ನವದೆಹಲಿ: ಮೇ 19ರಿಂದ 26ರವರೆಗೆ ನಡೆಯಲಿರುವ ಸುದಿರ್ಮನ್ ಕಪ್ ಮಿಕ್ಸಡ್ ಬ್ಯಾಡ್ಮಿಂಟನ್ಶಿಪ್ನಲ್ಲಿ ಭಾರತೀಯ ತಂಡಗಳ ನೇತೃತ್ವವನ್ನ ಪ್ರಸಿದ್ಧ ಆಟಗಾರರಾದ ಪಿ.ವಿ.ಸಿಂಧು, ಕೆ.ಶ್ರೀಕಾಂತ್ ಹಾಗೂ ಸೈನಾ ನೆಹ್ವಾಲ್ ವಹಿಸಿಕೊಳ್ಳಲಿದ್ದಾರೆ.
ಗೋಲ್ಡ್ ಕೋಸ್ಟ್ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದ ಚಾಂಪಿಯನ್ಶಿಪ್ನಲ್ಲಿ ಕಳೆದ ಬಾರಿ ಭಾರತೀಯ ತಂಡ ಕ್ವಾರ್ಟರ್ ಫೈನಲ್ ತಲುಪಿತ್ತು. ಈ ಬಾರಿ ಚೀನಾ - ಮಲೇಶಿಯಾದೊಂದಿಗೆ ಭಾರತ ಡಿ ಗ್ರೂಪ್ನಲ್ಲಿದ್ದು, ಈ ಗುಂಪಿನಲ್ಲಿ ಭಾರತ ನಾಕ್ಔಟ್ ತಲುಪಬೇಕಾದರೆ ಟಾಪ್ 2ರಲ್ಲಿ ಬರಲೇಬೇಕಾಗಿದೆ.
ಪುರುಷರ ತಂಡ : ಕೆ ಶ್ರೀಕಾಂತ್, ಸಮೀರ್ ವರ್ಮಾ, ಆರ್. ಸಾತ್ವಿಕ್ಸಿರಾಜ್, ಚಿರಾಗ್ ಶೆಟ್ಟಿ, ಮನು ಅತ್ರಿ, ಸುಮಿತ್ ರೆಡ್ಡಿ ಮತ್ತು ಪ್ರಣಾವ್ ಚೋಪ್ರಾ
ಮಹಿಳಾ ತಂಡ: ಪಿ.ವಿ.ಸಿಂಧು, ಸೈನಾ ನೆಹ್ವಾಲ್, ಅಶ್ವಿನಿ ಪೊನ್ನಪ್ಪ, ಎನ್.ಸಿಕ್ಕಿ ರೆಡ್ಡಿ, ಪೂರ್ವಿಶಾ ಎಸ್. ರಾಮ್, ಜೆ.ಮೇಘನಾ