ಬೆಂಗಳೂರು: ಕನ್ನಡಿಗರ ಅಚ್ಚುಮೆಚ್ಚಿನ 'ವಿಕೇಂಡ್ ವಿಥ್ ರಮೇಶ್' ಕಾರ್ಯಕ್ರಮ ಈ ವಾರ ಪ್ರಸಾರವಾಗುವುದಿಲ್ಲ. ಬದಲಾಗಿ ಅನ್ಯಕಾರ್ಯಕ್ರಮಗಳ ಪ್ರಸಾರ ಮಾಡಲಾಗುತ್ತಿದೆ.
ಕಳೆದ ಬಾರಿಯಂತೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9.30ಕ್ಕೆ ಮನೆ ಮಂದಿಯೆಲ್ಲ ಟಿವಿ ಮುಂದೆ ಕುಳಿತು, ವಿಕೇಂಡ್ ಟೆಂಟ್ಲ್ಲಿ ಬರೋ ಸಾಧಕರ ಸಾಹಸಗಾಥೆಯನ್ನು ಕಣ್ತುಂಬಿಕೊಳ್ಳುತ್ತಾರೆ. ಆದರೆ, ಈ ವಾರ ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಕೊಂಚ ಬ್ರೇಕ್ ಹಾಕಲಾಗಿದೆ. ಅಷ್ಟಕ್ಕೂ ಝೀ ವಾಹಿನಿಯ ಈ ನಿರ್ಧಾರಕ್ಕೆ ಮುಖ್ಯ ಕಾರಣ ಏನು ಅಂತೀರಾ ?
ಶನಿವಾರ 'ಸರಿಗಮಪ ಸೀಸನ್ 16' ಕಾರ್ಯಕ್ರಮದ ಮಹಾ ಸಂಚಿಕೆ ಪ್ರಸಾರವಾಗುತ್ತಿದೆ. ಭಾನುವಾರ ಪುನೀತ್ ರಾಜ್ ಕುಮಾರ್ ನಟನೆಯ 'ನಟಸಾರ್ವಭೌಮ' ಸಿನಿಮಾ ಪ್ರಸಾರ ಮಾಡಲಾಗುತ್ತಿದೆ. ಅಂದು ಸಂಜೆ 7 ಗಂಟೆಯಿಂದ 'ನಟ ಸಾರ್ವಭೌಮ' ಪ್ರಾರಂಭವಾಗಲಿದೆ. ಮೊದಲ ಬಾರಿಗೆ ಈ ಚಿತ್ರ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದ್ದು, ಜಾಹಿರಾತುಗಳ ಸಂಖ್ಯೆ ಜಾಸ್ತಿ ಇರುತ್ತದೆ. ಈ ಹಿನ್ನೆಲೆ ರಾತ್ರಿ 10 ಗಂಟೆಗೆ ನಟಸಾರ್ವಭೌಮ ಚಿತ್ರಕ್ಕೆ ಶುಭಂ ಹೇಳಬಹುದು. ಹೀಗಾಗಿ, ವಿಕೇಂಡ್ ವಿಥ್ ರಮೇಶ್' ಕಾರ್ಯಕ್ರಮಕ್ಕೆ ಮಧ್ಯಂತರ ತಡೆ ನೀಡಲಾಗಿದೆಯಂತೆ.
ಮುಂದಿನ ವಾರ ಅಂದರೆ ಜೂನ್ 1 ಮತ್ತು 2 ರಂದು ವಿಕೇಂಡ್ ವಿಥ್ ಕಾರ್ಯಕ್ರಮ ಮತ್ತೆ ಶುರುವಾಗಲಿದೆ. ಆ ವಾರ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಸಾಧಕರ ಸೀಟಿನ ಮೇಲೆ ಕುಳಿತುಕೊಳ್ಳಲಿದ್ದಾರೆ.