ETV Bharat / sports

ಮೊಮೊಟಗೆ ಕೊರೊನಾ​, ಥಾಯ್ಲೆಂಡ್​ನ ಓಪನ್​ನಿಂದ ಜಪಾನ್​ ತಂಡ ಔಟ್​ - ಯೋನೆಕ್ಸ್​ ಥಾಯ್ಲೆಂಡ್​ ಓಪನ್​

ವಿಶ್ವದ ನಂಬರ್​ ಒನ್​ ಆಟಗಾರನಾಗಿರುವ ಮೊಮೊಟ ಕಳೆದ ಜನವರಿಯಲ್ಲಿ ಮಲೇಷಿಯಾ ಮಾಸ್ಟರ್​ ಟ್ರೋಫಿ ಗೆದ್ದು ತವರಿಗೆ ಮರಳುವ ಸಂದರ್ಭದಲ್ಲಿ ಕ್ವಾಲಾ ಲಾಂಪುರ ಏರ್​ಪೋರ್ಟ್​ ಬಳಿ ಕಾರು ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದರು. ನಂತರ ಚೇತರಿಸಿಕೊಂಡಿದ್ದ ಅವರು ಬ್ಯಾಂಕಾಂಕ್​ನಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್​ಗೆ ಮರಳಲು ಎದುರು ನೋಡುತ್ತಿದ್ದರು. ಆದರೆ ಕಮ್​ಬ್ಯಾಕ್​ ಆಸೆಯನ್ನು ಕೋವಿಡ್​ ದೂರ ಮಾಡಿದೆ.

ಕೆಂಟೊ ಮೊಮೊಟಗೆ ಕೊರೊನಾ
ಕೆಂಟೊ ಮೊಮೊಟಗೆ ಕೊರೊನಾ
author img

By

Published : Jan 3, 2021, 10:30 PM IST

ನವದೆಹಲಿ: ವಿಶ್ವದ ನಂಬರ್​ ಒನ್​ ಆಟಗಾರ ಜಪಾನ್​ನ ಕೆಂಟೋ ಮೊಮೊಟ ಅವರಿಗೆ ಕೋವಿಡ್​ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿರುವುದರಿಂದ ಥಾಯ್ಲೆಂಡ್ ಓಪನ್​​ನಲ್ಲಿ ಪಾಲ್ಗೊಳ್ಳಬೇಕಿದ್ದ ಇಡೀ ಜಪಾನ್ ರಾಷ್ಟ್ರೀಯ ತಂಡ ಟೂರ್ನಿಯಿಂದ ಹೊರಗುಳಿದಿದೆ ಎಂದು ಬಿಡಬ್ಲ್ಯೂಎಫ್​ ಭಾನುವಾರ ತಿಳಿಸಿದೆ.

ವಿಶ್ವದ ನಂಬರ್​ ಒನ್​ ಆಟಗಾರನಾಗಿರುವ ಮೊಮೊಟ ಕಳೆದ ಜನವರಿಯಲ್ಲಿ ಮಲೇಷಿಯಾ ಮಾಸ್ಟರ್​ ಟ್ರೋಫಿ ಗೆದ್ದು ತವರಿಗೆ ಮರಳುವ ಸಂದರ್ಭದಲ್ಲಿ ಕ್ವಾಲಾಲಾಂಪುರ ಏರ್​ಪೋರ್ಟ್​ ಬಳಿ ಕಾರು ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡಿದ್ದರು. ನಂತರ ಚೇತರಿಸಿಕೊಂಡಿದ್ದ ಅವರು ಬ್ಯಾಂಕಾಂಕ್​ನಲ್ಲಿ ತಮ್ಮ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್​ಗೆ ಮರಳಲು ಎದುರು ನೋಡುತ್ತಿದ್ದರು. ಆದರೆ ಅವರ ಕಮ್​ಬ್ಯಾಕ್​ ಆಸೆಯನ್ನು ಕೋವಿಡ್​ ದೂರ ಮಾಡಿದೆ.

"ಜಪಾನ್‌ನ​ ವಿಶ್ವದ ನಂಬರ್​ ಒನ್​ ಆಟಗಾರ ಕೆಂಟೊ ಮೊಮೊಟ ಬ್ಯಾಂಕಾಕ್​ಗೆ ಹೊರಡುವ ಮುನ್ನ ನರಿಟಾ ವಿಮಾನ ನಿಲ್ದಾಣದಲ್ಲಿ ಕಡ್ಡಾಯವಾಗಿದ್ದ ಪಿಸಿಆರ್​ ಪರೀಕ್ಷೆಗೆ ಒಳಗಾಗಿದ್ದು, ಕೋವಿಡ್​ ಪಾಸಿಟಿವ್​ ಇರುವುದು ದೃಢಪಟ್ಟಿದೆ" ಎಂದು ಬ್ಯಾಡ್ಮಿಂಟನ್​ ಫಡರೇಶನ್​ ವರ್ಲ್ಡ್​ ಫಡರೇಶನ್​ ಮತ್ತು ಬ್ಯಾಡ್ಮಿಂಟನ್​ ಅಸೋಸಿಯೇಷನ್​ ಆಫ್​ ಥಾಯ್ಲೆಂಡ್​ ​ ಹೇಳಿಕೆ ಬಿಡುಗಡೆ ಮಾಡಿದೆ.

ಮೊಮೊಟಗೆ ಕೋವಿಡ್​ ದೃಢಪಟ್ಟ ಕಾರಣ ನಿಪ್ಪಾನ್​ ಬ್ಯಾಡ್ಮಿಂಟನ್​ ಅಸೋಸಿಯೇಷನ್​(ಎನ್​ಬಿಎ) ಯೋನೆಕ್ಸ್​ ಥಾಯ್ಲೆಂಡ್​ ಓಪನ್​ ಮತ್ತು ಟೊಯೊಟೊ ಥಾಯ್ಲೆಂಡ್ ಓಪನ್​ನಿಂದ ತಮ್ಮ ಎಲ್ಲಾ ಸಿಂಗಲ್ಸ್​ ಮತ್ತು ಡಬಲ್ಸ್​ ಆಟಗಾರ ಹೆಸರನ್ನು ಹಿಂತೆಗೆದುಕೊಂಡಿದೆ. ಎರಡು ಟೂರ್ನ್‌ಮೆಂಟ್​ಗೂ ಶೀಘ್ರದಲ್ಲಿ ಬದಲಿ ಆಟಗಾರರನ್ನು ಹೆಸರಿಸುವುದಾಗಿ ತಿಳಿಸಿದೆ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.

ಇದನ್ನು ಓದಿ: ಪದಕ ಬೇಟೆಗೆ ಥಾಯ್ಲೆಂಡ್​ಗೆ ಹೊರಟ ಸೈನಾ ತಂಡ: ಲಂಡನ್​ನಿಂದ ಹಾರಿದ ಪಿ.ವಿ.ಸಿಂಧು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.