕ್ ಹಾರ್ಸ್ ಆಗಬಹುದೆಂದು ಸಾಕಷ್ಟು ಪರಿಣಿತರು ಹೇಳುತ್ತಾರೆ.
ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ
ವಯಸ್ಸು: 20
ಶ್ರೇಯಾಂಕ: 10
ಸಾಧನೆಯ ವಿವರ..
- 2019ರ ಥಾಯ್ಲೆಂಡ್ ಓಪನ್ನಲ್ಲಿ ಚಿನ್ನದ ಪದಕ
- 2019ರ ಬ್ರೆಜಿಲ್ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಚಿನ್ನ
- 2019ರ ಫ್ರಾನ್ಸ್ ಓಪನ್ನಲ್ಲಿ ಬೆಳ್ಳಿ
ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್
- 2016 ಹೈದರಾಬಾದ್- ಚಿನ್ನದ ಪದಕ
- 2016 ಮಾರಿಷಸ್- ಚಿನ್ನ
- 2016 ಬಾಂಗ್ಲಾದೇಶ- ಚಿನ್ನ
- 2016 ಟಾಟಾ ಓಪನ್ ಇಂಡಿಯಾ ಇಂಟರ್ನ್ಯಾಷನಲ್- ಚಿನ್ನ
- 2017 ವಿಯೆಟ್ನಾಮ್- ಚಿನ್ನ
- 2016 ಚೀನಾ- ಕಂಚು
- 2020 ಮನಿಲಾ- ಕಂಚು
ಕಾಮನ್ವೆಲ್ತ್ ಗೇಮ್ಸ್
- 2018 ಮಿಕ್ಸೆಡ್ ಟೀಮ್ನಲ್ಲಿ ಚಿನ್ನ
- 2018 ಪುರುಷರ ಡಬಲ್ಸ್ನಲ್ಲಿ ಬೆಳ್ಳಿ
ಚಿರಾಗ್ ಶೆಟ್ಟಿ( ಪುರುಷರ ಡಬಲ್ಸ್):
ವಯಸ್ಸು: 23
ವಿಶ್ವ ಶ್ರೇಯಾಂಕ: 10
ಸಾಧನೆಯ ಮಾಹಿತಿ..
- 2019ರ ಥಾಯ್ಲೆಂಡ್ ಓಪನ್ನಲ್ಲಿ ಚಿನ್ನ
- 2019ರ ಬ್ರೆಜಿಲ್ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಚಿನ್ನ
- 2019ರ ಫ್ರಾನ್ಸ್ ಓಪನ್ನಲ್ಲಿ ಬೆಳ್ಳಿ
ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್
- 2016 ಹೈದರಾಬಾದ್-ಕಂಚು
- 2016 ಬಾಂಗ್ಲಾದೇಶ-ಚಿನ್ನ
- 2016 ಟಾಟಾ ಓಪನ್ ಇಂಡಿಯಾ ಇಂಟರ್ನ್ಯಾಷನಲ್-ಚಿನ್ನ
- 2017 ವಿಯೆಟ್ನಾಮ್- ಚಿನ್ನ
- 2016- ಮಾರಿಷಸ್- ಚಿನ್ನ
ಇದನ್ನೂ ಓದಿ: 20 ವರ್ಷಗಳ ನಂತರ.. ಒಲಿಂಪಿಕ್ಸ್ ಈಕ್ವೆಸ್ಟ್ರಿಯನ್‌ನಲ್ಲಿ ಬೆಂಗಳೂರಿನ ಫವಾದ್ ಮಿರ್ಜಾ ಸ್ಪರ್ಧೆ