ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನರನ್ನು ರಂಜಿಸುತ್ತಿರುವ ಉದಯ ಟಿವಿ ಇದೀಗ ಎರಡು ಹೊಸ ಧಾರಾವಾಹಿಗಳನ್ನು ಆರಂಭಿಸುತ್ತಿದೆ. ಇವು ಕೂಡಾ ಡಬ್ಬಿಂಗ್ ಧಾರಾವಾಹಿಗಳು. ಅಲ್ಲದೆ ಇವು ಭಕ್ತಿಪ್ರಧಾನ ಧಾರಾವಾಹಿಗಳು.

ಬೆಳಗಿನಿಂದ ಸಂಜೆವರೆಗೆ ರಿಯಾಲಿಟಿ ಶೋ, ಧಾರಾವಾಹಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಉದಯ ಟಿವಿ ಕೂಡಾ ಲಾಕ್ಡೌನ್ ಸಮಯದಲ್ಲಿ ಡಬ್ಬಿಂಗ್ ಧಾರಾವಾಹಿಗಳನ್ನು ಪ್ರಸಾರ ಮಾಡಿತ್ತು. ಇದೀಗ ವೀಕ್ಷಕರಿಗಾಗಿ ಎರಡು ಭಕ್ತಿಪ್ರಧಾನ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. 'ದೇವಿ ಆದಿಪರಾಶಕ್ತಿ' ಹಾಗೂ 'ಜೈ ಭಜರಂಗಿ' ಧಾರಾವಾಹಿಗಳು ಉದಯ ವಾಹಿನಿ ತಂಡವನ್ನು ಸೇರುತ್ತಿವೆ. ಸಾಮಾನ್ಯವಾಗಿ ಧಾರಾವಾಹಿಗಳು ಸಂಜೆ ವೇಳೆ ಪ್ರಸಾರವಾಗಲಿದ್ದು ಬೆಳಗಿನ ಜಾವ ಮರುಪ್ರಸಾರ ಕಾಣುತ್ತವೆ. ಆದರೆ ಉದಯ ಟಿವಿ ಹೊಸ ಪ್ರಯೋಗ ಮಾಡಲು ಹೊರಟಿದ್ದು ಈ ಎರಡು ಹೊಸ ಧಾರಾವಾಹಿಗಳನ್ನು ಮಧ್ಯಾಹ್ನದ ಸಮಯದಲ್ಲಿ ಪ್ರಸಾರ ಮಾಡಲು ನಿರ್ಧರಿಸಿದೆ.

ಶಕ್ತಿರೂಪಿಣಿ ಜಗನ್ಮಾತೆಯ ಪುರಾಣ 'ದೇವಿ ಆದಿಪರಾಶಕ್ತಿ' ಹಾಗೂ ಮಧ್ಯಾಹ್ನ 12.30ಕ್ಕೆ ರಾಮಭಕ್ತನ ಹನುಮಂತನ ಕಥಾಸಾಗರ 'ಜೈ ಭಜರಂಗಿ' ಧಾರಾವಾಹಿಗಳು ಪ್ರಸಾರವಾಗಲಿದೆ. ಸೆಪ್ಟೆಂಬರ್ 21 ರಿಂದ ಈ ಧಾರಾವಾಹಿಗಳು ಸೋಮವಾರದಿಂದ ಶನಿವಾರದವರೆಗೂ ಪ್ರಸಾರವಾಗಲಿದೆ.
