ಕ್ವಾಲಲಾಂಪುರ್: ಕೋವಿಡ್ 19 ಸಾಂಕ್ರಾಮಿಕ ಭೀತಿಯಿಂದ ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟ(ಬಿಡಬ್ಲ್ಯೂ ಎಫ್) 2020ರ ತೈಪೆ ಓಪನ್ ಹಾಗೂ ಕೊರಿಯಾ ಓಪನ್ ಸೇರಿದಂತೆ 4 ಪ್ರಮುಖ ಟೂರ್ನಮೆಂಟ್ಗಳನ್ನು ರದ್ದುಪಡಿಸಿದೆ.
ತೈಪೆ ಓಪನ್ ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 6 ರವರೆಗೆ , ಕೊರಿಯಾ ಓಪನ್ ಸೆಪ್ಟೆಂಬರ್ 8 ರಿಂದ ಸೆಪ್ಟೆಂಬರ್ 13 ರವರೆಗೆ ನಡೆಯಬೇಕಿತ್ತು.ಆದರೆ ವಿಶ್ವೆದೆಲ್ಲೆಡೆ ಕೋವಿಡ್ 19 ಭೀತಿ ನಿಲ್ಲದ ಕಾರಣ ಟೂರ್ಮೆಂಟ್ಗಳನ್ನು ಬಿಡಬ್ಲ್ಯೂಎಫ್ ರದ್ದುಗೊಳಿಸಿದೆ. ಇದಲ್ಲದೆ ಈಗಾಗಲೆ ಚೀನಾ ಓಪನ್ (ಸೆಪ್ಟೆಂಬರ್ 15-20) ಮತ್ತು ಜಪಾನ್ ಓಪನ್ (ಸೆಪ್ಟೆಂಬರ್ 22-27) ಕೂಡ
ಆಟಗಾರರು, ಪ್ರೇಕ್ಷಕರು, ಸ್ವಯಂಸೇವಕರು ಮತ್ತು ಸದಸ್ಯ ಸಂಘಗಳ ಆರೋಗ್ಯದ ಹಿತದೃಷ್ಟಿಯಿಂದ ಟೂರ್ನಮೆಂಟ್ಗಳನಮ್ನು ರದ್ದ ಮಾಡಲಾಗುತ್ತಿದೆ ಎಂದು ಬಿಡಬ್ಲ್ಯುಎಫ್ ಪ್ರಧಾನ ಕಾರ್ಯದರ್ಶಿ ಥಾಮಸ್ ಲುಂಡ್ ಹೇಳಿದ್ದಾರೆ.
ಬ್ಯಾಡ್ಮಿಂಟನ್ ಹಿಂದಿರುಗುವಿಕೆಯನ್ನು ಎದುರು ನೋಡುತ್ತಿದ್ದ ವಿಶ್ವದಾದ್ಯಂತದ ಅನೇಕರ ನಿರಾಶೆಯನ್ನು ನಾವು ಕೂಡ ಪಾಲುದಾರರಾಗಿದ್ದೇವೆ. 2020ರ ಆವೃತ್ತಿಯ ಉಳಿದ ಭಾಗವನ್ನು ರದ್ದುಗೊಳಿಸುವುದನ್ನು ಮುಂದುವರಿಸಿದರೂ ನಮ್ಮನ್ನು ಬೆಂಬಲಿಸುತ್ತಿರುವ ಅಭಿಮಾನಿಗಳು ಹಾಗೂ ಪಾಲುದಾರರ ಬೆಂಬಲವನ್ನು ನಾವು ಪ್ರಶಂಸಿಸುತ್ತೇವೆ ಎಂದು ಲುಂಡ್ ತಿಳಿಸಿದ್ದಾರೆ.