ETV Bharat / sports

ಥಾಮಸ್​ ಉಬರ್​ ಕಪ್​ನಲ್ಲಿ ಸ್ಪರ್ಧಿಸಲು ವಿಶ್ವಚಾಂಪಿಯನ್​ ಸಿಂಧು ಒಪ್ಪಿಗೆ - ಹಿಮಂತ್​ ಬಿಸ್ವಾ ಶರ್ಮಾ

ನಾನು ಪಿವಿ ಸಿಂಧು ಅವರನ್ನು ಭಾರತ ತಂಡಕ್ಕೆ ಸೇರಿಕೊಳ್ಳಲು ಮನವಿ ಮಾಡಿದ್ದೇನೆ. ಥಾಮಸ್​ ಉಬರ್​ ಕಪ್​ನಲ್ಲಿ ಪದಕ ಗೆಲ್ಲಲು ಉತ್ತಮ ಅವಕಾಶವಿದೆ. ನನ್ನ ಮನವಿಗೆ ಸಿಂಧು ಒಪ್ಪಿಕೊಂಡಿದ್ದು, ಅವರ ಕುಟುಂಬದ ಕಾರ್ಯಕ್ರಮವನ್ನು ಮುಂದೂಡಿದ್ದಾರೆ..

ಥಾಮಸ್​ ಉಬರ್​ ಕಪ್​
ಪಿವಿ ಸಿಂಧು
author img

By

Published : Sep 7, 2020, 9:57 PM IST

ನವದೆಹಲಿ : ವಿಶ್ವಚಾಂಪಿಯನ್​ ಹಾಗೂ ಒಲಿಂಪಿಕ್ಸ್​ ಬೆಳ್ಳಿಪದಕ ವಿಜೇತೆ ಪಿ ವಿ ಸಿಂಧು ಮುಂಬರುವ ಥಾಮಸ್​ ಉಬರ್​ ಕಪ್​ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಬ್ಯಾಡ್ಮಿಂಟನ್​ ಅಸೋಸಿಯೇಷನ್​ ಆಫ್‌​ ಇಂಡಿಯಾದ ​ ಅಧ್ಯಕ್ಷ ಹಿಮಂತ್​ ಬಿಸ್ವ ಶರ್ಮಾ ಖಚಿತಪಡಿಸಿದ್ದಾರೆ.

ಇದಕ್ಕೂ ಮೊದಲು ವೈಯಕ್ತಿಕ ಕಾರಣಗಳಿಂದ ಸಿಂಧು ಟೂರ್ನಿಯಿಂದ ಹೊರ ಹೋಗಲು ನಿರ್ಧರಿಸಿದ್ದರು. ಆದರೆ, ಶರ್ಮಾರ ಮನವಿ ಮೇರೆಗೆ ಥಾಮಸ್​ ಉಬರ್​ ಕಪ್​ನ ಭಾಗವಾಗಲು ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಪಿವಿ ಸಿಂಧು
ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು

ನಾನು ಪಿವಿ ಸಿಂಧು ಅವರನ್ನು ಭಾರತ ತಂಡಕ್ಕೆ ಸೇರಿಕೊಳ್ಳಲು ಮನವಿ ಮಾಡಿದ್ದೇನೆ. ಥಾಮಸ್​ ಉಬರ್​ ಕಪ್​ನಲ್ಲಿ ಪದಕ ಗೆಲ್ಲಲು ಉತ್ತಮ ಅವಕಾಶವಿದೆ. ನನ್ನ ಮನವಿಗೆ ಸಿಂಧು ಒಪ್ಪಿಕೊಂಡಿದ್ದು, ಅವರ ಕುಟುಂಬದ ಕಾರ್ಯಕ್ರಮವನ್ನು ಮುಂದೂಡಿದ್ದಾರೆ. ಅವರು ಭಾರತ ತಂಡದ ಭಾಗವಾಗಲಿದ್ದು, ದೇಶಕ್ಕಾಗಿ ಆಡಲಿದ್ದಾರೆ ಎಂದು ಶರ್ಮಾ ಟ್ವೀಟ್​ ಮಾಡಿದ್ದಾರೆ.

2020ರ ಥಾಮಸ್​ ಮತ್ತು ಉಬರ್​ ಕಪ್​ ಅಕ್ಟೋಬರ್​ 3ರಿಂದ 11ರವರೆಗೆ ಡೆನ್ಮಾರ್ಕ್​ನ ಆರ್ಹುಸ್​ನಲ್ಲಿ ನಡೆಯಲಿದೆ. ಪಿವಿ ಸಿಂಧು ಈಗಾಗಲೇ ತಮ್ಮ ಇತರೆ 8 ಜನ ಒಲಿಂಪಿಕ್​ ಸ್ಪರ್ಧಿಗಳ ಜೊತೆ ಪುಲ್ಲೇಲ ಗೋಪಿಚಂದ್​ ಅಕಾಡೆಮಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ಯಾಂಪ್​ನಲ್ಲಿ ತರಬೇತಿ ಶುರು ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.