ಹೈದರಾಬಾದ್ : ಭಾರತ ತಂಡದ 19 ವರ್ಷದ ಯುವ ಶಟ್ಲರ್ ಲಕ್ಷ್ಯ ಸೇನ್ ಬಿಡಬ್ಲ್ಯೂಎಫ್ ಶ್ರೇಯಾಂಕದಲ್ಲಿ ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಆಲ್ ಇಂಗ್ಲೆಂಡ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಲಕ್ಷ್ಯ ಸೇನ್ 5 ಸ್ಥಾನ ಮೇಲೇರಿ 23ನೇ ರ್ಯಾಂಕ್ನಲ್ಲಿದ್ದಾರೆ. ಸೀನಿಯರ್ ಶಟ್ಲರ್ಗಳಾದ ಪರುಳ್ಳಿ ಕಶ್ಯಪ್(32), ಹೆಚ್ಎಸ್ ಪ್ರಣಯ್(31) ಮತ್ತು ಸಮೀರ್ ವರ್ಮಾ(34)ಗಿಂತಲೂ ಸೇನ್ ಶ್ರೇಷ್ಠ ಶ್ರೇಯಾಂಕ ಪಡೆದಿರುವುದು ಗಮನಾರ್ಹ ಸಂಗತಿ.
-
19 yr old Lakshya Sen moves to Career Best World No. 23 (🔼 5) in latest BWF Singles rankings.
— India_AllSports (@India_AllSports) March 24, 2021 " class="align-text-top noRightClick twitterSection" data="
He is India's No. 3 shuttler now after Srikanth & Sai Praneeth. pic.twitter.com/3gKzbVqT4V
">19 yr old Lakshya Sen moves to Career Best World No. 23 (🔼 5) in latest BWF Singles rankings.
— India_AllSports (@India_AllSports) March 24, 2021
He is India's No. 3 shuttler now after Srikanth & Sai Praneeth. pic.twitter.com/3gKzbVqT4V19 yr old Lakshya Sen moves to Career Best World No. 23 (🔼 5) in latest BWF Singles rankings.
— India_AllSports (@India_AllSports) March 24, 2021
He is India's No. 3 shuttler now after Srikanth & Sai Praneeth. pic.twitter.com/3gKzbVqT4V
19 ವರ್ಷದ ಯುವ ಆಟಗಾರ ಪ್ರಸ್ತುತ ಭಾರತ 3ನೇ ಶ್ರೇಷ್ಠ ಶ್ರೇಯಾಂಕಿತ ಶಟ್ಲರ್ ಎನಿಸಿದ್ದಾರೆ. ಮಾಜಿ ನಂಬರ್ 1 ಆಟಗಾರ ಕಿಡಿಂಬಿ ಶ್ರೀಕಾಂತ್, ಸಾಯಿ ಪ್ರಣೀತ್ ಕ್ರಮವಾಗಿ 14 ಮತ್ತು 15ನೇ ಸ್ಥಾನದಲ್ಲಿದ್ದಾರೆ.
ಮಹಿಳೆಯರ ಶ್ರೇಯಾಂಕದಲ್ಲಿ ವಿಶ್ವ ಚಾಂಪಿಯನ್ ಪಿವಿ ಸಿಂಧು 7ನೇ ಶ್ರೇಯಾಂಕದಲ್ಲಿದ್ದರೆ, ಸೈನಾ ನೆಹ್ವಾಲ್ 20ನೇ ಸ್ಥಾನದಲ್ಲಿದ್ದಾರೆ. ಡಬಲ್ಸ್ನಲ್ಲಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಜೋಡಿ 10ರಲ್ಲಿದ್ದರೆ, ಮಿಶ್ರ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಸಾತ್ವಿಕ್ 20ನೇ ಶ್ರೇಯಾಂಕ ಪಡೆದಿದ್ದಾರೆ.
ಇದನ್ನು ಓದಿ:ಪೃಥ್ವಿ ಶಾ ಮ್ಯಾಚ್ ವಿನ್ನರ್, ಆದ್ರೆ ಗಿಲ್ ತಂಡದಲ್ಲಿರುವುದರಿಂದ ಮತ್ತಷ್ಟು ದಿನ ಕಾಯಲೇಬೇಕು: ಲಕ್ಷ್ಮಣ್