ಕ್ವಾಲಾಲಂಪುರ್: ಹಾಲಿ ವಿಶ್ವಚಾಂಪಿಯನ್ ಪಿ ವಿ ಸಿಂಧು ಮಲೇಷ್ಯಾ ಮಾಸ್ಟರ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
24 ವರ್ಷದ ಪಿ ವಿ ಸಿಂಧು ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನ್ನ ಅಯಾ ಒಹೋರಿ ವಿರುದ್ಧ21-10, 21-15ರ ನೇರ ಗೇಮ್ಗಳಲ್ಲಿ ಜಯ ಸಾಧಿಸಿದರು. ವಿಶ್ವದ 6ನೇ ಶ್ರೇಯಾಂಕದಲ್ಲಿರುವ ಸಿಂಧು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ನಂಬರ್ 1 ಆಟಗಾರ್ತಿ ತಾಯ್ ತ್ಜುಂಗ್ ಯಿಂಗ್ ವಿರುದ್ಧ ಶುಕ್ರವಾರ ಸೆಣಸಾಡಲಿದ್ದಾರೆ.
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಸೈನಾ ನೆಹ್ವಾಲ್ ದಕ್ಷಿಣ ಕೊರಿಯಾದ ಶೆಟ್ಲರ್ ಆ್ಯನ್ ಶೆ ಯಂಗ್ ಅವರನ್ನು 25-23, 21-12 ರ ನೇರ ಗೇಮ್ಗಳ ಅಂತರದಿಂದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
-
Only P.V Sindhu & Saina Nehwal left in the fray as far as Indian challenge in Malaysia Masters is concerned.
— India_AllSports (@India_AllSports) January 9, 2020 " class="align-text-top noRightClick twitterSection" data="
Mouth-watering QF clashes tomorrow:
Sindhu will take on World No. 1 Tai Tzu Ying.
Saina will take on Olympic Champion Carolina Marin. #MalaysiaMastersSuper500 pic.twitter.com/D4gNGxQtWv
">Only P.V Sindhu & Saina Nehwal left in the fray as far as Indian challenge in Malaysia Masters is concerned.
— India_AllSports (@India_AllSports) January 9, 2020
Mouth-watering QF clashes tomorrow:
Sindhu will take on World No. 1 Tai Tzu Ying.
Saina will take on Olympic Champion Carolina Marin. #MalaysiaMastersSuper500 pic.twitter.com/D4gNGxQtWvOnly P.V Sindhu & Saina Nehwal left in the fray as far as Indian challenge in Malaysia Masters is concerned.
— India_AllSports (@India_AllSports) January 9, 2020
Mouth-watering QF clashes tomorrow:
Sindhu will take on World No. 1 Tai Tzu Ying.
Saina will take on Olympic Champion Carolina Marin. #MalaysiaMastersSuper500 pic.twitter.com/D4gNGxQtWv
ನಾಳೆ ರೋಚಕ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು ವಿಶ್ವದ ನಂಬರ್ ಒನ್ ಆಟಗಾರ್ತಿ ತಾಯ್ ತ್ಜುಂಗ್ ಯಿಂಗ್ ವಿರುದ್ಧ ಹಾಗೂ ಸೈನಾ ಒಲಿಂಪಿಕ್ ಚಾಂಪಿಯನ್ ಸ್ಪೇನಿನ ಕರೋಲಿನ ಮೆರಿನ್ ವಿರುದ್ಧ ಆಡಲಿದ್ದಾರೆ.
ಇನ್ನು, ಪುರುಷರ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಪ್ರಣಯ್ ರಾಯ್ ಅವರು ಜಪಾನ್ನ ನಂಬರ್ ಒನ್ ಆಟಗಾರ ಕೆಂಟೊ ಮೊಮೊಟ ವಿರುದ್ಧ 14-121, 16-21 ರಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದಾರೆ.