ಹೈದರಾಬಾದ್: ಹಾಲಿ ಬ್ಯಾಡ್ಮಿಂಟನ್ ವಿಶ್ವಚಾಂಪಿಯನ್ ಪಿ ವಿ ಸಿಂಧು 5ನೇ ಪ್ರೋ ಕಬಡ್ಡಿ ಲೀಗ್ನ ಹರಾಜಿನಲ್ಲಿ 77 ಲಕ್ಷ ಪಡೆಯುವ ಮೂಲಕ ಅತಿ ಹೆಚ್ಚು ಹಣ ಪಡೆದ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಹೈದರಾಬಾದ್ ಹಂಟರ್ಸ್ ತಂಡ ಪಿ ವಿ ಸಿಂಧು ಅವರನ್ನು 77 ಲಕ್ಷ ನೀಡಿ ರೀಟೈನ್ ಮಾಡಿಕೊಂಡಿತು. ಮಹಿಳೆಯರ ಶ್ರೇಯಾಂಕದಲ್ಲಿ ನಂಬರ್ 1 ಆಗಿರುವ ತೈವಾನ್ನ ತಾಯ್ ತ್ಜು ಯಿಂಗ್ ಕೂಡ 77 ಲಕ್ಷ ಪಡೆದು ಸಿಂಧು ಜೊತೆಗೆ ಗರಿಷ್ಠ ಮೊತ್ತ ಪಡೆದ ಆಟಗಾರ್ತಿ ಎನಿಸಿಕೊಂಡರು. ಇವರನ್ನು ಹಾಲಿ ಚಾಂಪಿಯನ್ ಬೆಂಗಳೂರು ರ‍್ಯಾಪ್ಟರ್ಸ್ ಖರೀದಿಸಿದೆ.
ಪುರುಷರ ವಿಭಾಗದ ಸ್ಟಾರ್ ಆಟಗಾರ ಸಾಯಿ ಪ್ರಣೀತ್ 32 ಲಕ್ಷಕ್ಕೆ ಬೆಂಗಳೂರು ರ‍್ಯಾಪ್ಟರ್ ರೀಟೈನ್ ಮಾಡಿಕೊಂಡರೆ, ಡಬಲ್ಸ್ ವಿಭಾಗದ ಸ್ಟಾರ್ ಆಟಗಾರ ಸಾತ್ವಿಕ್ ಸಾಯಿರಾಜ್ 62 ಲಕ್ಷಕ್ಕೆ ಖರೀದಿಸುವ ಮೂಲಕ ಚೆನ್ನೈ ಸೂಪರ್ಸ್ಟಾರ್ಸ್ ಪ್ರಾಂಚೈಸಿ ಅಚ್ಚರಿ ಮೂಡಿಸಿದೆ. ಕಶ್ಯಪ್ 41 ಲಕ್ಷ(ಮುಂಬೈ ರಾಕೆಟ್ಸ್), ಸೌರಭ್ ವರ್ಮಾ 41ಲಕ್ಷ (ಹೈದರಾಬಾದ್ ಹಂಟರ್ಸ್) ಚಿರಾಗ್ ಶೆಟ್ಟಿ 15.50 ಲಕ್ಷ(ಪುಣೆ 7 ಆ್ಯಸೆಸ್), ಬಿ. ಸುಮಿತ್ ರೆಡ್ಡಿ 11 ಲಕ್ಷ(ಚೆನ್ನೈ ಸೂಪರ್ ಸ್ಟಾರ್ಸ್) ಪಡೆದರು. ಜೂನಿಯರ್ ಸ್ಟಾರ್ ಆಟಗಾರ ಲಕ್ಷ್ಯ ಸೇನ್ 36 ಲಕ್ಷಕ್ಕೆ ಬಿಕರಿಯಾಗುವ ಎಲ್ಲರ ಆಶ್ಚರ್ಯಕ್ಕೆ ಕಾರಣರಾದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಸೈನಾ, ಶ್ರೀಕಾಂತ್ ಮಾತ್ರ ಈ ಬಾರಿ ಬಿಡ್ನಿಂದ ದೂರ ಉಳಿದಿದ್ದಾರೆ. ಅವರು ಅಂತಾರಾಷ್ಟ್ರೀಯ ಮಟ್ಟದ ಟೂರ್ನಿಗಳ ಕಡೆಗೆ ಗಮನ ನೀಡಲು ಈ ನಿರ್ಧಾರ ಕೈಗೊಂಡಿದ್ದಾರೆ.