ETV Bharat / sitara

ಮಿಸ್​ ಇಂಡಿಯಾ ಯುಎಸ್​ಎ -2021: ಪ್ರಶಸ್ತಿ ಮುಡಿಗೇರಿಸಿಕೊಂಡ ವೈದೇಹಿ - Michigan

25 ವರ್ಷದ ವೈದೇಹಿ ಡೊಂಗ್ರೆ ಅವರು ಮಿಸ್​ ಇಂಡಿಯಾ ಯುಎಸ್​ಎ-2021 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ

Vaidehi Dongre
ಪ್ರಶಸ್ತಿ ಮುಡಿಗೇರಿಸಿಕೊಂಡ ವೈದೇಹಿ
author img

By

Published : Jul 20, 2021, 9:14 AM IST

ವಾಷಿಂಗ್ಟನ್: ಮಿಚಿಗನ್​ನಲ್ಲಿ ನೆಲೆಸಿರುವ ವೈದೇಹಿ ಡೊಂಗ್ರೆ ಅವರು ಮಿಸ್​ ಇಂಡಿಯಾ ಯುಎಸ್​ಎ - 2021 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಜಾರ್ಜಿಯಾದ ಅರ್ಷಿ ಲಾಲಾನಿ ಪ್ರಥಮ ರನ್ನರ್ ಅಪ್ ಆಗಿ ಆಯ್ಕೆಯಾದರು.

25 ವರ್ಷದ ವೈದೇಹಿ ಮಿಚಿಗನ್ ವಿಶ್ವವಿದ್ಯಾಲಯದಿಂದ ಪದವಿ ಶಿಕ್ಷಣ ಪಡೆದಿದ್ದಾರೆ. ಇದೀಗ ಪಡೆದು ಪ್ರಮುಖ ನಿಗಮದೊಂದಿಗೆ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಅವರು, "ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ, ಸಾಕ್ಷರತೆಯತ್ತ ಗಮನ ಹರಿಸಲು ನಾನು ಬಯಸುತ್ತೇನೆ" ಎಂದು ವೈದೇಹಿ ಹೇಳಿದರು. ಭಾರತೀಯ ಶಾಸ್ತ್ರೀಯ ನೃತ್ಯ ಕಥಕ್ ಪರಿಣಿತಿ ಹೊಂದಿದ್ದು, 'ಮಿಸ್ ಟ್ಯಾಲೆಂಟೆಡ್' ಪ್ರಶಸ್ತಿ ಗೆದ್ದಿದ್ದಾರೆ.

ಇನ್ನು 20 ವರ್ಷದ ಲಾಲಾನಿ ಎಂಬವರು ಮೊದಲ ರನ್ನರ್​ ಅಪ್​ ಆಗಿ ಹೊರಹೊಮ್ಮಿದ್ದಾರೆ. ಆದರೆ, ಆಕೆ ಮೆದುಳಿನ ಕ್ಯಾನ್ಸರ್​ನಿಂದ ಬಳಲುತ್ತಿದ್ದಾಳೆ ಎಂದು ತಿಳಿದು ಬಂದಿದೆ. ಅಂತೆಯೇ ಉತ್ತರ ಕೆರೊಲಿನಾದ ಮೀರಾ ಕಸಾರಿ ಅವರನ್ನು ಎರಡನೇ ರನ್ನರ್ ಅಪ್ ಎಂದು ಘೋಷಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.